Advertisement

ಎಲ್ಲಾ ಓಕೆ ಶೌಚಗೃಹ ಇಲ್ಲ ಯಾಕೆ?

01:34 PM Nov 18, 2019 | Suhan S |

ರಾಣಿಬೆನ್ನೂರ: ಸುಮಾರು 1.30 ಲಕ್ಷದ ಜನಸಂಖ್ಯೆ ಹೊಂದಿರುವ ನಗರದಲ್ಲಿ ಒಂದೇ ಒಂದು ಗ್ರಂಥಾಲಯವಿದ್ದು, 1979ರಲ್ಲಿ ಸ್ಥಾಪನೆಗೊಂಡಿದೆ. ಇಲ್ಲಿನ ಸಂಗಂ ವೃತ್ತದ ಬಳಿ ಕೇಂದ್ರ ಗ್ರಂಥಾಲಯವು 2012ರಲ್ಲಿ 1.30 ಕೋಟಿ ರೂ. ಅನುದಾನದಲ್ಲಿ ನವೀಕರಣಗೊಂಡು ಸುಸಜ್ಜಿತ 6 ಕೊಠಡಿಗಳನ್ನು ಹೊಂದಿದೆ. “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂದು ಆಕರ್ಷಿಸುವ ನಾಮಫಲಕದೊಂದಿಗೆ ಓದುಗರನ್ನು ಬರಮಾಡಿಕೊಳ್ಳುತ್ತಿದೆ.

Advertisement

ಮಾಜಿ ಶಾಸಕ ಹಾಗೂ ವಿಧಾನಸಭಾ ಮಾಜಿ ಸಭಾಪತಿ ಕೋಳಿವಾಡ ಅವರು ಈ ಗ್ರಂಥಾಲಯಕ್ಕೆ 1979ರಲ್ಲಿ ಅಡಿಗಲ್ಲು ಹಾಕಿದ್ದರು. ನಂತರ 2012 ರಲ್ಲಿ ಮಾಜಿ ಶಾಸಕ ದಿ| ಜಿ.ಶಿವಣ್ಣನವರ ಆಡಳಿತಾವಧಿಯಲ್ಲಿ ಈ ಗ್ರಂಥಾಲಯವು ಲೋಕಾರ್ಪಣೆಗೊಂಡಿತು. ಇಲ್ಲಿ 35 ಸಾವಿರ ಪುಸ್ತಕಗಳು ಲಭ್ಯವಿದ್ದು, ಇದರಲ್ಲಿ 30 ಸಾವಿರ ಕನ್ನಡ, 4500 ಇಂಗ್ಲಿಷ್‌, 500 ಹಿಂದಿ ಪುಸ್ತಕಗಳು ಲಭ್ಯ ಇವೆ. ರಾಜ್ಯಮಟ್ಟದ ದಿನಪತ್ರಿಕೆಗಳು ಮತ್ತು ಸ್ಥಳೀಯ ಪತ್ರಿಕೆ ಸೇರಿದಂತೆ ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆ ಸಹ ಓದುಗರಿಗೆ ಲಭ್ಯವಿದೆ.

ಇಂದಿನ ದಿನಮಾನಗಳಲ್ಲಿ ಯುವಕರು ವಾಟ್ಸ್  ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಲಹರಣ ಮಾಡುತ್ತಿರುವ ಪರಿಣಾಮ ಪುಸ್ತಕ ಹಾಗೂ ಪತ್ರಿಕೆಗಳ ಓದುವ ಹವ್ಯಾಸ ಮರೆತಿದ್ದಾರೆ. ಪ್ರತಿದಿನ 300ಕ್ಕೂ ಅಧಿಕ ಜನ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನುವುದೇ ಸಂತಸದ ಸಂಗತಿ. 300 ಓದುಗರು ಆಜೀವ ಸದಸ್ಯತ್ವ ಹೊಂದಿದ್ದಾರೆ. ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಪಠ್ಯಕ್ಕೆ ಸಂಬಂಧಿ ಸಿದ ಪುಸ್ತಕ ಪಡೆದು ಓದುತ್ತಿರುವುದು ಗ್ರಂಥಾಲಯಕ್ಕೆ ಇನ್ನೂ ಹೆಚ್ಚು ಮೆರಗು ತಂದಿದೆ. ಪ್ರಸ್ತುತ ಈ ಗ್ರಂಥಾಲಯದ ಪಕ್ಕ ಮಕ್ಕಳ ಗ್ರಂಥಾಲಯ ಕಟ್ಟಡ ಕಾಮಗಾರಿ ಚಾಲ್ತಿಯಲ್ಲಿದೆ. ಇದು ಸಹ ಬೇಗ ಆರಂಭವಾದಲ್ಲಿ ಮಕ್ಕಳ ಅಭ್ಯಾಸಕ್ಕೂ ಅನುಕೂಲವಾಗಲಿದೆ.

ಸುಸಜ್ಜಿತ ಕಟ್ಟಡದಲ್ಲಿ ಶೌಚಗೃಹ ಸಮಸ್ಯೆ: 1.30 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ಭವ್ಯ ಕಟ್ಟಡದಲ್ಲಿ ಶೌಚಕ್ಕೆ ಸಮಸ್ಯೆ ಉದ್ಬವಿಸಿದೆ. ಕಟ್ಟಡ ನಿರ್ಮಾಣವಾಗಿ ಕೇವಲ 7 ವರ್ಷದಲ್ಲಿ ಶೌಚಗೃಹದಲ್ಲಿನ ಛಂಬರ್‌ಗಳು ಕುಸಿದಿವೆ. ಅದರ ದುರಸ್ತಿ ಕಾರ್ಯ ಮಾಡಿಸದೆ ಶೌಚಗೃಹ ಬಾಗಿಲು ಹಾಕಲಾಗಿದೆ.

ಕಟ್ಟಡದಲ್ಲಿ ಮಹಿಳೆ ಮತ್ತು ಪುರುಷರ ಪ್ರತ್ಯೇಕ ಮೂರು ಶೌಚಾಲಯಗಳು ನಿರ್ಮಾಣವಾಗಿದ್ದು, ಕಟ್ಟಡ ನವೀಕರಣಗೊಂಡ ಕೆಲವೇ ದಿನಗಳಲ್ಲಿ ಶೌಚಾಲಯದ ಛಂಬರ್‌ಗಳು ಕುಸಿದು ದುರಸ್ತಿಗೆ ಬಂದಿದೆ. ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರವೇ ದುರಸ್ತಿ ಮಾಡಲಾಗುವುದು.  –ಬಿದ್ದಾಡೆಪ್ಪ ಮಾಳನಾಯಕನಹಳ್ಳಿ, ಸಹಾಯಕ ಗ್ರಂಥಪಾಲಕ

Advertisement

 

-ಮಂಜುನಾಥ ಕುಂಬಳೂರು

Advertisement

Udayavani is now on Telegram. Click here to join our channel and stay updated with the latest news.

Next