Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ. ಎಲ್ಲ ಸಚಿವರ ಭೇಟಿ ಯಶಸ್ವಿಯಾಗಿದೆ. ರಿಂಗ್ ರೋಡ್ ದಾಬಸ್ ಪೇಟೆಯಿಂದ ಮೈಸೂರು ರೋಡ್ ಯೋಜನೆ ಎರಡು ಮೂರು ವರ್ಷಗಳಿಂದ ನೆನೆಗುದಿಗೆ ಬಿದಿತ್ತು, ಅದನ್ನು ಕ್ಲಿಯರ್ ಮಾಡಿಸಿ ಮುಂದುವರೆಯಲಿದೆ. 5 -6 ತಿಂಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ. ರಾಜ್ಯದ ನಾಲ್ಕೈದು ಹೈವೆಗಳಿಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದರು.
Related Articles
Advertisement
ನಿಫಾ ವೈರಸ್ ವಿಚಾರವಾಗಿ ಮಾತಾನಾಡಿದ ಸಿಎಂ, ನಿಫಾ ವೈರಸ್ ಬಗ್ಗೆ ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಕೇರಳದಿಂದ ನಮಗೆ ಏನೂ ಸಮಸ್ಯೆ ಆಗಬಹುದು. ಅದನ್ನ ಹೇಗೆ ತಡೆಯಬಹುದೆಂದು ಚರ್ಚೆಯಾಗಿದೆ. ಇಂದು ಸಂಜೆ ಮತ್ತೆ ವರದಿ ತರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕ್ಯಾಬಿನೆಟ್ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಕ್ಯಾಬಿನೆಟ್ ವಿಸ್ತರಣೆ ಚರ್ಚೆಯಾಗಿಲ್ಲ. ಪಕ್ಷ ಸಂಘಟನೆ ಬಗ್ಗೆ ಗಮನ ಕೊಡಲು ಸೂಚನೆ ನೀಡಿದ್ದಾರೆ. ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ಚರ್ಚೆ ಆಗಿಲ್ಲ ಎಂದರು.