ಮಹಾನಗರ: ಯುನಿವೆಫ್ ಎಜುಕೇಶನ್ ಫೋರಮ್ ಇದರ ವತಿಯಿಂದ “ಮಾನವ ಸಮಾಜ, ಸಂಸ್ಕೃತಿ ಮತ್ತು ನಮ್ಮ ನಿಲುವು’ ಎಂಬ ವಿಷಯದಲ್ಲಿ “ಶಿಕ್ಷಕರೊಂದಿಗೆ ವಿಚಾರ ವಿನಿಮಯ’ ಕಾರ್ಯಕ್ರಮ ಬಲ್ಮಠ ಮಿಶನ್ ಕಾಂಪೌಂಡ್ ನಲ್ಲಿರುವ ಸಹೋದಯ ಹಾಲ್‌ನಲ್ಲಿ ನಡೆಯಿತು.
ಅಶೋಕನಗರದ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರು ಮಾತನಾಡಿ, ಮನುಷ್ಯನಲ್ಲಿ ಮಾನವೀ ಯನ್ನು ಕಾಣಬೇಕಾದರೆ ಹೃದಯ ವಂತಿಕೆ ಇರಬೇಕು. ಪರಂಪರಾಗತ ಮೌಲ್ಯಗಳನ್ನು ಧಿಕ್ಕರಿಸಿ ಏಕಾಂಗಿಯಾದ ವ್ಯವಸ್ಥೆಯ ಕುತಂತ್ರಕ್ಕೆ ಸುಲಭದಲ್ಲಿ ಬಲಿಯಾಗುತ್ತಾನೆ ಎಂದು ಹೇಳಿದರು.
ಕಾವೂರು ಸ. ಪ್ರ. ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ| ಲೂಯಿಸ್ ಮನೋಜ್ ಮಾತನಾಡಿ, ವಿದ್ಯಾಲಯಗಳು ಕೇವಲ ಔಪಚಾರಿಕ ಶಿಕ್ಷಣ ಕಲಿಯಲು ಮಾತ್ರವಲ್ಲ. ಬದಲಾಗಿ ಶಿಸ್ತು, ಸಂಯಮ, ಸಹಬಾಳ್ವೆಯ ಶಿಕ್ಷಣವೂ ಅಲ್ಲಿಂದಲೇ ಪ್ರಾರಂಭವಾಗುತ್ತದೆ ಎಂದರು.
ಒಳಿತಿನ ವಾಹಕರಾಗಿ ಕೊಣಾಜೆ ಪಿ.ಎ. ಎಂಜಿನಿಯರಿಂಗ್ ಕಾಲೇಜ್‌ನ ಸಹಾಯಕ ಪ್ರಾಧ್ಯಾಪಕರಾದ ಪ್ರೊ| ಮುಹಮ್ಮದ್ ಸೈಫುದ್ದೀನ್ ಮಾತನಾಡಿ, ಒಳಿತು ಕೆಡುಕುಗಳ ಮಧ್ಯದ ಅಂತರ ಕ್ಷೀಣವಾದಾಗ ಸಮಾಜದಲ್ಲಿ ಕ್ಷೋಭೆ ಉಂಟಾಗುತ್ತದೆ. ನಾವು ಒಳಿತಿನ ವಾಹಕರಾಗಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ದಾರುಲ್ ಇಲ್ಮ್ನ ಪ್ರಾಂಶುಪಾಲ ರಫೀಉದ್ದೀನ್ ಕುದ್ರೋಳಿ ಅವರು ಸಮಾನತೆ ಇಲ್ಲದ ಸಮಾಜದಲ್ಲಿ ಸಾಮಾಜಿಕ ನ್ಯಾಯ ನಿರಾಕರಿಸಲ್ಪಡುತ್ತದೆ. ಇಂಥ ಸಮಾಜದಲ್ಲಿ ವಿದ್ಯಾವಂತರೂ ಕೋಮುವಾದದ ವಾಹಕರಾಗಿ ವ್ಯವಸ್ಥೆ ಯನ್ನು ಇನ್ನಷ್ಟು ಜಟಿಲಗೊಳಿಸುತ್ತಾರೆ ಎಂದು ಹೇಳಿದರು. ಸಂಚಾಲಕ ಯು.ಕೆ. ಖಾಲಿದ್ ಅವರು ವಿಷಯ ಮಂಡನೆ ಮಾಡಿ ಕಾರ್ಯಕ್ರಮ ಸಂಯೋಜನೆ ಮಾಡಿದರು. ಜಿಲ್ಲಾಧ್ಯಕ್ಷ
ನೌಫಲ್ ಹಸನ್ ಕಿರ್ ಅತ್ ಅವರು ಪಠಿಸಿದರು.
ಪಾರಂಪರಿಕ ಮೌಲ್ಯ ಉಳಿಸಿ
ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ| ಹೈದರಾಲಿ ಮಾತನಾಡಿ, ಜಾಗತೀಕರಣವು ಸಂಸ್ಕೃತಿಯ ಕೊಡುಕೊಳ್ಳುವಿಕೆಗೆ ಹೇತುವಾದರೂ ಪಾರಂಪರಿಕ ಮೌಲ್ಯ ಗಳನ್ನು ಜೀವಂತವಿಟ್ಟಾಗ ಮಾತ್ರ ಸಹ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.