Advertisement

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಇಲ್ಲ: ಶೆಟ್ಟರ್‌

10:36 AM Oct 06, 2019 | Team Udayavani |

ಧಾರವಾಡ: ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಬದಲಾಗಿ ಬೆಂಗಳೂರಿನಲ್ಲೇ ನಡೆಸಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ನೆರೆ ಹಾವಳಿಯ ಪರಿಹಾರ ಕಾರ್ಯ ಸಾಗಿದ್ದು, ಜಿಲ್ಲಾಡಳಿತಗಳು ಸಂಪೂರ್ಣ ಈ ಕಾರ್ಯದಲ್ಲಿ ತೊಡಗಿವೆ. ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ನೆರೆ ಪರಿಹಾರ ಕಾರ್ಯದಲ್ಲಿ ಮಗ್ನವಾಗಿರುವ ಕಾರಣ ಈ ಸಲ ಚಳಿಗಾಲ ಅಧಿವೇಶವನ್ನು ಬೆಳಗಾವಿಯಲ್ಲಿ ನಡೆಸಲಾಗದು ಎಂದರು.

ಉಕ ಭಾಗದ ಸಮಸ್ಯೆ ಬಗೆಹರಿಸಲು ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ, ಸಿದ್ದರಾಮಯ್ಯ ಅವರು ತಾವು ಸಿಎಂ ಆಗಿದ್ದ ಐದು ವರ್ಷಗಳ ಅವಧಿಯಲ್ಲಿ ಎಷ್ಟು ಬಾರಿ ಬೆಳಗಾವಿಯಲ್ಲಿ ಅ ಧಿವೇಶನ ಮಾಡಿದ್ದಾರೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಟಾಂಗ್‌ ನೀಡಿದರು.

ಎನ್‌ಡಿಆರ್‌ಎಫ್‌ ನಿಯಮಾವಳಿಯಂತೆ ಮನೆ ಬಿದ್ದರೆ 50 ಸಾವಿರ ಮಾತ್ರ ನೀಡಬೇಕು ಅಂತಿದೆ. ಆ ನಿಯಮಗಳನ್ನು ಮೀರಿ ಹಣ ನೀಡಿ ಎಂದಾಗ ಸಿಎಂ ಹಣ ಇಲ್ಲ ಎಂದಿದ್ದಾರೆ. ಅದನ್ನು ಸಿದ್ದರಾಮಯ್ಯನವರು ಅಪಾರ್ಥ ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ. ಈ ಹಿಂದಿನ ಸರ್ಕಾರಗಳು ಮೂರು ತಿಂಗಳು ಕಳೆದರೂ ಯಾವುದೇ ಅನುದಾನ ನೀಡಿರಲಿಲ್ಲ. ಈಗ ಕೇಂದ್ರ ಸರ್ಕಾರ ನೀಡಿರುವ ಅನುದಾನ ಕುರಿತು ಟೀಕಿಸುವುದು ಸರಿಯಲ್ಲ. ಇದು ಮೊದಲ ಹಂತದ ಮಧ್ಯಂತರ ಅನುದಾನವಾಗಿದ್ದು, ಮುಂಬರುವ ದಿನಗಳಲ್ಲಿ ಕೇಂದ್ರದಿಂದ ಇನ್ನಷ್ಟು ಅನುದಾನ ಬರಲಿದೆ ಎಂದರು.

ಮಾಹಿತಿ ಇಲ್ಲ: ಅಧಿವೇಶನ ಸಮಯ ದೃಶ್ಯ ಮಾಧ್ಯಮಕ್ಕೆ ನಿರ್ಬಂಧ ಹೇರಿರುವ ವಿಚಾರ ಕುರಿತು ಮಾಹಿತಿ ಇಲ್ಲ. ಸ್ಪೀಕರ್‌ ಬಳಿ ಸಮಾಲೋಚಿಸುವೆ ಎಂದ ಶೆಟ್ಟರ, ಶಾಸಕ ಬಸವರಾಜ ಯತ್ನಾಳಗೆ ಬಿಜೆಪಿ ಶೋಕಾಸ್‌ ನೋಟಿಸ್‌ ವಿಚಾರ ಕುರಿತು ನೋ ಕಮೆಂಟ್ಸ್‌ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next