Advertisement

ಧರ್ಮ ಒಡೆಯುವ ಉದ್ದೇಶವಿರಲಿಲ್ಲ: ರಂಭಾಪುರಿ ಶ್ರೀಗಳ ಬಳಿ ಸಿದ್ದರಾಮಯ್ಯ ಪಶ್ಚಾತ್ತಾಪ

06:20 PM Aug 19, 2022 | Team Udayavani |

ಚಿಕ್ಕಮಗಳೂರು : ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದರು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಾಳೆ ಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಬಳಿ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ.

Advertisement

ಚಿಕ್ಕಮಗಳೂರು ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ವೀರಸಿಂಹಾಸನ ಮಹಾ ಸಂಸ್ಥಾನ ಪೀಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಸಿದ್ದರಾಮಯ್ಯ ಆಶೀರ್ವಾದ ಪಡೆದರು. ಭೇಟಿಯ ಬಳಿಕ ಸುದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯನವರು ಇಂದು ಮೊತ್ತ ಮೊದಲ ಬಾರಿಗೆ ಪೀಠಕ್ಕೆ ಆಗಮಿಸಿ ಆಶೀರ್ವಾದ ಪಡೆದರು. ಮನಸ್ಸಿನಲ್ಲಿರುವ ದುಗುಡವನ್ನು ಪ್ರಾಂಜಲ ಮನಸ್ಸಿನಿಂದ ನಮ್ಮೆದುರಿಗೆ ಬಿಚ್ಚಿ ಮಾತನಾಡಿದರು. ಖಂಡಿತವಾಗಿ ಪಶ್ಚತ್ತಾಪವಾಗಿದೆ. ಧರ್ಮದ ವಿಚಾರದಲ್ಲಿ ನಾನೆಂದೂ ಪ್ರವೇಶ ಮಾಡುವುದಿಲ್ಲ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿಚಾರದ ಕುರಿತು ಹೇಳಿದ್ದಾರೆ ಎಂದು ತಿಳಿಸಿದರು.

ಇನ್ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ, ರಾಜ್ಯ, ಜನರ ಅಭಿವೃದ್ದಿ ಬಗ್ಗೆ ಆಧ್ಯತೆ ನೀಡುತ್ತೇನೆ. ಬಹಳದಿನಗಳಿಂದ ಪೀಠಕ್ಕೆ ಭೇಟಿ ನೀಡುವ ಬಯಕೆ ಇತ್ತು, ಆದರೆ ಇವತ್ತು ಕೂಡಿ ಬಂದದ್ದು ನನ್ನ ಪುಣ್ಯ ಎಂದಿದ್ದಾರೆ. ರಾಜಕೀಯ ವಿಚಾರ ಪ್ರಸ್ತಾಪವಾಗಲಿಲ್ಲ ಎಂದು ಶ್ರೀಗಳು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next