Advertisement

“ಮಾನವೀಯತೆಗಿಂತ ಮಿಗಿಲಾದ ಜಾತಿಯಿಲ್ಲ ‘

10:53 PM May 08, 2019 | Sriram |

ಮಹಾನಗರ: ಅಂತಾರಾಷ್ಟ್ರೀಯ ವಿಶ್ವ ರೆಡ್‌ ಕ್ರಾಸ್‌ ದಿನಾಚರಣೆಯ ಅಂಗವಾಗಿ ಮೇ 8ರಂದು ನಗರದ ಜಿಲ್ಲಾ ಗೃಹರಕ್ಷಕದಳ ಮೇರಿಹಿಲ್‌ ಕಚೇರಿ ಆವರಣದಲ್ಲಿ ಗಿಡ ನೆಡುವುದರ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀ ಮೋಹನ್‌ ಚೂಂತಾರು ಮಾತನಾಡಿ, ಅಂತಾರಾಷ್ಟ್ರೀಯ ರೆಡ್‌ ಕ್ರಾಸ್‌ ಸಂಸ್ಥೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ಮಾನವೀಯ ಕಳಕಳಿ ಹೊಂದಿರುವ ಸಾಮೂಹಿಕ ಸಂಘಟನೆಯಾಗಿದ್ದು ವಿಶ್ವಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ.

ಮಾನವೀಯತೆಗಿಂತ ಮಿಗಿಲಾದ ಜಾತಿ ಇಲ್ಲ ಎಂಬ ತತ್ತÌದೊಂದಿಗೆ ಕೆಲಸ ನಿರ್ವಹಿಸುತ್ತ ಮಾನವೀಯತೆ ಮುಖಾಂತರ ಜಗತ್ತಿಗೆ ಶಾಂತಿಯನ್ನು ಪಸರಿಸುವ ಕೆಲಸವನ್ನು ಮಾಡುತ್ತಿವೆ. ಪ್ರತಿಯೊಬ್ಬ ಮನುಷ್ಯರು ರೆಡ್‌ ಕ್ರಾಸ್‌ ತತ್ವ ಧ್ಯೇಯಗಳನ್ನು ಜೀವನದಲ್ಲಿ ಅಳವಡಿಸಬೇಕಾದ ಅನಿವಾರ್ಯವಿದೆ ಎಂದು ಕರೆ ನೀಡಿದರು.

ಲಯನ್ಸ್‌ ಕ್ಲಬ್‌ ತುಳುನಾಡು ಅಧ್ಯಕ್ಷ ವಿಲ್ಸನ್‌ ದಿವಾಕರ್‌, ರೆಡ್‌ ಕ್ರಾಸ್‌ ಸಂಸ್ಥೆಯ ಸದಸ್ಯರಾದ ಅಜಯ್‌ ಕುಮಾರ್‌, ಮಾನವ ಹಕ್ಕುಗಳ ಪ್ರಾಧಿಕಾರ ಇದರ ಸಿಇಒ ಶಿವರಾಜ್‌ ಅಯ್ಯರ್‌, ಪರಿಸರವಾದಿ, ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಮಾಧವ ಉಲ್ಲಾಳ್‌ ಉಪಸ್ಥಿತರಿದ್ದರು. ಕಚೇರಿಯ ಅಧೀಕ್ಷಕ ರತ್ನಾಕರ್‌, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್‌. ಉಪಸ್ಥಿತರಿದ್ದರು. ಗೃಹರಕ್ಷಕ ರಮೇಶ್‌ ಭಂಡಾರಿ, ದಿವಾಕರ್‌, ಸನತ್‌ ಕುಮಾರ್‌ ಆಳ್ವ, ಸುಖೀತಾ ಶೆಟ್ಟಿ , ದೀಕ್ಷಾ ಮತ್ತು ಶಿಲ್ಪಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next