Advertisement

Ram Mandir; ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ ಆದರೆ ಗುಣ ಇದೆಯೇ..: ಸಿ.ಟಿ ರವಿ

03:58 PM Jan 02, 2024 | Team Udayavani |

ಚಿಕ್ಕಮಗಳೂರು: ಶ್ರೀರಾಮ ಧರ್ಮದ ಪರ ಕೆಲಸ ಮಾಡಿದ, ಎಲ್ಲರಿಗೂ ನ್ಯಾಯ ಕೊಟ್ಟ. ಆದರೆ ನಿಮ್ಮ ಸಿದ್ದರಾಮಯ್ಯ ಎಲ್ಲರಿಗೂ ನ್ಯಾಯ ಕೊಟ್ಟರಾ ಎಂದು ಮಾಜಿ‌ ಸಚಿವ ಆಂಜನೇಯ ವಿರುದ್ಧ ಸಿ.ಟಿ.ರವಿ ಕಿಡಿಕಾರಿದರು.

Advertisement

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಿಮ್ಮ ಹೆಸರು ಆಂಜನೇಯ‌; ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆಂದು ಹೇಳಿದ್ರಿ, ಪರಿಶಿಷ್ಟ ಜಾತಿ, ಪಂಗಡಕ್ಕೆ ಇಟ್ಟ 11ಸಾವಿರ ಕೋಟಿ ವಾಪಸ್ ತಗೆದುಕೊಂಡ್ರಿ, ವೋಟ್ ಬ್ಯಾಂಕ್ ಗಾಗಿ ಅಲ್ಪಸಂಖ್ಯಾತ ರಿಗೆ 10 ಸಾವಿರ ಕೋಟಿ ಇಟ್ಟರು, ಒಬ್ಬರಿಗೆ ಅನ್ಯಾಯ ಮಾಡುವವರೂ ರಾಮನಿಗೆ ಸಮನಾಗಲು ಸಾಧ್ಯವೇ ಎಂದರು.

ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡರೆಂದು 31 ವರ್ಷದ ನಂತರ ಆ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ರಿ, ರಾಮನ ಹೆಸರು ಇಟುಕೊಂಡಿದ್ದಕ್ಕೆ ರಾಮನ ಗುಣ ಬಂದಿದೆಯೆಂದು ಭಾವಿಸಲು ಆಗುತ್ತದೆಯೋ, ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ ಆದರೆ ಗುಣ ಇದೆಯೇ ಎಂದು ಪ್ರಶ್ನಿಸಿದರು.

1992ರ‌ ಕರಸೇವೆಯಲ್ಲಿ ನಾನು ಸೇರಿದಂತೆ ಸುನಿಲ್ ಕುಮಾರ್ ಹಾಗೂ ಅನೇಕರು ಭಾಗವಹಿಸಿದ್ದರು. ನಮಗೆ ಇನ್ನೂ ಆಮಂತ್ರಣ ಬಂದಿಲ್ಲ, ಯಾರಿಗೆ ಆಮಂತ್ರಣ ಕೊಡಬೇಕು ಎಂಬ ನಿರ್ಧಾರ ಮಾಡುವ ಅಧಿಕಾರ ರಾಮಮಂದಿರ ನಿರ್ಮಾಣ ಟ್ರಸ್ಟ್ ಗೆ ಮಾತ್ರವಿದೆ. ಆ ಅಧಿಕಾರ ಪ್ರಧಾನಮಂತ್ರಿಗೂ ಇಲ್ಲ. ಅವರು ನಿರ್ಧಾರ ಮಾಡುತ್ತಾರೆ ಎಂದರು.

ಇನ್ನೂ ಕಾಲಾವಕಾಶ ಇದೆ, ಆಮಂತ್ರಣ ಪತ್ರಿಕೆ ಬರಬಹುದು, ಬರದೇ ಇರಬಹುದು, ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡಿದವರಿಗೆ ಇನ್ನೂ ಆಮಂತ್ರಣ ಬಂದಿಲ್ಲ ಎಂದರು.

Advertisement

ಇದನ್ನೂ ಓದಿ:Flight: ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ಬೆಂಕಿ… 367 ಪ್ರಯಾಣಿಕರು ಅದೃಷ್ಟವಶಾತ್ ಪಾರು

ರಾಮಮಂದಿರ ಆಗಬೇಕು ಎಂದು ಕಾಂಗ್ರೆಸ್ ಯಾವತ್ತು ಬಯಸಿತ್ತು? ಕಾಂಗ್ರೆಸ್‌ ಬಯಸಿದ್ದರೆ ಸ್ವಾತಂತ್ರ ಭಾರತದಲ್ಲಿ ಹೋರಾಟ ಮಾಡುವ‌ ಪ್ರಮೇಯವೇ ಬರುತ್ತಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮಂದಿರ ನಿರ್ಮಾಣ ಆಗುತ್ತಿತ್ತು. ಹೋರಾಟ ಮತ್ತು ಕರಸೇನೆ ಮಾಡುವ ಸಂದರ್ಭ ಬರುತ್ತಿರಲಿಲ್ಲ ಎಂದು ಸಿ.ಟಿ. ರವಿ ಹೇಳಿದರು.

ಸಿದ್ದರಾಮಯ್ಯ ಮಂದಿರ‌ ನಿರ್ಮಾಣ ಹೋರಾಟ ಸಂದರ್ಭದಲ್ಲಿ ಒಂದು ಹೇಳಿಕೆಯೂ ಕೊಟ್ಟಿಲ್ಲ. ಮಾಜಿ ಸಚಿವ ಆಂಜನೇಯ ಹೇಳಿಕೆ ಕೊಟ್ಟಿಲ್ಲ. ಇದರ ಮೇಲೆ ಅವರಿಗೆ ಆಮಂತ್ರಣ ಪತ್ರಿಕೆ ಬರುತ್ತದೋ ಬಿಡುತ್ತದೆಯೋ ಗೊತ್ತಿಲ್ಲ, ಆದರೆ, ಪ್ರತಿ ಮನೆಗೆ ಮಂತ್ರಾಕ್ಷತೆ ಬಂದೇ ಬರುತ್ತದೆ. ಸಿದ್ದರಾಮಯ್ಯ ಮತ್ತು ಆಂಜನೇಯ ಅವರ ಮನೆಗೆ ಅಯೋಧ್ಯೆ ಮಂತ್ರಾಕ್ಷತೆ ತಲುಪುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next