Advertisement
ಭವನ ನಿರ್ಮಾಣಕ್ಕೆ ನ.14ರಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಭೂಮಿಪೂಜೆ ನೆರವೇರಿಸಲಿ ದ್ದಾರೆ. ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗದೆ ಇರುವ ಕುರಿತು ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದಲ್ಲಿ ಈವರೆಗೆ ಇದ್ದ ಬೇಸರ ಮುಂದಿನ ದಿನಗಳಲ್ಲಿ ದೂರವಾಗಲಿದೆ.
Related Articles
Advertisement
ಸಚಿವರಿಗೆ ಆಧುನಿಕವಾಗಿ ನಿರ್ಮಿಸುವ ಆಶಯ
ತಾ| ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1.5 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು. ಆಡಳಿತಾತ್ಮಕ ಒಪ್ಪಿಗೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದವು. ಇದೇ ವೇಳೆ 1.5 ಕೋ.ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ಕೆಲವೊಂದು ನೌಕರ ಹೊಂದಲು ಸಾಧ್ಯವಿತ್ತಾದರೂ ಈತನ್ಮಧ್ಯೆ ಡಾ| ಅಂಬೇಡ್ಕರ್ ಭವನದ ಸಾಮರ್ಥ್ಯ ಹೆಚ್ಚಿಸಿ, ಮತ್ತಷ್ಟು ಸುಸಜ್ಜಿತ, ಆಧುನಿಕವಾಗಿ ನಿರ್ಮಿಸುವ ಉದ್ದೇಶವನ್ನು ಸಚಿವ ವಿ. ಸುನಿಲ್ ಕುಮಾರ್ ಹೊಂದಿದ್ದರು. ಹೆಚ್ಚುವರಿ ಅನುದಾನ ತರುವ ಪ್ರಯತ್ನ ನಡೆಸಿ ಸುಸಜ್ಜಿತವಾಗಿ, ಆಧುನಿಕ ಶೈಲಿಯಲ್ಲಿ ಭವನ ನಿರ್ಮಿಸಲು ನಿರ್ಧರಿಸಿ, ಅದರಂತೆ ಪೂರಕ ಯೋಜನೆ ಸಿದ್ಧಪಡಿಸಿ ಈಗ 6 ಕೋ.ರೂ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.
ಹೀಗಿರಲಿದೆ ಅಂಬೇಡ್ಕರ್ ಭವನ
ಸುಸಜ್ಜಿತ ಕಟ್ಟಡ, ವ್ಯವಸ್ಥಿತ ಪಾರ್ಕಿಂಗ್, ಗುಣಮಟ್ಟದ ಪೀಠೊಪಕರಣ, ನಿರಂತರ ನೀರು ಸೌಲಭ್ಯ ಹೊಂದಲು ಬೋರ್‌ವೆಲ್ ಇತ್ಯಾದಿ ಸೌಕರ್ಯಗಳ ಜತೆಗೆ ಮುಂದಿನ ದಿನಗಳಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಭವನದ ಮುಂಭಾಗ ರ್ಮಿಸಲು ಉದ್ದೇಶ ಹೊಂದಲಾಗಿದೆ.
ಭೂಮಿ ಪೂಜೆಗೆ 4 ಸಾವಿರ ಮಂದಿ
ನ.14ರಂದು ಭೂಮಿ ಪೂಜೆ ನಡೆಯುಲಿದ್ದು, ಪೂರ್ವ ಭಾವಿಯಾಗಿ ಸಚಿವ ವಿ. ಸುನಿಲ್ ಕುಮಾರ್ ಬುಧವಾರ ಕಾಬೆಟ್ಟುವಿನ ಭವನ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಸಂಬಂಧಿಸಿದ ಅಧಿಕಾರಿ ಗಳ ಜತೆ ಚರ್ಚಿಸಿದರು. ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಸಮಾಜ ಕಲ್ಯಾಣ ಇಲಾಖೆಯ ಎ.ಡಿ ರಾಘವೇಂದ್ರ, ಡಿ.ಡಿ ಅನಿತಾ, ವಸತಿ ಶಿಕ್ಷಣ ಸಂಸ್ಥೆಯ ರಾಮು ಒ.ಎಚ್, ಪ್ರಮುಖರಾದ ಅನಂತಕೃಷ್ಣ ಶೆಣೈ, ಪ್ರವೀಣ್ ಶೆಟ್ಟಿ, ಕೌನ್ಸಿಲರ್‌ಗಳು ಉಪಸ್ಥಿತರಿದ್ದರು.
ಅದ್ದೂರಿಯಾಗಿ ನಡೆಸಲು ಸಿದ್ಧತೆ
ರಾಜ್ಯದ ಬೇರೆ ಯಾವ ತಾ| ಕೇಂದ್ರದಲ್ಲಿ 6 ಕೋ. ರೂ ವೆಚ್ಚದಷ್ಟು ಮೊತ್ತದ ಭವನ ನಿರ್ಮಾಣವಾಗಿಲ್ಲ. ಮೊದಲ ಬಹುಕೋಟಿ ರೂ. ವೆಚ್ಚದ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಅದ್ದೂರಿಯಾಗಿ ನಡೆಸಲು ಸಿದÏತೆ ನಡೆಸಲಾಗಿದೆ. ತಾ|ನ ಪರಿಶಿಷ್ಟ ಜಾತಿ ಸಮುದಾಯದ ಮಂದಿ, ಎಲ್ಲ ಸಮುದಾಯದವರನ್ನು ಆಹ್ವಾನಿಸಿ ಸುಮಾರು 4 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಭೂಮಿ ಪೂಜೆ ನಡೆಸಲಾಗುವುದು. ಎಲ್ಲ ಗ್ರಾಮಗಳಲ್ಲಿ ಪೂರ್ವ ತಯಾರಿ ಸಭೆಗಳು ನಡೆಯುತ್ತಿವೆ.
ಆಧುನಿಕ ಶೈಲಿಯಲ್ಲಿ ನಿರ್ಮಾಣ: ಅಂಬೇಡ್ಕರ್ ಭವನ ನಿರ್ಮಾಣ ಇಷ್ಟೊತ್ತಿಗಾಗಲೇ ನಿರ್ಮಾಣ ಆಗುತ್ತಿತ್ತು. ಇದಕ್ಕೆ ತಡವಾಗಲು ಕಾರಣ ಭವನವನ್ನು ಸುಸಜ್ಜಿತ, ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಳಿಸಬೇಕೆನ್ನುವ ಉದ್ದೇಶ ನನ್ನದಾ ಗಿತ್ತು. ಹೆಚ್ಚಿನ ಅನುದಾನದ ಪ್ರಯತ್ನದಿಂದ ಕಾದು ತಡವಾಗಿದೆ. –ವಿ. ಸುನಿಲ್ ಕುಮಾರ್, ಇಂಧನ ಸಚಿವರು