Advertisement

ಪ್ರೊಟೀನ್‌ ಇಲ್ಲದಿದ್ದರೆ ಕಣ್ಣೀರೂ ಇಲ್ಲ: ಎಡಾ ಯೊನಾಥ್‌ 

11:44 AM Jan 12, 2018 | Team Udayavani |

ಮಹಾನಗರ: ಜೀವಕೋಶಗಳಲ್ಲಿರುವ ರೈಬೋಸೋಮುಗಳು ಹಸಿವು, ತೀವ್ರ ಚಳಿ ಇತ್ಯಾದಿ ಒತ್ತಡದ ಅವಧಿಯಲ್ಲಿ ಶಿಸ್ತುಬದ್ಧವಾಗಿ ಕೋಶಗಳ ಒಳಭಾಗದಲ್ಲಿ ಮುದುಡಿ ಸೇರಿಕೊಂಡು ಸ್ಥಿರವಾಗಿರುತ್ತವೆ ಎಂದು 2009ನೇ ಸಾಲಿನಲ್ಲಿ ರಸಾಯನ ಶಾಸ್ತ್ರದ ನೋಬೆಲ್‌ ಪ್ರಶಸ್ತಿ ಪಡೆದ ವಿಜ್ಞಾನಿ ಇಸ್ರೇಲಿನ ಡಾ| ಎಡಾ ಇ. ಯೊನಾಥ್‌ ಹೇಳಿದ್ದಾರೆ. ನಗರದ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಆಯೋ ಜಿಸಿದ 5 ದಿನಗಳ ಸಹ್ಯಾದ್ರಿ ಸಮಾವೇಶದಲ್ಲಿ ತಮ್ಮ ಸಂಶೋಧನೆಯಾದ ರೈಬೋಸೋಮುಗಳ ಕುರಿತು ಅವರು
ಉಪನ್ಯಾಸ ನೀಡಿದರು.

Advertisement

ಉತ್ತರ ಧ್ರುವದಲ್ಲಿ ವಾಸಿಸುವ ಬಿಳಿ ಕರಡಿಗಳು ಚಳಿಗಾಲದಲ್ಲಿ 6 ತಿಂಗಳುಗಳ ಕಾಲ ಧೀರ್ಘ‌ ನಿದ್ರೆಗೆ ಹೋಗುತ್ತವೆ. ಈ ಅವಧಿಯಲ್ಲಿ ಅವುಗಳು ಆಹಾರ ಸೇವಿಸುವುದಿಲ್ಲ. ಆಗ ಅವುಗಳ ಜೀವ ಕೋಶಗಳ ರೈಬೋಸೋಮುಗಳು ಕೋಶದ ಒಳಭಾಗದಲ್ಲಿ ಸೇರಿಕೊಂಡು ಹರಳುಗಟ್ಟುತ್ತವೆ ಮತ್ತು ಸ್ಥಿರವಾಗಿರುತ್ತವೆ. ಇಲ್ಲಿ ಆ ಪ್ರಾಣಿಗಳು ಅನುಭವಿಸುವ ಕಾಲಮಾನದ ಒತ್ತಡವಾದ ತೀವ್ರ ಚಳಿಯು ನಿಗದಿತ ಮತ್ತು ನಿಯಮಿತ ಅವಧಿಯಲ್ಲಿ ರೈಬೋಸೋಮುಗಳು ಕೋಶದ ಒಳಭಾಗದಲ್ಲಿ ಸ್ಥಿರವಾಗಿ ಮುದುಡಿಕೊಂಡಿರುವಂತೆ ಮಾಡುತ್ತದೆ. ಆ ಪ್ರಾಣಿಗಳು ನಿದ್ದೆಯಿಂದೆದ್ದ ಬಳಿಕ ಮತ್ತೆ ಕ್ರಿಯಾಶೀಲವಾಗಿ ಪ್ರೊಟೀನುಗಳನ್ನು ತಯಾರಿಸುತ್ತವೆ ಎಂದರು.

ಸಾಧನೆ ಪ್ರೇರಣೆಯಾಗಲಿ
ಸಹ್ಯಾದ್ರಿ ಪ್ರತಿಷ್ಠಾನದ ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ನೋಬೆಲ್‌ ಪ್ರಶಸ್ತಿ ಪಡೆದವರನ್ನು ತಾವು ನೋಡುವಾಗ 45 ವರ್ಷಗಳು ಕಳೆದಿದ್ದವು. ಅವರ ಭಾಷಣಗಳು ವಿದ್ಯಾರ್ಥಿಗಳಿಗೆ ಪೂರ್ಣವಾಗಿ ಅರ್ಥವಾಗದಿದ್ದರೂ ಅವರ ಸಾಧನೆ ಪ್ರೇರಣೆಯಾಗಲಿ ಎಂದರು. ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಿ.ಪಿ. ಅಗರ್ವಾಲ್‌ ತ್ಯಾಜ್ಯ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು. ಡಾ| ಶಂಕರ ಕೆ. ಪ್ರಸಾದ್‌ ಕಾರ್ಯಕ್ರಮದ ಸಮನ್ವಯಕಾರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next