Advertisement

800 ಕುಟುಂಬಕ್ಕೆ ಶೌಚಾಲಯವೇ ಇಲ್ಲ

11:40 AM Jun 24, 2017 | |

ಮೂಗೂರು (ತಿ.ನರಸೀಪುರ ತಾ): ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 1766 ಕುಟುಂಬಗಳು ವಾಸವಿದ್ದು, ಇದರಲ್ಲಿ ಇನ್ನೂ 800 ಕುಟುಂಬಗಳು ವೈಯಕ್ತಿಕ ಶೌಚಾಲಯವನ್ನೇ ಹೊಂದಿಲ್ಲ ಎಂದು ಪಿಡಿಒ ಗಣೇಶ್‌ಮೂರ್ತಿ ವಿಷಾದ ವ್ಯಕ್ತಪಡಿಸಿದರು.

Advertisement

ಪಟ್ಟಣದ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿ, ರಾಜ್ಯವನ್ನು ಬಯಲು ಮುಕ್ತ ಶೌಚಾಲಯವನ್ನಾಗಿ ಮಾಡಬೇಕೆಂಬ ಹಿತ ದೃಷ್ಟಿ ಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿ ಸಾಕಷ್ಟು ಅನುದಾನ ನೀಡಿದರೂ ಕೂಡ ಇದನ್ನು ಬಳಕೆ ಮಾಡಿ ಕೊಂಡು ಶೌಚಾಲಯ ನಿರ್ಮಿಸಿಕೊಳ್ಳಲು  ಗ್ರಾಮಸ್ಥರು ಮುಂದಾಗುತ್ತಿಲ್ಲ ಎಂದರು.

ಕಟ್ಟಿರುವ ಶೌಚಾಲಯಗಳನ್ನು ಸಹ ಬಳಕೆ ಮಾಡದೇ ಶೌಚಕ್ಕಾಗಿ ಬಯಲನ್ನೇ ಅವಲಂಭಿಸಿರುತ್ತಾರೆಂದು ಬೇಸರ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನ ಸಾಮಾನ್ಯರಿಗೆ ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.

ಸಚಿವ ಡಾ.ಎಚ್‌.ಸಿ.ಮಹದೇವಪ್ಪ ವಿಶೇಷ ಕಾಳಜಿ ತೋರಿ 2017-18ನೇ ಸಾಲಿಗೆ ಬಸವ, ಅಂಬೇಡ್ಕರ್‌ ಹಾಗೂ ವಿವಿಧ ವಸತಿ ಯೋಜನೆಯಡಿ 426 ಮನೆಗಳನ್ನು ಮಂಜೂರು ಮಾಡಿದ್ದು ಗ್ರಾಮಸ್ಥರು ಇದನ್ನು ಸಬ್ದಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ತಾಪಂ ಸದಸ್ಯ ಮೂಗೂರು ಚಂದ್ರಶೇಖರ್‌ ಮಾತನಾಡಿ, ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಫ‌ಲಾನುಭವಿಗಳು ಭಾಗವಹಿಸಿ ನೇರವಾಗಿ ಅರ್ಜಿ ಸಲ್ಲಿಸುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಜೊತೆಗೆ ವಿವಿಧ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

Advertisement

ಪ್ರಚಾರದ ಕೊರತೆಯಿಂದಾಗಿ ನೀರಿಕ್ಷಿತ ಮಟ್ಟದಲ್ಲಿ ಗ್ರಾಮ ಸಭೆಗೆ ಜನರು ಆಗಮಿಸಿಲ್ಲ. ಗ್ರಾಮ ಸಭೆಗಳು ಸರ್ಕಾರದ ಕಣ್ಣೋರೆಸುವಂತಹ ಸಭೆಗಳಾ ಗಬಾರದು. ಬದಲಿಗೆ ಜನ ಸಾಮಾನ್ಯರಿಗೆ ಸೌಲಭ್ಯ ಅರ್ಹ ಫ‌ಲಾನುಭವಿಗಳಿಗೆ ದಕ್ಕುವಂತಹ ಸಭೆಗಳಾಗಬೇಕು. ಅದಕ್ಕಾಗಿ ಅಧಿಕಾರಿಗಳು ಗ್ರಾಮ ಸಭೆಗೆ ಮೊದಲು ಜನರನ್ನು ಸೇರಿಸುವ ಕೆಲಸ ಮಾಡಬೇಕೆಂದು ಪಿಡಿಒ ಗಣೇಶ್‌ಮೂರ್ತಿಗೆ ನಿರ್ದೇಶನ ನೀಡಿದರು.

