Advertisement
ಜೂ. 2ರಂದು ಕರಾವಳಿಗೆ ಮುಂಗಾರು ಆಗಮನವಾಗಿತ್ತು. ಬಳಿಕದ ಕೆಲವು ದಿನ ವಾಡಿಕೆ ಮಳೆ ಸುರಿದಿಲ್ಲ. ಅನಂತರ ಮೂರ್‍ನಾಲ್ಕು ದಿನ ಉತ್ತಮ ಮಳೆಯಾಗಿದ್ದು, ಸದ್ಯ ಮೂರು ದಿನಗಳಿಂದ ಮತ್ತೆ ಕ್ಷೀಣಿಸಿದೆ.
ಮಾ. 1ರಿಂದ ಮೇ 31ರ ವರೆಗೆ ಸುರಿದ ಪೂರ್ವ ಮುಂಗಾರು ಅವಧಿಯಲ್ಲಿ ಕರಾವಳಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 237 ಮಿ.ಮೀ. ವಾಡಿಕೆ ಮಳೆಯ ಪೈಕಿ 327 ಮಿ.ಮೀ. ಮಳೆ ಸುರಿದಿದ್ದು ಶೇ. 38 ಏರಿಕೆ, ಉಡುಪಿ ಜಿಲ್ಲೆಯಲ್ಲಿ 199 ಮಿ.ಮೀ. ವಾಡಿಕೆ ಮಳೆಯಲ್ಲಿ 256 ಮಿ.ಮೀ. ಮಳೆಯಾಗಿ ಶೇ. 29 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 102 ಮಿ.ಮೀ. ವಾಡಿಕೆ ಮಳೆಯ ಪೈಕಿ 134 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ. 31ರಷ್ಟು ಮಳೆ ಹೆಚ್ಚಳವಾಗಿತ್ತು. ಒಟ್ಟಾರೆ ಕರಾವಳಿ ಭಾಗದಲ್ಲಿ 156 ಮಿ.ಮೀ. ವಾಡಿಕೆ ಮಳೆಯಲ್ಲಿ 207 ಮಿ.ಮೀ. ಸುರಿದು ಶೇ. 33ರಷ್ಟು ಏರಿಕೆ ಕಂಡಿತ್ತು.