Advertisement

ಉತ್ತಮ ಆರೋಗ್ಯಕ್ಕಾಗಿ ತಪ್ಪದೇ ಪಾಲಿಸಿ ಕೆಲವು ನಿಯಮ

08:22 AM Jan 22, 2019 | |

ಆರೋಗ್ಯವಾಗಿರಬೇಕು ಎಂಬುದು ಎಲ್ಲರ ಆಸೆ. ಆದರೆ ಅದಕ್ಕಾಗಿ ಏನೇನೆಲ್ಲ ಕಸರತ್ತು ಮಾಡುತ್ತೇವೆ. ಆದರೆ ಪ್ರಯೋಜನವಾಗುವುದಿಲ್ಲ. ಒಂದಲ್ಲ ಒಂದು ರೀತಿಯ ಕಾಯಿಲೆ ಹೇಳದೇಕೇಳದೆ ಬಂದೇ ಬರುತ್ತದೆ. ಆರೋಗ್ಯವಾಗಿರಬೇಕು ಎಂದಾದರೆ ಕೆಲವೊಂದು ಅಂಶಗಳತ್ತ ಗಮನಹರಿಸುವುದು ಬಹುಮುಖ್ಯ.

Advertisement

1 ಬಾಯಿಯ ನೈರ್ಮಲ್ಯ

ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುವ ಮೂಲಕವೂ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದರಿಂದ ಬಾಯಿಯನ್ನು ಸ್ವಚ್ಛವಾಗಿರಿಸಬಹುದು. ಬಾಯಿ ಹುಣ್ಣು, ವಾಸನೆಯಿಂದ ಮುಕ್ತಿ ಪಡೆಯಬಹದು.

2 ಉಪಾಹಾರ ತ್ಯಜಿಸದಿರಿ

ಬೆಳಗಿನ ಉಪಾಹಾರ ತ್ಯಜಿಸುವುದರಿಂದ ಅನೇಕ ಅರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆ್ಯಸಿಡಿಟಿ, ಗ್ಯಾಸ್‌ಟ್ರಬಲ್‌ ಉಂಟಾಗಲು ಇದು ಮುಖ್ಯ ಕಾರಣ. ಮೆದುಳಿನ ಸಮಸ್ಯೆಯನ್ನು ಇದು ಉಂಟುಮಾಡುತ್ತದೆ. ಬೆಳಗಿನ ಉಪಾಹಾರವೂ ಪೌಷ್ಟಿಕತೆಯಿಂದ ಕೂಡಿರಬೇಕು.

Advertisement

3 ಆಧ್ಯಾತ್ಮಿಕತೆ

ನಾನಾ ಅನಾರೋಗ್ಯ ಸಮಸ್ಯೆಗಳಿಗೆ ಆಧ್ಯಾತ್ಮದಿಂದ ಪರಿಹಾರ ಸಿಗುತ್ತದೆ. ಪ್ರಾರ್ಥನೆಯಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಇದರೊಂದಿಗೆ ಯೋಗ, ಪ್ರಾಣಾ ಯಾಮ ನಿರಂತರ ಅಭ್ಯಾಸ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು.

4 ನೀರು

ನಮ್ಮ ದೇಹಕ್ಕೆ ಶೇ. 70ರಷ್ಟು ನೀರಿನ ಅಗತ್ಯವಿದೆ. ದಿನಕ್ಕೆ ಕನಿಷ್ಠ 3 ಲೀಟರ್‌ ನೀರನ್ನು ಕುಡಿಯಬೇಕು. ಹೀಗಾಗಿ ಹೆಚ್ಚು ನೀರು ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

5 ಮೂಳೆಗಳ ರಕ್ಷಣೆ

ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಪಾತ್ರ ಪ್ರಮುಖವಾದದ್ದು. ಮೂಳೆಗಳ ಸವೆತ ಅಪಾಯಕಾರಿ. ಪ್ರತಿ ನಿತ್ಯವೂ ಕ್ಯಾಲ್ಸಿಯಂಯುಕ್ತ ಆಹಾರಗಳಾದ ಹಾಲು, ಮೊಸರು ಸೇವನೆ ಮಾಡುವುದರಿಂದ ಮೂಳೆಗಳನ್ನು ರಕ್ಷಿಸಬಹುದು. ಮೂಳೆಗಳ ಸಾಂದ್ರತೆ ಅಥವಾ ಸವೆತ 30 ವರ್ಷದಿಂದ ಆರಂಭವಾಗುತ್ತದೆ. ಮೂಳೆಗಳ ರಕ್ಷಣೆಗಾಗಿ ದಿನಕ್ಕೆ 200 ಮಿಲಿಗ್ರಾಂ ಕ್ಯಾಲ್ಸಿಯಂನ ಅಗತ್ಯವಿದೆ.

6 ದಿನಕ್ಕೊಂದು ಟೋಮೇಟೋ

ಟೋಮೆಟೋ ಕ್ಯಾನ್ಸರ್‌ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ಇದನ್ನು ಹಸಿಯಾಗಿ ಸಲಾಡ್‌ ರೂಪದಲ್ಲಿ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ.

7 ಹಸುರು ತರಕಾರಿ

ದೇಹಕ್ಕೆ ಎಲ್ಲ ವಿಟಮಿನ್‌ ಅಂಶವೂ ಅಗತ್ಯ. ಅದರಲ್ಲೂ ಮಿಟವಿನ್‌ ಎ ಅತಿ ಮುಖ್ಯ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಹಸುರು ಮತ್ತು ಹಳದಿ ತರಕಾರಿ ಸೇವನೆ ಬಹುಮುಖ್ಯ.

8 ನಗು

ಮಾನಸಿಕವಾಗಿ ಒತ್ತಡ ರಹಿತವಾಗಿದ್ದರೆ ಯಾವುದೇ ಕಾಯಿಲೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಹೀಗಾಗಿ ನಗು ಸದಾ ನಿಮ್ಮ ಮುಖದಲ್ಲಿರಲಿ. ನಗುವಿಗೆ ಅಲರ್ಜಿಯನ್ನು ಕಡಿಮೆ ಮಾಡುವ ಶಕ್ತಿ ಇದೆ.

••ಧನ್ಯಾ ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next