ಮುಂದಿನ ಸಭೆಗಳಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ವ್ಯವಹರಿಸುವಂತೆ ಸೂಚಿಸಿದರು. ಗ್ರಾಮದ ಸರ್ಕಾರಿ ಫೌÅಡಶಾಲೆಯ ಮುಖ್ಯ ಶಿಕ್ಷಕ ಜಗದೀಶ್‌ ಮೂರ್ತಿ ಮಾತನಾಡಿ, ಗ್ರಾಮದ ಶಾಲೆಯಲ್ಲಿ 420 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು ಅದರಲ್ಲೂ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ.

ಗುತ್ತಿಗೆದಾರನಲ್ಲದ ಅನಾನುಭವಿ ವ್ಯಕ್ತಿಗಳು ತಾಪಂ ಅನುದಾನದಡಿ 3 ಶೌಚಾಲಯ ನಿರ್ಮಿಸಿದ್ದು ಕಾಮಗಾರಿ ಕಳಪೆ ಜೊತೆಗೆ ನೀರಿನ ಸಂಪರ್ಕ ಇಲ್ಲದೇ  ಶೌಚಾಲಯಗಳು ಉಪಯೋಗಕ್ಕೆ ಬಾರದಂತಿ ಪರಿಣಾಮ ವಿದ್ಯಾರ್ಥಿನಿಯರು ಶೌಚಕ್ಕಾಗಿ ಪರಿತಪಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ದೂರಿದರು.

ಜಿಪಂ ಅನುದಾನದಡಿ ದುರಸ್ತಿ ಮಾಡಲಾಗುತ್ತಿರುವ 3 ಕೊಠಡಿಗಳ ಕಾಮಗಾರಿ ವಿಳಂಬವಾಗಿರುವುದರಿಂದ ಇನ್ನೂ ಮರದಡಿಯಲ್ಲೇ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ ಉದ್ಬವಿಸಿದೆ. ಹಾಗಾಗಿ ಸಂಬಂಧಪಟ್ಟವರು ಶೀಘ್ರ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಸಭೆಯಲ್ಲಿ  ಮನವಿ ಮಾಡಿದರು.

ಡ್ರೆ„ವರ್‌ ರೇವಣ್ಣ, ಜಿಪಂ ಉಪಾಧ್ಯಕ್ಷ ಕೈಯಂಬಳ್ಳಿ ನಟರಾಜು, ತಾಪಂ ಎಡಿ ಪ್ರೇಮ್‌ಕುಮಾರ್‌, ಗ್ರಾಪಂ ಅಧ್ಯಕ್ಷೆ ಪಿ.ಶೋಭಾ, ಸದಸ್ಯರಾದ ಸಾಗರ್‌, ಎಂ.ಪಿ.ನಿಂಗಪ್ಪ, ದೀಲೀಪ್‌, ಶಿವಮೂರ್ತಿ, ಮೋಹನ್‌, ಕೃಷಿ ಅಧಿಕಾರಿ ಶಿವಣ್ಣ, ಟಿಒಟಿ ನಾಗರಾಜು, ಮುಖ್ಯ ಶಿಕ್ಷಕ ಪ್ರಕಾಶ್‌, ಪಾರ್ವತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next