ರೈಲ್ವೇ ಟಿಕೆಟ್ ಸರಬರಾಜು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
Advertisement
ಎರಡು ವರ್ಷಗ ಳಿಂದ ಪ್ರಯಾಣಿಕರು ನಿತ್ಯವೂ ಇಲಾಖೆಗೆ ಹಲವಾರು ಬಾರಿ ಪತ್ರ ಬರೆದು ಆಗ್ರಹಿಸಿದ್ದಾರೆ. ಕೋಡಿಂಬಾಳ ದಿಂದ ಮಂಗಳೂರಿಗೆ ಟಿಕೆಟ್ ದರ 25 ರೂ. ಇದೆ. ಕೋಡಿಂಬಾಳದಲ್ಲಿ ಟಿಕೆಟ್ ಮುಗಿದ ಕಾರಣದಿಂದಾಗಿ ಹತ್ತಿರದ ಬಜಕೆರೆ ನಿಲ್ದಾಣದಿಂದ ಟಿಕೆಟ್ ಎರವಲು ತಂದು ನೀಡಲಾಗುತ್ತಿತ್ತು. ಈಗ ಅಲ್ಲಿಯೂ ಟಿಕೆಟ್ ಮುಗಿದಿದೆ. ಆದ್ದರಿಂದ ಕೆಲವು ಸಮಯದಿಂದ ಕೋಡಿಂಬಾಳ ದಿಂದ ಪ್ರಯಾಣಿಸುವವರು . ಕಡಬ ಪುತ್ತೂರು ಟಿಕೆಟ್ ಪಡೆದು, ಅಲ್ಲಿ ಕೆಳಗಿಳಿದು ಮಂಗಳೂರಿಗೆ ಟಿಕೆಟ್ ಪಡೆದು ಪ್ರಯಾಣಿಸಬೇಕಾಗಿದೆ. ಅಧಿಕಾರಿಗಳೂ ಇಂಥದ್ದೇ ಸಲಹೆ ನೀಡುತ್ತಾರೆ.
ಕಬಕ ಪುತ್ತೂರು ನಿಲ್ದಾಣದಲ್ಲಿ ರೈಲು ಕೇವಲ ಎರಡು ನಿಮಿಷ ನಿಲ್ಲುತ್ತದೆ. ಅಷ್ಟರೊಳಗೆ ಪ್ರಯಾಣಿಕರು ರೈಲಿನಿಂದ ಕೆಳಗಿಳಿದು ಟಿಕೆಟ್ ಕೌಂಟರ್‌ಗೆ ತೆರಳುವಷ್ಟರಲ್ಲಿ ರೈಲು ಹೊರಡುವ ಸಂದರ್ಭಗಳೂ ಇವೆ. ಹಾಗಾಗಿ ಮಹಿಳೆಯರಿಗೆ, ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಬಹಳ ತೊಂದರೆಯಾಗುತ್ತಿದೆ. ಮೂಲ ಸೌಕರ್ಯಗಳಿಲ್ಲ
ಈಗ ಇರುವ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರಂ ಸರಿಯಾಗಿಲ್ಲ. ರೈಲಿನ ಬಾಗಿಲು ಮತ್ತು ಪ್ಲಾಟ್‌ಫಾರಂ ನಡುವೆ ಇರುವ ದೊಡ್ಡ ಅಂತರದಿಂದಾಗಿ ಪ್ರಯಾಣಿಕರು ರೈಲನ್ನು ಏರಲು ಹ ರಸಾಹಸ ಪಡಬೇಕು.
