Advertisement
ಆಡಳಿತಾಧಿಕಾರಿಗಳಾಗಿ ನ್ಯಾಯಪೀಠ ನಿಯೋಜಿತ ತಂಡ ಜವಾಬ್ದಾರಿ ವಹಿಸಿಕೊಂಡಾಗ ಕೂಟದ ಸಂಘಟನೆಯನ್ನು ತಡೆಯಲು ಕೆಲವರು ಯತ್ನಿಸಿದ್ದರು. ಕೆಲ ಪ್ರಾಯೋಜಕರನ್ನು ಸಂಪರ್ಕಿಸಿ ಬಿಡ್ ಸಲ್ಲಿಸದಂತೆ ತಡೆಯಲೂ ಯತ್ನಿಸಿದ್ದರು ಎಂದು ಹೇಳಿದ್ದಾರೆ. ಆದರೆ ಐಪಿಎಲ್‌ನಂತಹ ಯಶಸ್ವಿ ಕ್ರೀಡಾ ಕೂಟ ಹಾಳಾಗಬಾರದು, ಅದು ಚೆನ್ನಾಗಿಯೇ ನಡೆಯಬೇಕು. ಇದುವರೆಗೆ ಐಪಿಎಲ್ ಸಂಘಟಿಸಲು ಯಾರ್ಯಾರು ಹೋರಾಡಿದ್ದಾರೋ ಅವರಿಗೆಲ್ಲ ಧನ್ಯ ವಾದಗಳು ಎಂದು ಲಿಮಯೇ ಹೇಳಿದ್ದಾರೆ.
ಇತ್ತೀಚೆಗೆ ಬಿಸಿಸಿಐ ಆಡಳಿತಾಧಿಕಾರಿ ಸ್ಥಾನಕ್ಕೆ ಖ್ಯಾತ ಲೇಖಕ ರಾಮಚಂದ್ರ ಗುಹಾ ರಾಜೀನಾಮೆ ನೀಡಿದ್ದರು. ಆ ವೇಳೆ ಬಿಸಿಸಿಐ ನಿಲುವುಗಳ ವಿರುದ್ಧ ಕಿಡಿಕಾರಿದ್ದರು. ಇದೀಗ ಭಾರತ ಕ್ರಿಕೆಟ್‌ನ ಮಾಜಿ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಜಹೀರ್ ಖಾನ್‌ರನ್ನು
ನಡೆಸಿಕೊಳ್ಳುತ್ತಿರುವ ರೀತಿಗೆ ಆಕ್ರೋಶಗೊಂಡಿದ್ದಾರೆ. ಮಾಜಿ ಕೋಚ್ ಅನಿಲ್ ಕುಂಬ್ಳೆಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಈಗ ಕ್ರಿಕೆಟ್‌ನ ನೈಜ ಸಾಧಕರಾದ ದ್ರಾವಿಡ್, ಜಹೀರ್‌ಗೂ ಅವಮಾನ ಮಾಡಲಾಗುತ್ತಿದೆ. ಇದು ಸರ್ವಥಾ ಸರಿಯಲ್ಲ
ಎಂದು ಸುಪ್ರೀಂ ನಿಯೋಜಿತ ಆಡಳಿತಾಧಿಕಾರಿಗಳ ವಿರುದ್ಧವೂ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಬಿಸಿಸಿಐ ಸಲಹಾ ಸಮಿತಿ ರವಿಶಾಸ್ತ್ರಿಯನ್ನು ಕೋಚ್ ಆಗಿ ನೇಮಿಸಿದ ನಂತರ ಜಹೀರ್, ದ್ರಾವಿಡ್‌ರನ್ನು ಬೌಲಿಂಗ್ ಮತ್ತು ಬ್ಯಾಟಿಂಗ್ ಕೋಚ್ ಎಂದು
ಹೆಸರಿಸಿತ್ತು. ಇದನ್ನು ಸುಪ್ರೀಂ ನಿಯೋಜಿತ ಆಡಳಿತಾಧಿಕಾರಿಗಳು ಮಾನ್ಯ ಮಾಡಿರಲಿಲ್ಲ. ಬದಲಿಗೆ ಸಚಿನ್, ಸೌರವ್, ಲಕ್ಷ್ಮಣ್ ನೇತೃತ್ವದ ಸಲಹಾ ಸಮಿತಿ ತನ್ನ ಅಧಿಕಾರ ಮೀರಿ ನಡೆದಿದೆ ಎಂದು ಹೇಳಿತ್ತು.