Advertisement

ಹೈಟೆಕ್‌ ದಾಳಿಗೆ ನಡೆದಿತ್ತು ಸಂಚು!- ಶಂಕಿತರಿಂದ 26/11ಕ್ಕಿಂತಲೂ ಭೀಕರ ಕೃತ್ಯಕ್ಕೆ ತಯಾರಿ

12:30 AM Aug 02, 2023 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ರಾಜಸ್ಥಾನದಲ್ಲಿ ಪುಣೆ ಉಗ್ರ ನಿಗ್ರಹ ದಳದಿಂದ ಬಂಧಿತರಾದ ಇಬ್ಬರು ಐಸಿಸ್‌ ಶಂಕಿತರು ತಂತ್ರಜ್ಞಾನವನ್ನು ಬಳಸಿಕೊಂಡು ಮಹಾರಾಷ್ಟ್ರದ ವಿವಿಧೆಡೆ 26/11ಕ್ಕಿಂತಲೂ ದೊಡ್ಡಮಟ್ಟದ ದಾಳಿ ನಡೆಸಲು ಸಂಚು ರೂಪಿಸಿದ್ದರು!

Advertisement

ಉನ್ನತ ಗುಪ್ತಚರ ಮೂಲಗಳು ಇಂಥದ್ದೊಂದು ಆಘಾತಕಾರಿ ಮಾಹಿತಿ ನೀಡಿವೆ. ಜು.18ರಂದು ಪುಣೆ ಎಟಿಎಸ್‌ ಐಸಿಸ್‌ ಶಂಕಿತ ರಾದ ಮೊಹಮ್ಮದ್‌ ಇಮ್ರಾನ್‌ ಮತ್ತು ಮೊಹಮ್ಮದ್‌ ಯೂನುಸ್‌ನನ್ನು ಬಂಧಿಸಿತ್ತು. ಅನಂತರ ಕಳೆದ ಶುಕ್ರವಾರ ಸಿಮಾಬ್‌ ನಸರು ದ್ದೀನ್‌ ಖಾಜಿ ಎಂಬಾತನನ್ನು ರತ್ನಗಿರಿಯಲ್ಲಿ ಬಂಧಿಸಲಾಗಿತ್ತು.

ಉಗ್ರರ ಟಾರ್ಗೆಟ್‌ ಏನೇನಾಗಿತ್ತು?: ಈ ಪೈಕಿ ಇಮ್ರಾನ್‌ ಮತ್ತು ಯೂನುಸ್‌ ಮುಂಬಯಿಯ ಛಾಬಾದ್‌ ಹೌಸ್‌, ಕೊಲಾಬಾ ಕೊಳಗೇರಿ ಸಮೀಪದಲ್ಲಿನ ನೌಕಾ ಹೆಲಿಪ್ಯಾಡ್‌ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಗುರುತಿಸಿ, ಮಾಹಿತಿ ಸಂಗ್ರಹಿಸಿದ್ದರು. ಜತೆಗೆ, ಜನ ಸಂದಣಿ ಹೆಚ್ಚಿರುವಂಥ ಮುಂಬಯಿಯ ಪ್ರಮುಖ ದೇವಾಲಯಗಳನ್ನೂ ಟಾರ್ಗೆಟ್‌ ಮಾಡಲು ಯೋಜಿಸಿದ್ದರು. ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವಂಥ ಜಲವಿದ್ಯುತ್‌ ಯೋಜನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲೂ ಇವರು ಸಂಚು ರೂಪಿಸಿದ್ದರು. ಕೊಲಾಬಾ ಪ್ರದೇಶದ ಹಲವು ಫೋಟೋಗಳನ್ನು ಸೆರೆಹಿಡಿದಿದ್ದರು.

ವಿಐಪಿಗಳ ಚಲನವಲನಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದರು ಎಂಬುದು ಅವರ ಲ್ಯಾಪ್‌ಟಾಪ್‌ನಲ್ಲಿನ ದತ್ತಾಂಶಗಳಿಂದ ತಿಳಿದುಬಂದಿದೆ. ಇವರ ಈ ಸಂಚು ಇನ್ನೂ ಆರಂಭಿಕ ಹಂತದಲ್ಲಿದ್ದ ಕಾರಣ, ಸರಿಯಾದ ಸಮಯಕ್ಕೇ ಶಂಕಿತರನ್ನು ಬಂಧಿಸುವಲ್ಲಿ ಎಟಿಎಸ್‌ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next