Advertisement
ಸೋಲಾರ್ ಬಳಸಿ ಬೋರ್‌ವೆಲ್ ಮುಖಾಂತರ ನೀರು ತುಂಬಿಸುವ ಯತ್ನದ ನಡುವೆಯೂ ಕೆರೆ – ಕಟ್ಟೆಗಳು ಬರಿದಾಗುತ್ತಿವೆ. ಅರಣ್ಯದ ಗಿಡಮರಗಳು ಒಣಗಿ ನಿಂತಿವೆ, ಈಗಾಗಲೇ ಬಿರು ಬೇಸಿಗೆ ಆರಂಭವಾಗಿದ್ದು, ನಾಗರಹೊಳೆಯಲ್ಲಿ ಅಧಿಕಾರಿಗಳು ಸೇರಿದಂತೆ 386 ಸಿಬ್ಬಂದಿ ಇರಬೇಕಿತ್ತು. ಆದರೆ 132 ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಕಷ್ಟಸಾಧ್ಯ.
Related Articles
Advertisement
3 ವರ್ಷಗಳಿಂದ ಹುಲಿ ಸಂರಕ್ಷಣೆಗಾಗಿ ನಿಯೋಜನೆಗೊಂಡಿರುವ ಟೈಗರ್ ರ್ಯಾಪಿಡ್ ಆಕ್ಷನ್ ಫೋರ್ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಹಗಲಿರುಳು ಸಾತ್ ನೀಡುತ್ತಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ವಾಚರ್‌ಗಳ ಕೆಲ ಹುದ್ದೆ ನೇಮಕ ಮಾಡಿಕೊಂಡರೂ ಮತ್ತೆ ಖಾಲಿಯಾದ ಹುದ್ದೆ ಭರ್ತಿ ಮಾಡಿಯೇ ಇಲ್ಲ. ಉದ್ಯಾನದಲ್ಲಿ ಕೆಲಸ ಮಾಡುವ ಉತ್ತರ ಕರ್ನಾಟಕದ ಬಹುತೇಕ ಮಂದಿ ಖಾಯಂ ಆಗುವವರೆಗೆ ಮಾತ್ರ ಕರ್ತವ್ಯ ನಿರ್ವಹಿಸಿ ಬಳಿಕ ವರ್ಗಾಯಿಸಿಕೊಂಡು ಹೋಗುತ್ತಿದ್ದಾರೆ.
ಇಲ್ಲಿ ಫಾರೆಸ್ಟರೇ ಇಲ್ಲ: ನಾಗರಹೊಳೆ ಉದ್ಯಾನವನದ ಅರಣ್ಯದಂಚಿನಲ್ಲಿರುವ ವಲಯಗಳಾದ ಕಲ್ಲಹಳ್ಳ 5, ಹುಣಸೂರು 2 ಹಾಗೂ ವೀರನಹೊಸಹಳ್ಳಿ ವಲಯದಲ್ಲಿ ಒಬ್ಬರೂ ಫಾರೆಸ್ಟರ್ ಇಲ್ಲ. ಇನ್ನುಳಿದಂತೆ ನಾಗರಹೊಳೆ-5, ಮೇಟಿಕುಪ್ಪೆ$-3, ಅಂತರ ಸಂತೆ-4, ಆನೆಚೌಕೂರು ವಲಯಗಳಲ್ಲಿ-3 ಫಾರೆಸ್ಟರ್ ಹುದ್ದೆಗಳು ಖಾಲಿ ಇವೆ. ಇಲ್ಲಿ ಯಾವಾಗಲೂ ಬೆಂಕಿ ಆತಂಕದಲ್ಲಿ ಕಾರ್ಯ ನಿರ್ವಹಿಸಬೇಕಾದ ಸಿಬ್ಬಂದಿ, ತಮ್ಮ ಮೇಲಧಿಕಾರಿಗಳಿಲ್ಲದೆ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಾದೇಶಿಕ ವಿಭಾಗದಲ್ಲೂ 21 ಹುದ್ದೆ ಖಾಲಿ: ಇನ್ನು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಪಿರಿಯಾಪಟ್ಟಣ, ಕೆ.ಆರ್.ನಗರ ಹಾಗೂ ಹುಣಸೂರು ತಾಲೂಕು ಸೇರುತ್ತಿದೆ. ಆದರೆ ಇಲ್ಲಿಯೂ 81 ವಿವಿಧ ಹುದ್ದೆಗಳ ಪೈಕಿ 21 ಹುದ್ದೆ ಖಾಲಿ ಇದೆ. ಈ ಪೈಕಿ ಎರಡು ಆರ್‌ಎಫ್ಒ, 5 ಫಾರೆಸ್ಟರ್, 10 ಗಾರ್ಡ್, 3 ವಾಹನ ಚಾಲಕರು ಸೇರಿದಂತೆ ಒಟ್ಟು 21 ಹುದ್ದೆ ಭರ್ತಿಯಾಗಬೇಕಿದೆ.
