Advertisement

ಕಾಮಗಾರಿ ಪೂರ್ಣಗೊಳಿಸದೆ ಬಾಕಿ ಹಣ ಬಿಡುಗಡೆಯಿಲ್ಲ

02:18 AM Jun 26, 2019 | Team Udayavani |

ಗಂಗೊಳ್ಳಿ: ಕೋಡಿ ಮತ್ತು ಗಂಗೊಳ್ಳಿಯ ಅಳಿವೆಯಲ್ಲಿ ಕಡಲ್ಕೊರೆತ ತಡೆಗಾಗಿ ಬ್ರೇಕ್‌ ವಾಟರ್‌ ನಿರ್ಮಾಣ ಕಾಮಗಾರಿಗೆ 102 ಕೋ.ರೂ. ಮಂಜೂರಾಗಿದೆ. ಆದರೆ ಇದರಲ್ಲಿ ಹೂಳೆತ್ತಿಲ್ಲ, 5 ಕೋ.ರೂ. ಪರಿಸರ ಅಭಿವೃದ್ಧಿಗೆ ವಿನಿಯೋಗಿಸಿಲ್ಲ ಮತ್ತು ಸಂಪರ್ಕ ರಸ್ತೆ ಅಭಿವೃದ್ಧಿಪಡಿಸದೆ ಬಾಕಿ ಉಳಿದ ಹಣ ಬಿಡುಗಡೆಯನ್ನು ತಡೆ ಹಿಡಿಯಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಅವರು ಮಂಗಳವಾರ ಗಂಗೊಳ್ಳಿ ಮೀನುಗಾರಿಕೆ ಬಂದರಿಗೆ ಭೇಟಿ ನೀಡಿ ಕುಸಿದ ಜೆಟ್ಟಿ, ಬ್ರೇಕ್‌ ವಾಟರ್‌ ಕಾಮಗಾರಿ ವೀಕ್ಷಿಸಿದರು. ಅನುದಾನ ವನ್ನು ಸಮರ್ಪಕವಾಗಿ ವಿನಿಯೋಗಿಸಿಲ್ಲ ಎಂಬ ಮೀನುಗಾರರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಕೋಡಿಯಲ್ಲಿ 900 ಮೀ. ಮತ್ತು ಗಂಗೊಳ್ಳಿ ಯಲ್ಲಿ 700 ಮೀ. ಬ್ರೇಕ್‌ ವಾಟರ್‌ ಕಾಮಗಾರಿಗೆ 102 ಕೋ.ರೂ. ಮಂಜೂರಾಗಿದ್ದು, 78 ಕೋ.ರೂ. ಬಿಡುಗಡೆಯಾಗಿದೆ. 24 ಕೋ.ರೂ. ಕಾಮಗಾರಿ ವಹಿಸಿರುವ ಗುತ್ತಿಗೆದಾರರಿಗೆ ಸಿಗಲು ಬಾಕಿಯಿದೆ. ಇದನ್ನು ಕಾಮಗಾರಿ ಪೂರ್ಣ ಗೊಂಡ ಬಳಿಕವೇ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳಿಗೆ ತಿಳಿಸ ಲಾಗುವುದು ಎಂದವರು ಸ್ಪಷ್ಟಪಡಿಸಿದರು.

ಜೆಟ್ಟಿ ಸ್ಲ್ಯಾಬ್‌ ಕುಸಿತ: ಗರಂ

ಇಲ್ಲಿನ ಬಂದರಿನ ಸ್ಲ್ಯಾಬ್‌ ಹಲವು ಕಡೆ ಕುಸಿದಿರುವ ಬಗ್ಗೆ ಅಧಿಕಾರಿಗಳು, ಎಂಜಿನಿ ಯರ್‌ಗಳ ಕಾರ್ಯವೈಖರಿ ಬಗ್ಗೆ ಸಂಸದರುಗರಂ ಆದರು. ಶಾಸಕರ ಮುತುವರ್ಜಿಯಿಂದ ದುರಸ್ತಿಗೆ 1.98 ಕೋ.ರೂ. ಮಂಜೂರಾಗಿದ್ದು, ಕೂಡಲೇ ಟೆಂಡರ್‌ ಕರೆದು, ಮೀನುಗಾರರಿಗೆ ತೊಂದರೆಯಾಗದಂತೆ ತ್ವರಿತಗತಿಯಲ್ಲಿ ಕಾಮ ಗಾರಿ ನಿರ್ವಹಿಸಬೇಕು. ಈಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ಉನ್ನತಾಧಿಕಾರಿಗಳ ಬಳಿಯೂ ಮಾತನಾಡಲಾಗು ವುದು ಎಂದರು.

Advertisement

ವಿಸ್ತರಣೆಗೆ ಮನವಿ

ಕೋಡಿ ಮತ್ತು ಗಂಗೊಳ್ಳಿ ಅಳಿವೆ ಭಾಗದಲ್ಲಿ ಇನ್ನೂ 200 ಮೀ. ಬ್ರೇಕ್‌ವಾಟರ್‌ ವಿಸ್ತರಿಸಲು ಮೀನುಗಾರರು ಮನವಿ ಮಾಡಿದರು. ಚರ್ಚಿಸಿ, ತೀರ್ಮಾನಿಸಲಾಗುವುದು ಎಂದು ಸಂಸದರು ಭರವಸೆ ನೀಡಿದರು.

ಶಾಸಕ ಸುಕುಮಾರ್‌ ಶೆಟ್ಟಿ, ಮೀನು ಗಾರಿಕೆ ಇಲಾಖೆಯ ಅಧಿಕಾರಿಗಳು, ಎಂಜಿನಿಯರ್‌ಗಳು, ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರ. ಕಾರ್ಯದರ್ಶಿಗಳಾದ ಬಾಲಚಂದ್ರ ಭಟ್, ದೀಪಕ್‌ ಕುಮಾರ್‌ ಶೆಟ್ಟಿ, ಬಿಜೆಪಿ ಮುಖಂಡರು, ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next