Advertisement
ಜಿಲ್ಲೆಯಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಏರುತ್ತಿದ್ದು, ಮುಂಜಾಗ್ರತೆಯಾಗಿ ಪರೀಕ್ಷೆ ಮಾಡಿ ಸುವವರ ಸಂಖ್ಯೆಯೂ ಹೆಚ್ಚಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಉಚಿತ ವಾಗಿದ್ದರೂ ಫಲಿತಾಂಶ ತಡವಾಗುತ್ತಿದೆ ಎಂಬ ಕಾರಣಕ್ಕೆ ಅನೇಕರು ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಇಲ್ಲಿ ಎಷ್ಟು ದರ ಪಾವತಿಸಬೇಕೆಂಬ ಮಾಹಿತಿಯೂ ಇಲ್ಲ ಎಂಬುದು ಹಲವರ ಅಭಿಪ್ರಾಯ.
Related Articles
Advertisement
ಹೆಚ್ಚು ದರ ವಿಧಿಸಿದರೆ ಹೀಗೆ ಮಾಡಿ :
ಆರ್‌ಟಿಪಿಸಿಆರ್ ಪರೀಕ್ಷೆಗೆ ಕೇಂದ್ರ ಸರಕಾರ ದರ (800 ರೂ.) ನಿಗದಿಪಡಿಸಿದೆ. ಯಾರೂ ಅದಕ್ಕಿಂತ ಹೆಚ್ಚಿನ ದರ ವಸೂಲಿ ಮಾಡು ವಂತಿಲ್ಲ. ವಸೂಲಿ ಮಾಡಿದರೆ ಸಂತ್ರಸ್ತರು ಸೂಕ್ತ ದಾಖಲೆಗಳೊಂದಿಗೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸ ಬಹುದು. ಅದನ್ನು ಪರಿಶೀಲಿಸಿ ದೋಷ ಪೂರಿತವಾಗಿದ್ದರೆ ಕಠಿನ ಕ್ರಮ ಕೈಗೊಳ್ಳಲಿದೆ. ಕೊರೊನಾ ಮೊದಲ ಅಲೆಯ ಸಂದರ್ಭ ದಲ್ಲೂ ಕೆಲವು ದೂರು ಬಂದಿದ್ದವು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಆರ್‌ಟಿಪಿಸಿಆರ್ ಪರೀಕ್ಷೆಗೆ ಕೇಂದ್ರ ಸರಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಮೊತ್ತ ಪಡೆಯಲು ಅವಕಾಶ ಇಲ್ಲ. ದುಪ್ಪಟ್ಟು ದರ ವಿಧಿಸುತ್ತಿರುವುದು ಸಾರ್ವಜನಿಕರ ಗಮನಕ್ಕೆಬಂದರೆ ಸೂಕ್ತ ದಾಖಲೆ ನೀಡಿ ಆರೋಗ್ಯ ಇಲಾಖೆ, ಜಿಲ್ಲಾಡಳಿತಕ್ಕೆ ದೂರು ನೀಡಿದರೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು. -ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