Advertisement

ರಾಜ್ಯದ ಯಾವ ತಾಲೂಕಲ್ಲೂ ಇಲ್ಲ ಇಂತಹ ಭವನ!

02:57 PM Nov 10, 2022 | Team Udayavani |

ಕಾರ್ಕಳ: ದಶಕಗಳ ಕನಸಾಗಿರುವ ತಾಲೂಕು ಕೇಂದ್ರ ಕಾರ್ಕಳ ನಗರ ವ್ಯಾಪ್ತಿಯಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಭವನ ನಿರ್ಮಾಣ ದಶಕಗಳ ಕನಸು ನನಸಾಗುತ್ತಿದೆ. ರಾಜ್ಯದಲ್ಲೆ ಮೊದಲ ಬಾರಿಗೆ ತಾ| ಕೇಂದ್ರದಲ್ಲಿ 6 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಅಂಬೇಡ್ಕರ್‌ ಭವನ ಇದಾಗಲಿದೆ.

Advertisement

ಭವನ ನಿರ್ಮಾಣಕ್ಕೆ ನ.14ರಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಭೂಮಿಪೂಜೆ ನೆರವೇರಿಸಲಿ ದ್ದಾರೆ. ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣವಾಗದೆ ಇರುವ ಕುರಿತು ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದಲ್ಲಿ ಈವರೆಗೆ ಇದ್ದ ಬೇಸರ ಮುಂದಿನ ದಿನಗಳಲ್ಲಿ ದೂರವಾಗಲಿದೆ.

2016ರಲ್ಲಿ ನೀಲ ನಕ್ಷೆ ತಯಾರಿ

ನಗರದ ಕಾಣಿಟ್ಟು ವಾರ್ಡ್‌ನಲ್ಲಿ 1 ಎಕರೆ ಜಾಗವನ್ನು ತಾ| ಅಂಬೇಡ್ಕರ್‌ ಭವನಕ್ಕಾಗಿ ಮೀಸಲಿಡಲಾಗಿತ್ತು. ಆನಂತರದ ದಿನಗಳಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಪ್ರಯತ್ನಗಳು ನಡೆದಿದ್ದವು. ಆರಂಭದಲ್ಲಿ 100 ಮಂದಿ ಸಾಮರ್ಥ್ಯದ ಭವನ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಅದು ಸಾಲದು ಎಂದು 1 ಸಾವಿರ ಮಂದಿ ಸಾಮರ್ಥ್ಯದ ಭವನ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿತ್ತು. ಸುಮಾರು 750 ಮಂದಿ ಸಾಮರ್ಥ್ಯದ ಸುಸಜ್ಜಿತ ಭವನಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅಂದಾಜು ಪಟ್ಟಿ ಮತ್ತು ನಕ್ಷೆಯನ್ನು ಸಿದ್ಧಪಡಿಸಿ ಆಡಳಿತಾತ್ಮಕ ಒಪ್ಪಿಗೆಯನ್ನು ಸರಕಾರದ ಆದೇಶದನ್ವಯ ಪಡೆಯಲಾಗಿತ್ತು.

2020-21ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಭವನ ಗಳ ನಿರ್ಮಾಣಕ್ಕೆ ಪರಿಶಿಷ್ಟ ಜಾತಿಯ ಅಭಿವೃದ್ಧಿ ಕಾರ್ಯಕ್ರಮಗಳ ಬಂಡವಾಳ ಚಿಕ್ಕ ಶೀರ್ಷಿಕೆಯಡಿ ನಿಗದಿಪಡಿಸಿದ್ದ ಅನುದಾನದ ಮೊತ್ತದಲ್ಲಿ ಕಾರ್ಕಳ ತಾ| ಅಂಬೇಡ್ಕರ್‌ ಭವನಕ್ಕೆ ಮಂಜೂರಾತಿ ಪಡೆದ 1.5 ಕೋ.ರೂ. ಅನುದಾನದ ಪೈಕಿ 75 ಲಕ್ಷ ರೂ. ಮೊದಲ ಕಂತಿನ ಹಣವನ್ನು ಕಾರ್ಯನಿರ್ವಾಹಕ ನಿರ್ದೇಶಕರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ಖಾತೆಗೆ ಈ ಹಿಂದೆಯೇ ಜಮೆಗೊಳಿಸಿತ್ತು. ಅನಂತರದಲ್ಲಿ ಚುನಾವಣೆ ಇತ್ಯಾದಿ ಕಾರಣಗಳಿಂದ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಿಧಾನಗತಿ ಪಡೆದಿದ್ದವು.

Advertisement

ಸಚಿವರಿಗೆ ಆಧುನಿಕವಾಗಿ ನಿರ್ಮಿಸುವ ಆಶಯ

ತಾ| ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 1.5 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು. ಆಡಳಿತಾತ್ಮಕ ಒಪ್ಪಿಗೆ ಪಡೆದು ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದ್ದವು. ಇದೇ ವೇಳೆ 1.5 ಕೋ.ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ಕೆಲವೊಂದು ನೌಕರ ಹೊಂದಲು ಸಾಧ್ಯವಿತ್ತಾದರೂ ಈತನ್ಮಧ್ಯೆ ಡಾ| ಅಂಬೇಡ್ಕರ್‌ ಭವನದ ಸಾಮರ್ಥ್ಯ ಹೆಚ್ಚಿಸಿ, ಮತ್ತಷ್ಟು ಸುಸಜ್ಜಿತ, ಆಧುನಿಕವಾಗಿ ನಿರ್ಮಿಸುವ ಉದ್ದೇಶವನ್ನು ಸಚಿವ ವಿ. ಸುನಿಲ್‌ ಕುಮಾರ್‌ ಹೊಂದಿದ್ದರು. ಹೆಚ್ಚುವರಿ ಅನುದಾನ ತರುವ ಪ್ರಯತ್ನ ನಡೆಸಿ ಸುಸಜ್ಜಿತವಾಗಿ, ಆಧುನಿಕ ಶೈಲಿಯಲ್ಲಿ ಭವನ ನಿರ್ಮಿಸಲು ನಿರ್ಧರಿಸಿ, ಅದರಂತೆ ಪೂರಕ ಯೋಜನೆ ಸಿದ್ಧಪಡಿಸಿ ಈಗ 6 ಕೋ.ರೂ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.

