Advertisement
ಈ ದೂರವಾಣಿ ಕೇಂದ್ರವು ಸರ್ವೆ ಗ್ರಾಮದ ಭಕ್ತಕೋಡಿ, ಸರ್ವೆ, ರೆಂಜಲಾಡಿ, ನರಿಮೊಗರು ಗ್ರಾಮದ ವೀರಮಂಗಲ, ಗಡಿಪಿಲ, ಶಾಂತಿಗೋಡು, ಸವಣೂರು ಗ್ರಾಮದ ಕನಡಕಮೇರು, ಸವಣೂರು, ಕಾಯರ್ಗ, ಮಾಂತೂರು, ಪೆರಿಯಡ್ಕ, ಪುಣcಪ್ಪಾಡಿ ಗ್ರಾಮದ ದೇವಸ್ಯ, ಸೋಂಪಾಡಿ, ನಡುಮನೆ, ಕುಮಾರಮಂಗಲ, ಪಾಲ್ತಾಡಿ ಗ್ರಾಮದ ಪರಣೆ, ಬಂಬಿಲ, ಪಾದೆಬಂಬಿಲ, ಜಾರಿಗೆತ್ತಡಿ, ಮಂಜುನಾಥನಗರ, ಕುದ್ಮಾರು ಗ್ರಾಮದ ಶಾಂತಿಮೊಗರು, ಡೆಬ್ಬೆಳಿ, ಬರೆಪ್ಪಾಡಿ, ಕೊçಲ ಗ್ರಾಮದ ಕೊಲ್ಯ, ಕಡೆಂಬಿಕಲ್ಲು, ಏಣಿತ್ತಡ್ಕ, ಪರಂಗಾಜೆ, ಸಬಳೂರು, ಆಲಂಕಾರು ಗ್ರಾಮದ ಕಕ್ವೆ ಸಹಿತ ಹಲವು ಭಾಗಗಳ ವ್ಯಾಪ್ತಿಯಲ್ಲಿ ಅತ್ಯಧಿಕ ಬಳಕೆದಾರರನ್ನು ಹೊಂದಿದೆ. ಈ ಭಾಗದ ಜನತೆ ಬಿಎಸ್ಸೆನ್ನೆಲ್ ನ ಸೇವಾ ನ್ಯೂನತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಸವಣೂರು ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ರಾಷ್ಟ್ರೀಕೃತ ಬ್ಯಾಂಕ್, ಕೇಂದ್ರ ಸಹಕಾರಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಗ್ರಾಮ ಪಂಚಾಯತ್, ಆನ್‌ಲೈನ್ ಸೇವಾ ಕೇಂದ್ರಗಳು ಸಹಿತ ಹಲವು ಕಚೇರಿಗಳಿವೆ. ಶಾಲಾ ಕಾಲೇಜುಗಳು, ವ್ಯವಹಾರಸ್ಥರು ಇದ್ದು ಹೆಚ್ಚಿನವರು ಇಂಟರ್ನೆಟ್ ಬಳಕೆದಾರರು. ಆದರೆ ಇಲ್ಲಿ ಬಿಎಸ್ಸೆನ್ನೆಲ್ ಇಂಟರ್ನೆಟ್ ಸಮಸ್ಯೆಯಿಂದ ಕೆಲವರು ಖಾಸಗಿ ನೆಟ್‌ವರ್ಕ್‌ಗಳ ಮೊರೆಹೋಗಿದ್ದಾರೆ. ಹೆಚ್ಚು ದೂರವಾಣಿ ಬಳಕೆದಾರರನ್ನು ಹೊಂದಿದ್ದ ಕೇಂದ್ರದಲ್ಲಿ ಸೇವೆ ಕೊರತೆಯಿಂದಾಗಿ ಸ್ತಬ್ಧವಾಗಿವೆ. ಆಗೊಮ್ಮೆ ಈಗೊಮ್ಮೆ ಬರುವ ಸಿಗ್ನಲ್‌ನಿಂದ ಜನತೆ ಏನೂ ಮಾಡದಂತಾಗಿದೆ.
