ದೇಶದ ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಕಾಣಿಸಿಕೊಂಡಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷವರ್ಧನ್ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಬುಧವಾರದಿಂದ ಗುರುವಾರದ ಅವಧಿಯಲ್ಲಿ ಹೊಸದಾಗಿ 3,561 ಪ್ರಕರಣಗಳು ಕಾಣಿಸಿ ಕೊಂಡಿವೆ. 1,084 ಮಂದಿ ಗುಣ ಮುಖರಾಗಿದ್ದಾರೆ. ಹೀಗಾಗಿ ಚೇತರಿಸಿಕೊಳ್ಳುವವರ ಪ್ರಮಾಣ ಶೇ.28.83 ಆಗಿದೆ. ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಸಾವಿನ ಪ್ರಮಾಣ ಶೇ.3.3 ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳಾಗಿ ರುವ ದಾಮನ್ ಮತ್ತು ಡಿಯು, ಲಕ್ಷದ್ವೀಪ, ಇತರ ರಾಜ್ಯ ಗಳಾದ ಛತ್ತೀಸ್‌ಗಢ, ಝಾರ್ಖಂಡ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ, ಮಿಜೋರಾಂ, ಮಣಿಪುರ, ಗೋವಾ, ಮೇಘಾಲಯ, ಲಡಾಖ್, ಅರುಣಾಚಲ ಪ್ರದೇಶ, ಒಡಿಶಾಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲವೆಂದರು.
ಆಯುಷ್ ಔಷಧದ ಪ್ರಯೋಗ ಆರಂಭ
ಆರೋಗ್ಯ ಕಾರ್ಯಕರ್ತರು ಹಾಗೂ ಹೈರಿಸ್ಕ್ ಪ್ರದೇಶಗಳಲ್ಲಿ ಕೆಲಸ ಮಾಡುವಂಥ ಸಿಬಂದಿಯ ಮೇಲೆ ಆಯುಷ್ ಔಷಧವನ್ನು ಪ್ರಯೋಗಿಸುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರೇ ಈ ಮಾಹಿತಿ ನೀಡಿದ್ದಾರೆ. ಈ ಮೂಲಕ ಭಾರತದಲ್ಲಿ ಐತಿಹಾಸಿಕ ಪ್ರಕ್ರಿಯೆಯೊಂದು ಗುರುವಾರ ಆರಂಭವಾಗಿದೆ. ಅಶ್ವಗಂಧ, ಜೇಷ್ಠಮಧು, ಗುಡುಚಿ ಪಿಪ್ಪಾಲಿ ಮುಂತಾದ ಔಷಧಗಳನ್ನು ಆರೋಗ್ಯಸೇವಾ ಕಾರ್ಯಕರ್ತರ ಮೇಲೆ ಪ್ರಯೋಗಿಸುವ ಪ್ರಕ್ರಿಯೆ ಶುರು ಮಾಡಲಾಗಿದೆ’ ಎಂದು ಅವರು ಹೇಳಿ¨ªಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ತಾಂತ್ರಿಕ ಬೆಂಬಲದೊಂದಿಗೆ ಆಯುಷ್ ಸಚಿವಾಲಯ, ಆರೋಗ್ಯ ಸಚಿವಾಲಯ ಮತ್ತು ಸಿಎಸ್‌ಐಆರ್ ಜಂಟಿಯಾಗಿ ಈ ಪ್ರಕ್ರಿಯೆ ನಡೆಸಲಿದೆ ಎಂದೂ ಹರ್ಷವರ್ಧನ್ ತಿಳಿಸಿದ್ದಾರೆ.