Advertisement

ಭಯಪಡುವ ಅವಶ್ಯಕತೆಯಿಲ್ಲ: ಸಚಿವೆ ಜೊಲ್ಲೆ

09:22 AM May 11, 2020 | Suhan S |

ಚಿಕ್ಕೋಡಿ: ಕ್ವಾರಂಟೈನ್‌ನಲ್ಲಿಟ್ಟಿದ್ದ 30 ಜನರಿಗೆ ಕೋವಿಡ್ ವೈರಸ್‌ ಸೋಂಕು ತಗುಲಿದ್ದರೂ ಯಾರೂ ಭಯಪಡುವ ಅವಶ್ಯಕತೆಯಿಲ್ಲ. ಅಜ್ಮೇರ್‌ ದಿಂದ ಬಂದವರಾಗಿದ್ದರಿಂದ ಹಾಗೂ ತಾಲೂಕಿನಲ್ಲಿ ಯಾರ ಸಂಪರ್ಕಕ್ಕೆ ಬಾರದೆ ಇದ್ದರಿಂದ ನಾಗರಿಕರು ನಿಶ್ಚಿಂತೆಯಿಂದಿರಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ನಗರದಲ್ಲಿ ಕ್ವಾರಂಟೈನ್‌ನಲ್ಲಿಟ್ಟಿದ್ದವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರಸಭೆಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು. ಅಜ್ಮೇರ್‌ದಿಂದ ಮೇ 3 ರಂದು ಬೆಳಗಿನ ಜಾವ ಬಸ್‌ ಮೂಲಕ 38 ಜನರು ಕೊಗನ್ನೋಳ್ಳಿ ಬಳಿ ಬಂದಾಗ ಪೊಲೀಸರು ನನ್ನೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದರು. ನಂತರ ರಾಜ್ಯದ ಅನುಮತಿ ಇಲ್ಲದ್ದರಿಂದ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರನ್ನು ಕ್ವಾರಂಟೈನಲ್ಲಿಡಲು ನಿರ್ಣಯಿಸಿದ್ದೆವು ಎಂದರು.

ಕ್ವಾರಂಟೈನಲ್ಲಿದ್ದವರ ಮತ್ತು ತಾಲೂಕಿನ ನಾಗರಿಕರ ಯಾವುದೇ ಸಂಪರ್ಕವಿಲ್ಲ. ಆದಾಗ್ಯೂ ಇವರ ಸಂಪರ್ಕಕ್ಕೆ ಬಂದವರನ್ನು ಪೊಲೀಸರು ಹುಡುಕಿ ಕ್ವಾರಂಟೈನ್‌ನಲ್ಲಿಡಲಿದ್ದಾರೆ. ಲಾಕ್‌ಡೌನ್‌ ನಿಯಮಗಳು ಉಲ್ಲಂಘನೆಯಾಗದಂತೆ ಅನುಮತಿ ನೀಡಿದ ವ್ಯವಹಾರಗಳನ್ನು ಎಲ್ಲರೂ ಧಾರಾಳವಾಗಿ ಮುನ್ನಡೆಸಿ ಎಂದರು.

ಪಿಎಸ್‌ಐ ಕುಮಾರ ಹಾಡಕರ ಮಾತನಾಡಿದರು. ಪೌರಾಯುಕ್ತ ಮಹಾವೀರ ಬೋರನ್ನವರ, ಎಂಜಿಎಂ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ನಗರಸಭೆ ಸದಸ್ಯ ಜಯವಂತ ಭಾಟಲೆ, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next