Related Articles
ದೂರವಾಣಿ ಕೇಂದ್ರದ ಮೊಬೈಲ್ ಟವರ್‌ನಲ್ಲಿ ರೇಂಜ್ ಕೊರತೆಯಿದೆ. ಸವಣೂರು ಪೇಟೆಯಲ್ಲೆ ಟವರ್ ಇದ್ದರೂ ಸುತ್ತಮುತ್ತ ಅರ್ಧ ಕಿ.ಮೀ. ವ್ಯಾಪ್ತಿಯಲ್ಲೂ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಕರೆ ಮಾಡಿದಾಗೆಲ್ಲ ‘ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’ ಎನ್ನುವುದು ಸಾಮಾನ್ಯವಾಗಿದೆ. ಖಾಸಗಿ ಮೊಬೈಲ್ ಕಂಪೆನಿಗಳು 4ಜಿ ನೆಟ್‌ವರ್ಕ್ ಸೇವೆ ನೀಡುತ್ತಿದ್ದರೂ ಬಿಎಸ್ಸೆನ್ನೆಲ್ ಮೊಬೈಲ್ 3ಜಿ ನೆಟ್‌ವರ್ಕ್ ಸೇವೆ ದೂರವಾಣಿ ಕೇಂದ್ರದ ಗೋಡೆ ಬರಹಕ್ಕೆ ಸೀಮಿತವಾಗಿದೆ.
Advertisement
ಕಂಪೆನಿ ಬದಲಾವಣೆಬಿಎಸ್ಸೆನ್ನೆಲ್ ಬಳಕೆದಾರರು ಈಗ ಸೇವಾ ನ್ಯೂನತೆಯಿಂದ ಕಿರಿಕಿರಿ ಅನುಭವಿಸುತ್ತಿದ್ದು, ಬೇರೆ ಕಂಪೆನಿಗಳ ತಮ್ಮ ನಂಬರ್‌ಗಳನ್ನು ಬದಲಾಯಿಸುತ್ತಿದ್ದಾರೆ. ಖಾಸಗಿ ದೂರವಾಣಿ ಸಂಸ್ಥೆಗಳು ಹಲವೆಡೆ ಟವರ್ ನಿರ್ಮಾಣ ಮಾಡಿ, ಉತ್ತಮ ನೆಟ್‌ವರ್ಕ್ ನೀಡಲು ಪ್ರಯತ್ನಿಸುತ್ತಿದ್ದು, ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಏಕೆ ತನ್ನ ಸೇವೆಯನ್ನು ಉತ್ತಮ ಪಡಿಸುತ್ತಿಲ್ಲ ಎಂಬುದು ಗ್ರಾಹಕರ ಪ್ರಶ್ನೆ. ತೀವ್ರ ಸಮಸ್ಯೆಯಾಗಿದೆ
ಹದಿಮೂರು ವರ್ಷಗಳಿಂದ ಬಿಎಸ್ಸೆನ್ನೆಲ್ ಸಿಮ್ ಬಳಕೆ ಮಾಡುತ್ತಿದ್ದು, ಸದ್ಯ ಸೇವಾ ನ್ಯೂನತೆಯಿಂದ ಸಮಸ್ಯೆಯಾಗಿದೆ. ಅಧಿಕಾರಿಗಳಲ್ಲಿ ವಿಚಾರಿಸಿದರೆ ಸ್ಪಷ್ಟ ಮಾಹಿತಿಯೇ ನೀಡುತ್ತಿಲ್ಲ. ಎಲ್ಲ ಸೇವೆಗಳು ಆನ್‌ಲೈನ್‌ನಲ್ಲೇ ನಡೆಯುತ್ತಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಮೊಬೈಲ್‌ಗೆ ಒಟಿಪಿಯೂ ಬರುತ್ತಿಲ್ಲ. ಎಲ್ಲ ಸಾರ್ವಜನಿಕ ಕೇಂದ್ರಗಳಲ್ಲಿ ಬಿಎಸ್ಸೆನ್ನೆಲ್ ಸಂಪರ್ಕವೇ ಇರುವುದರಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ. ಬಂಧಪಟ್ಟವರು ಸಮಸ್ಯೆ ಪರಿಹರಿಸಬೇಕಿದೆ.
– ಸತೀಶ್ ಅಂಗಡಿಮೂಲೆ
ಸವಣೂರು