Advertisement

ಅರ್ಜುನ್‌ ಸರ್ಜಾ ಮೇಲೆ ವೈಯಕ್ತಿಕ ದ್ವೇಷವಿಲ್ಲ

06:00 AM Nov 11, 2018 | Team Udayavani |

ಬೆಂಗಳೂರು: “ನನಗೆ ಅರ್ಜುನ್‌ ಸರ್ಜಾ ಮೇಲೆ ವೈಯಕ್ತಿಕ ದ್ವೇಷವಿಲ್ಲ. ಅವರ ಮೇಲೆ ಗೌರವವಿದೆ. ವಿನಾಕಾರಣ ಸರ್ಜಾ ಕಡೆಯವರಿಂದ ನನ್ನ ಮೇಲೆ ವೈಯಕ್ತಿಕ ದಾಳಿಯಾಗುತ್ತಿದ್ದು, ಅಪವಾದದ ಜತೆ ಮಾನಹಾನಿ ಮಾಡಲಾಗುತ್ತಿದೆ’ ಎಂದು ನಟ ಚೇತನ್‌ ಆರೋಪಿಸಿದ್ದಾರೆ.

Advertisement

ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, “ಅರ್ಜುನ್‌ ಸರ್ಜಾ ವಿರುದ್ಧ ನಾನು ಎಲ್ಲೂ ಮಾತನಾಡಿಲ್ಲ. ಶ್ರುತಿ ವಿಚಾರವಾಗಿ ಮಾಡಿರುವ ಆರೋಪ ಕುರಿತು ನಾನೆಲ್ಲೂ  ವೈಯಕ್ತಿಕವಾಗಿ ಹೇಳಿಕೆ ಕೊಟ್ಟಿಲ್ಲ. ಶ್ರುತಿ ನನ್ನ “ಫೈರ್‌’ ಸಂಸ್ಥೆಯ ಸದಸ್ಯೆ ಹೌದು. ಹಾಗಂತ, ಅವರು ನಮ್ಮ ಸಂಸ್ಥೆಯಲ್ಲಿ ಸರ್ಜಾ ಮೇಲೆ ದೂರು ನೀಡಿಲ್ಲ. ಆ ವಿಷಯಕ್ಕೂ ನಮಗೂ ಸಂಬಂಧವಿಲ್ಲ. ಆದರೂ, ನನ್ನ ಮೇಲೆ ವೈಯಕ್ತಿಕ ದಬ್ಟಾಳಿಕೆ ನಡೆಸಲಾಗುತ್ತಿದೆ. ಇದರಿಂದ ಬೇಸರವಾಗಿದೆ ಎಂದರು.

ಸರ್ಜಾ ಮೇಲೆ ಸೇಡು ತೀರಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದಾರೆಂಬ ಆರೋಪ ನನ್ನ ಮೇಲೆ ಬಂತು. ಅವರ ನಿರ್ದೇಶನದ “ಪ್ರೇಮ ಬರಹ’ ಚಿತ್ರಕ್ಕೆ 9 ಲಕ್ಷ ರೂ. ಅಡ್ವಾನ್ಸ್‌ ನೀಡಿದ್ದರು. ಅವರು ಹಣ ಹಿಂದಿರುಗಿಸಿ ಅಂತ ಯಾವತ್ತೂ ಹೇಳಿಲ್ಲ. ಅವರು ಅಡ್ವಾನ್ಸ್‌ ಕೊಟ್ಟ ನಂತರ ನಾನು ಫೋಟೋಶೂಟ್‌ ಮಾಡಿಸಿಕೊಂಡಿದ್ದೆ. 4 ತಿಂಗಳ ಕಾಲ ತಮಿಳು ಕಲಿತೆ. ಆ ಸಿನಿಮಾ ಲೇಟ್‌ ಆಗುತ್ತೆ ಅಂತ ಗೊತ್ತಿದ್ದರೂ, ಸುಮ್ಮನಿದ್ದೆ. ಆ ಸಮಯದಲ್ಲಿ ಹಿಂದಿ ಸಿನಿಮಾ ಅವಕಾಶ ಬಂತು. ಆಗ ಅರ್ಜುನ್‌ ಸರ್‌ ಬಳಿ ಹಿಂದಿ ಅವಕಾಶ ಬಂದಿದೆ ಹೋಗಲಾ, ಅಂದಾಗಲೂ ಅವರು, ರೆಡಿ ಆಗುತ್ತಿದೆ. ಅದನ್ನು ಬಿಟ್ಟು ಬಿಡಿ ಅಂದರೂ ಕೊನೆಗೆ ಆ ಚಿತ್ರಕ್ಕಾಗಿ ಕೆಲಸ ಮಾಡಿದೆ. ಕೊನೆಗೆ ಕಾರಣಾಂತರದಿಂದ ಮಾಡಲು ಆಗಲಿಲ್ಲ. ಆದರೆ, ಅವರೇ, ಇ-ಮೇಲ್‌ ಕಳುಹಿಸಿದ್ದರು. ಮುಂದಿನ ದಿನಗಳಲ್ಲಿ ನಿಮ್ಮ ಜತೆ ಒಂದು ಸಿನಿಮಾ ಮಾಡುತ್ತೇನೆ. ನಾನೇ ಆ ಚಿತ್ರ ಅನೌನ್ಸ್‌ ಮಾಡ್ತೀನಿ ಅಂತ ಕೂಡ ಹೇಳಿದ್ದರು. 

