ಚಿಕ್ಕಬಳ್ಳಾಪುರ: ವೀರ ಸಾವರ್ಕರ್ ಗೆ ಭಾರತ ರತ್ನ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಸಿದ್ದಗಾಂಗ ಶ್ರೀಗಳಿಗೆ 10 ವರ್ಷ ಮೊದಲೇ ಭಾರತ ರತ್ನ ಕೊಡಬೇಕಿತ್ತು ಎಂದು ಮಾಜಿ ಸಚಿವ ಹಾಗೂ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ರತ್ನ ಕೊಡುವುದು ಕೇಂದ್ರದ ನಿರ್ಧಾರ. ಈ ವಿಚಾರದಲ್ಲಿ ಯಾರು ವಾದ ವಿವಾದ ಉಂಟು ಮಾಡಬಾರದು ಎಂದರು.
ಜಾತಿ, ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸಿದ ಅಂಬೇಡ್ಕರ್ ಆಗಿನ ಕಾಂಗ್ರೆಸ್ ಸರ್ಕಾರ ಭಾರತ ರತ್ನ ಕೊಡಲಿಲ್ಲ. ಅವರಿಗೂ ಕೂಡ ತಡವಾಗಿ ಭಾರತ ರತ್ನ ಪ್ರಶಸ್ತಿ ಕೊಡಲಾಯಿತು. ಅದು ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿತು. ಕಾಂಗ್ರೆಸ್ ನವರು ಸಂಸತ್ತು ಭವನದಲ್ಲಿ ಅ ಅಂಬೇಡ್ಕರ್ ಭಾವಚಿತ್ರವನ್ನು ಹಾಕಲಿಕ್ಕೆ ಬಿಡಲಿಲ್ಲ ಎಂದು ಬಚ್ಚೇಗೌಡ ಟೀಕಿಸಿದರು.
ಸಿದ್ದ ಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎನ್ನುವುದು ಬಹು ವರ್ಷಗಳ ಬೇಡಿಕೆ. ನಾನೂ ಹತ್ತು ವರ್ಷದ ಹಿಂದೆಯೇ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ಒತ್ತಾಯಿಸಿದ್ದೆ ಅವರಿಗೂ ಇಂದಲ್ಲ ನಾಳೆ ಭಾರತ ರತ್ನ ಪ್ರಶಸ್ತಿ ಸಿಗುವ ವಿಶ್ವಾಸ ಇದೆ ಎಂದರು.
ಶಿವಶಂಕರರೆಡ್ಡಿ ಹೇಳಿಕೆ ಆಶ್ಚರ್ಯ ತಂದಿದೆ
ಮಾಜಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಉತ್ತಮ ವ್ಯಕ್ತಿ, ಸೌಮ್ಯ ಸ್ವಭಾವದವರು. ಅವರು ಈ ಈ ರೀತಿಯಲ್ಲಿ ಮಾತನಾಡಿರುವುದು ನಿಜಕ್ಕೂ ನನಗೆ ಆಶ್ಚರ್ಯ ತಂದಿದೆ. ಯಾರೇ ಆಗಲಿ ಕೈ ಕತ್ತರಿಸುತ್ತೇನೆ. ಕಾಲು ಕತ್ತರಿಸುತ್ತೇನೆ ಎನ್ನುವುದು ತಪ್ಪು ಎಂದರು. ಮಂಚೇನಹಳ್ಳಿ ತಾಲೂಕುವಮಾಡುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ಜಕ್ಕಲಮಡಗು ಬಗ್ಗೆ ಎಬಿಸಿಡಿ ಗೊತ್ತಿಲ್ಲ
ಜಕ್ಕಲಮಡಗು ಜಲಾಶಯ ಬಗ್ಗೆ ನನಗೆ ಗೊತ್ತಿಲ್ಕ, ಜಲಾಶಯದ ನೀರಿನ ಹಂಚಿಕೆ ಬಗ್ಗೆ ನಾನು ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಈ ಬಗ್ಗೆ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.