Advertisement

ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಮಕ್ಕಳಿಗೆ ಲಸಿಕೆ ಇಲ್ಲ

01:47 AM Apr 23, 2020 | Team Udayavani |

ಬೆಂಗಳೂರು: ಕೋವಿಡ್‌-19 ವೈರಸ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ ಕಂಟೈನ್ಮೆಂಟ್‌ (ನಿಯಂತ್ರಿತ ವಲಯ) ಝೋನ್‌ಗಳಲ್ಲಿ ಮಕ್ಕಳಿಗೆ ಲಸಿಕೆ ಕಾರ್ಯಕ್ರಮ ನಡೆಸಬಾರದು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ರಾಜ್ಯದ 359 ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಲಸಿಕೆ ಚಟುವಟಿಕೆ ಕೈಗೊಳ್ಳಬಾರದು. ಇತರ ಪ್ರದೇಶಗಳಲ್ಲಿ ನಡೆಯಬೇಕು. ಕೋವಿಡ್‌-19 ನಿಯಂತ್ರಣ ತಂಡದಲ್ಲಿರುವ ಯಾವ ಸಿಬಂದಿಯೂ ಇದರಲ್ಲಿ ಭಾಗವಹಿಸಬಾರದು. ಲಸಿಕೆ ಕೊಠಡಿಯಲ್ಲಿ ಒಂದು ಮಗು ಮಾತ್ರ ಇದ್ದು, ಓರ್ವ ಆರೋಗ್ಯಕರ್ತೆ ಮಾತ್ರ ಇರಬೇಕು. ಫಿವರ್‌ ಕ್ಲಿನಿಕ್‌ ಇರುವಲ್ಲಿ ಲಸಿಕೆಗೆ ಅವಕಾಶವಿಲ್ಲ. ಮಕ್ಕಳಿಗೆ, ಆರೋಗ್ಯ ಸಿಂಬಂದಿಗೆ ಜ್ವರ ಸೇರಿದಂತೆ ಇತರ ಇತರ ಲಕ್ಷಣಗಳಿದ್ದರೆ ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಕಂಟೈಂನ್ಮೆಂಟ್‌ ಝೋನ್‌ನಲ್ಲಿದ್ದವರು ಲಾಕ್‌ಡೌನ್‌ ಮುಗಿಯುವ ವರಗೆ ಲಸಿಕೆ ಹಾಕಿಸಲು ಕಾಯಬೇಕು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next