ಹೀಗಿರಲಿದೆ ಅಂಬೇಡ್ಕರ್‌ ಭವನ

ಸುಸಜ್ಜಿತ ಕಟ್ಟಡ, ವ್ಯವಸ್ಥಿತ ಪಾರ್ಕಿಂಗ್‌, ಗುಣಮಟ್ಟದ ಪೀಠೊಪಕರಣ, ನಿರಂತರ ನೀರು ಸೌಲಭ್ಯ ಹೊಂದಲು ಬೋರ್‌ವೆಲ್‌ ಇತ್ಯಾದಿ ಸೌಕರ್ಯ‌ಗಳ ಜತೆಗೆ ಮುಂದಿನ ದಿನಗಳಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಯನ್ನು ಭವನದ ಮುಂಭಾಗ ರ್ಮಿಸಲು ಉದ್ದೇಶ ಹೊಂದಲಾಗಿದೆ.

ಭೂಮಿ ಪೂಜೆಗೆ 4 ಸಾವಿರ ಮಂದಿ

ನ.14ರಂದು ಭೂಮಿ ಪೂಜೆ ನಡೆಯುಲಿದ್ದು, ಪೂರ್ವ ಭಾವಿಯಾಗಿ ಸಚಿವ ವಿ. ಸುನಿಲ್‌ ಕುಮಾರ್‌ ಬುಧವಾರ ಕಾಬೆಟ್ಟುವಿನ ಭವನ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್‌ ಸಂಬಂಧಿಸಿದ ಅಧಿಕಾರಿ ಗಳ ಜತೆ ಚರ್ಚಿಸಿದರು. ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಸಮಾಜ ಕಲ್ಯಾಣ ಇಲಾಖೆಯ ಎ.ಡಿ ರಾಘವೇಂದ್ರ, ಡಿ.ಡಿ ಅನಿತಾ, ವಸತಿ ಶಿಕ್ಷಣ ಸಂಸ್ಥೆಯ ರಾಮು ಒ.ಎಚ್‌, ಪ್ರಮುಖರಾದ ಅನಂತಕೃಷ್ಣ ಶೆಣೈ, ಪ್ರವೀಣ್‌ ಶೆಟ್ಟಿ, ಕೌನ್ಸಿಲರ್‌ಗಳು ಉಪಸ್ಥಿತರಿದ್ದರು.

ಅದ್ದೂರಿಯಾಗಿ ನಡೆಸಲು ಸಿದ್ಧತೆ

ರಾಜ್ಯದ ಬೇರೆ ಯಾವ ತಾ| ಕೇಂದ್ರದಲ್ಲಿ 6 ಕೋ. ರೂ ವೆಚ್ಚದಷ್ಟು ಮೊತ್ತದ ಭವನ ನಿರ್ಮಾಣವಾಗಿಲ್ಲ. ಮೊದಲ ಬಹುಕೋಟಿ ರೂ. ವೆಚ್ಚದ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಅದ್ದೂರಿಯಾಗಿ ನಡೆಸಲು ಸಿದÏತೆ ನಡೆಸಲಾಗಿದೆ. ತಾ|ನ ಪರಿಶಿಷ್ಟ ಜಾತಿ ಸಮುದಾಯದ ಮಂದಿ, ಎಲ್ಲ ಸಮುದಾಯದವರನ್ನು ಆಹ್ವಾನಿಸಿ ಸುಮಾರು 4 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಭೂಮಿ ಪೂಜೆ ನಡೆಸಲಾಗುವುದು. ಎಲ್ಲ ಗ್ರಾಮಗಳಲ್ಲಿ ಪೂರ್ವ ತಯಾರಿ ಸಭೆಗಳು ನಡೆಯುತ್ತಿವೆ.

ಆಧುನಿಕ ಶೈಲಿಯಲ್ಲಿ ನಿರ್ಮಾಣ: ಅಂಬೇಡ್ಕರ್‌ ಭವನ ನಿರ್ಮಾಣ ಇಷ್ಟೊತ್ತಿಗಾಗಲೇ ನಿರ್ಮಾಣ ಆಗುತ್ತಿತ್ತು. ಇದಕ್ಕೆ ತಡವಾಗಲು ಕಾರಣ ಭವನವನ್ನು ಸುಸಜ್ಜಿತ, ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಳಿಸಬೇಕೆನ್ನುವ ಉದ್ದೇಶ ನನ್ನದಾ ಗಿತ್ತು. ಹೆಚ್ಚಿನ ಅನುದಾನದ ಪ್ರಯತ್ನದಿಂದ ಕಾದು ತಡವಾಗಿದೆ. –ವಿ. ಸುನಿಲ್‌ ಕುಮಾರ್‌, ಇಂಧನ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next