ಬಂಡೀಪುರದ್ದೂ ಇದೇ ಕಥೆ…ಇನ್ನು ಬಂಡೀಪುರದಲ್ಲಿ 341 ಮಂದಿಗೆ 118 ಸಿಬ್ಬಂದಿಗಳ ಹುದ್ದೆ ಖಾಲಿ ಉಳಿದಿದ್ದು, 13 ವಲಯ ಅರಣ್ಯಾಧಿಕಾರಿಗಳ ಪೈಕಿ 3 ವಲಯಗಳಲ್ಲಿ ಅಧಿಕಾರಿಗಳಿಲ್ಲ, 30ರ ಪೈಕಿ 14 ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆ ಹಾಗೂ 133 ಅರಣ್ಯ ರಕ್ಷಕರ ಪೈಕಿ 55 ಹಾಗೂ 90 ವಾಚರ್‌ಗಳ ಪೈಕಿ 10 ಹುದ್ದೆ ಹಾಗೂ ಇಲ್ಲಿ 5 ಪ್ರಥಮ ದರ್ಜೆ ಸಹಾಯಕ ಮತ್ತು ಎರಡು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳೂ ಖಾಲಿ ಇದೆ. ವಲಯಗಳಲ್ಲಿ ಅಗತ್ಯ ಸಿಬ್ಬಂದಿಗಳಿಲ್ಲದೇ ಪ್ರಭಾರವಾಗಿಯೇ ಕಾರ್ಯ ನಿರ್ವಹಣೆಯಾಗುತ್ತಿದೆ. ಇತ್ತೀಚೆಗೆ ಕಾಡಿನ ಗಿಡಮರಗಳು ಒಣಗಿ ನಿಂತಿವೆ, ಸಿಬ್ಬಂದಿ ಕೊರತೆಯಿಂದ ಕಾಡು ಕಾಯುವುದು, ಬೆಂಕಿಯಿಂದ ರಕ್ಷಿಸಲು ತಲೆ ನೋವಾಗಿ ಪರಿಣಮಿಸಿದೆ. ನಮ್ಮ ಕಷ್ಟ ಕೇಳುವವರೇ ಇಲ್ಲ. ಹಗಲು-ರಾತ್ರಿ ಎನ್ನದೆ ಕುಟುಂಬದಿಂದ ದೂರ ಉಳಿದು ಕಾರ್ಯ ನಿರ್ವಹಿಸುತ್ತಿದ್ದೇವೆ. ಇನ್ನಾದರೂ ಸರ್ಕಾರ, ಹಿರಿಯ ಅಧಿಕಾರಿಗಳು ಅಗತ್ಯ ಸಿಬ್ಬಂದಿ ನೇಮಿಸಿ ನಮ್ಮ ಕಷ್ಟ ಕಡಿಮೆ ಮಾಡಲಿ.
-ನೊಂದ ಅರಣ್ಯ ಸಿಬ್ಬಂದಿ * ಸಂಪತ್‌ಕುಮಾರ್