Related Articles
Advertisement
ತಾಲೂಕು ಕೇಂದ್ರದ ರೈಲು ನಿಲ್ದಾಣಈ ರೈಲು ನಿಲ್ದಾಣ ತಾಲೂಕು ಕೇಂದ್ರ ಕಡಬಕ್ಕೆ ಸನಿಹದಲ್ಲಿದ್ದು, ಮೇಲ್ದರ್ಜೆಗೇರಿದರೆ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಕಡಬ ಮಾತ್ರವಲ್ಲದೇ, ಸುಳ್ಯ ತಾಲೂಕಿನ ಪಂಜ, ಬಳ್ಪ ಮುಂತಾದ ಪ್ರದೇಶಗಳಿಗೂ ಈ ರೈಲು ನಿಲ್ದಾಣ ತುಂಬಾ ಹತ್ತಿರ. ಆದರೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಗೇಜ್ ಪರಿವರ್ತನೆಯ ಬಳಿಕ ಲೋಕಲ್ ರೈಲು ಮಾತ್ರ ಇಲ್ಲಿ ನಿಲ್ಲುತ್ತಿದೆ. ಎಕ್ಸ್‌ಪ್ರೆಸ್ ರೈಲು ನಿಲುಗಡೆ ಇಲ್ಲ. ಬೆಂಗಳೂರಿಗೆ ಹೋಗಲು ನೆಟ್ಟಣ (ಸುಬ್ರಹ್ಮಣ್ಯ ರಸ್ತೆ) ರೈಲು ನಿಲ್ದಾಣಕ್ಕೇ ಹೋಗಬೇಕಿದೆ. ಈ ಹಿಂದೆ ಬೆಂಗಳೂರು-ಮಂಗಳೂರು ರೈಲು ಇಲ್ಲಿ ನಿಲ್ಲುತ್ತಿದ್ದಾಗ, ಬಹಳಷ್ಟು ಮಂದಿಗೆ ಪ್ರಯೋಜನವಾಗುತ್ತಿತ್ತು. ಇಂದು ಜನಸಂಖ್ಯೆಯೂ ಹೆಚ್ಚಾಗಿದ್ದು, ಬೆಂಗಳೂರಿಗೆ ಹೋಗುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಆದರೆ, ರೈಲು ಸೌಲಭ್ಯವಿಲ್ಲ ಎಂಬುದು ಗ್ರಾಮಸ್ಥರ ದೂರು. ಹಾಗಾಗಿ ಕೋಡಿಂಬಾಳ ರೈಲು ನಿಲ್ದಾಣದಲ್ಲೂ ದೂರ ಪ್ರಯಾಣದ ರೈಲುಗಳು ನಿಲುಗಡೆಯಾಗಬೇಕು. ಜತೆಗೆ ಲೋಕಲ್ ರೈಲುಗಳ ಸಂಚಾರ ಹೆಚ್ಚಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖೆಯವರು ಕ್ರಿಯಾಶೀಲವಾಗಬೇಕು ಎಂಬುದು ಜನರ ಬೇಡಿಕೆ. ಪ್ರಯೋಜನವಾಗಿಲ್ಲ
ರೈಲ್ವೇ ಇಲಾಖೆ ಸಮರ್ಪಕವಾಗಿ ಟಿಕೆಟ್ ಕೂಡ ಸರಬರಾಜು ಮಾಡುತ್ತಿಲ್ಲ. ಕೋಡಿಂಬಾಳ ರೈಲು ನಿಲಾœಣ ಮೇಲ್ದರ್ಜೆಗೇರಬೇಕು, ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯಾಗಬೇಕು, ಲೋಕಲ್ ರೈಲುಗಳ ಓಡಾಟ ಹೆಚ್ಚಿಸಬೇಕು ಮುಂತಾದ ಬೇಡಿಕೆಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರೂ ಹೋರಾಟಗಾರರ ಮೇಲೆ ಕೇಸು ದಾಖಲಾಗಿರುವುದು ಬಿಟ್ಟರೆ ಬೇರೇನೂ ಪ್ರಯೋಜನವಾಗಿಲ್ಲ. ರೈಲ್ವೇ ಅಧಿಕಾರಿಗಳ ವಿರುದ್ಧ ಇಲ್ಲಿನ ಜನರು ದಂಗೆ ಏಳುವ ಮುನ್ನ ಬೇಡಿಕೆ ಈಡೇರಿಸಲು ಮುಂದಾಗಬೇಕು.
– ಸಯ್ಯದ್ ಮೀರಾ ಸಾಹೇಬ್, ಸಂಚಾಲಕರು, ಕೋಡಿಂಬಾಳ ರೈಲು ನಿಲ್ದಾಣ ಅಭಿವೃದ್ಧಿ ಹೋರಾಟ ಸಮಿತಿ. – ನಾಗರಾಜ್ ಎನ್.ಕೆ. ಕಡಬ