ಶ್ರುತಿಗಿಂತ ಮೊದಲೇ ಪರಿಚಯವಾದವರು ಅರ್ಜುನ್‌. ಆದರೆ, ನಾನೆಂದೂ ಅವರ ಬಗ್ಗೆ ಮಾತನಾಡಿಲ್ಲ. ವಿನಾಕಾರಣ ಅವರ ಕಡೆಯ ಕೆಲವರು ನನ್ನ ಮಾನಹಾನಿ ಮಾಡುತ್ತಿದ್ದಾರೆ’ ಎಂದು ದೂರಿದರು.

ಪ್ರಿಯಾಂಕ ಉಪೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರ ಬಗ್ಗೆ ಮಾತನಾಡಿದ ಚೇತನ್‌, “ಅವರು ನನಗೆ ಟೈಮ್‌ ಸಿಗುತ್ತಿಲ್ಲ. ಹಾಗಾಗಿ ಸಭೆಗೆ ಬರಲು ಆಗಲ್ಲ. ಅನ್ನುತ್ತಲೇ ಇದ್ದರು. ಅದರ ನಡುವೆ ಮಲಯಾಳಂ ಚಿತ್ರರಂಗದಲ್ಲಿ ನಡೆದ ಘಟನೆಯಲ್ಲಿ ದಿಲೀಪ್‌ ಮೇಲೆ ಆರೋಪ ಕೇಳಿದ್ದರಿಂದ, ಫೈರ್‌ ಸಂಸ್ಥೆ ಸಹಿ ಸಂಗ್ರಹ ಚಳವಳಿ ಮೂಲಕ ಅವರನ್ನು ಕೈ ಬಿಡುವಂತೆ ಆಗ್ರಹಿಸಲು ತೀರ್ಮಾನಿಸಿದಾಗ, ಪ್ರಿಯಾಂಕ ಉಪೇಂದ್ರ ಅವರು, ನನಗೆ ಪರಿಚಯ ಇದ್ದಾರೆ, ಹಾಗಾಗಿ ನಾನು ಸಹಿ ಮಾಡಲ್ಲ ಅಂದಿದ್ದರು. ಆಗಲೂ ನಾವು ಅದು ಅವರ ಅಭಿಪ್ರಾಯ ಅಂತ ಬಿಟ್ಟಿದ್ದೆವು. ವಾಟ್ಸಾಪ್‌ ಗ್ರೂಪ್‌ನಲ್ಲಿ ಎಲ್ಲಾ ವಿಷಯವನ್ನು ಹಂಚಿಕೊಳ್ಳುವಾಗ, ಮಿಟೂ ವಿಷಯ ಚರ್ಚೆಯಾಯ್ತು. ಪುನಃ ಪ್ರಿಯಾಂಕ ಅವರು ಸೇರಿಸಿಕೊಳ್ಳಿ ಅಂದರು. ಆಮೇಲೆ ಏನಾಯೊ¤à ಏನೋ, ನಾನು ಹೊರ ಬಂದಿದ್ದೇನೆ ಅಂದರು. ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸಮಯ, ಧೈರ್ಯ ಮತ್ತು ಸಾಮರ್ಥಯ ಬೇಕು. ಕೆಲವರಿಗೆ ಆ ಸಮಸ್ಯೆ ಇರುವುದರಿಂದ ಹೊರ ಬಂದಿದ್ದಾರೆ. ಆದರೆ, ಫೈರ್‌ ಸಂಸ್ಥೆಯ ಸದಸ್ಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ’ ಎಂದರು.

Advertisement

ಸಾ.ರಾ.ಗೋವಿಂದು ವಿರುದ್ಧ ನಾನು ಮಾತನಾಡಿಲ್ಲ. ಅದು ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ. ಶ್ರುತಿ ವಿಚಾರವಾಗಿ ಅವರು, “ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾಳೆ. ತಲೆಕೆಟ್ಟಿದೆ’ ಎಂದಿದ್ದರು. ಅವರ ಮಾತುಗಳು ನನಗೆ ಮಹಿಳಾ ವಿರೋಧಿ ಯೋಚನೆ ಎನಿಸಿತ್ತು. ಡಾ.ರಾಜ್‌ ಜತೆಗೆ ಇದ್ದವನು ಎಂದಿದ್ದರು. ಅವರೊಂದಿಗೆ ಸಾಕಷ್ಟು ಮಂದಿ ಇದ್ದಾರೆ. ಆದರೆ, ಎಲ್ಲರೂ ರಾಜ್‌ ಆಗಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next