ಭಾಲ್ಕಿ: ಭಾರತೀಯ ಬೌದ್ಧ ಮಹಾಸಭೆಯಲ್ಲಿ ಯಾವುದೇ ತರಹದ ಅವ್ಯವಹಾರ ನಡೆದಿಲ್ಲ. ನಡೆಯುವುದಕ್ಕೆ ಆಸ್ಪದವೂ ಕೊಡುವುದಿಲ್ಲ ಎಂದು ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ವಿಜಯಕುಮಾರ ಗಾಯಕವಾಡ ಹೇಳಿದರು.
ಪಟ್ಟಣದ ಭಾರತೀಯ ಬೌದ್ಧ ಮಹಾಸಭೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಪಟ್ಟಭದ್ರ ಹಿತಾಸಕ್ತಿಯವರು ಬೌದ್ಧ ಮಹಾಸಭೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡಿ, ಬೌದ್ಧ ಮಹಾಸಭೆಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮಹಾಸಭೆ ಪದಾಧಿಕಾರಿಗಳ ಪಟ್ಟಿಯಿಂದ ತೆಗೆದು, ಸಮಾಜಕ್ಕಾಗಿ ಕೆಲಸ ಮಾಡುವ ಒಳ್ಳೆಯವರನ್ನು ಸೇರಿಸಿಕೊಳ್ಳಲಾಗುವುದು ಎಂದರು.
ಸಂಸ್ಥೆ ಪ್ರಧಾನ ಕಾರ್ಯದರ್ಶಿ ಓಂಕಾರ ಮೋರೆ ಮಾತನಾಡಿ, ಬೌದ್ಧ ಮಹಾಸಭೆ ಡಾ| ಬಿ.ಆರ್. ಅಂಬೇಡ್ಕರ್ ಕಟ್ಟಿ ಬೆಳೆಸಿದ ಸಂಸ್ಥೆ. ಇದರಲ್ಲಿ ಯಾವುದೇ ಅವ್ಯವಹಾರ ಆಗುವುದಕ್ಕೆ ನಾವು ಬಿಡುವುದಿಲ್ಲ. ಆದರೆ ಇಲ್ಲಿಯ ಉತ್ತಮ ಬೆಳವಣಿಗೆ ಸಹಿಸದ ಕೆಲವು ವ್ಯಕ್ತಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ ಎಂದರು.
ಸಂಸ್ಥೆ ಮಾಜಿ ಅಧ್ಯಕ್ಷ ವಿಸಾಲ ಮೋರೆ ಮಾತನಾಡಿ, ಆದಷ್ಟು ಬೇಗ ಬೌದ್ಧ ವಿಹಾರದ ನಿರ್ಮಾಣ ಕಾರ್ಯ ಎಲ್ಲರೂ ಸೇರಿ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಜೀವಕುಮಾರ ಭಾವಿಕಟ್ಟೆ, ಶಿವಕುಮಾರ ಮೇತ್ರೆ, ಮಾರುತಿ ಭಾವಿಕಟ್ಟೆ, ಕೈಲಾಸ ಭಾವಿಕಟ್ಟೆ, ನಾರಾಯಣ ಮೋರೆ, ಸಂಜುಕುಮಾರ ಲಾಮಲೆ, ಅಶೋಕ ಗಾಯಕವಾಡ, ಅಶೋಕ ಭಾವಿಕಟ್ಟೆ, ಜೈಪಾಲ ಬೋರಾಳೆ, ಅನೀಲಕುಮಾರ ಸೂರ್ಯವಂಶಿ, ಉದಯ ಕುಂದೆ, ರಾಜಕುಮಾರ ದಂಡೆ, ರಾಜಕುಮಾರ ಬೌದ್ಧೆ, ಸುನೀಲ ನಾಟೇಕರ, ಪುಟ್ಟರಾಜ ಡಿ, ಭರತ ನಾಟೇಕರ ಸೇರಿದಂತೆ ಇತರರು ಇದ್ದರು.