Advertisement

ಯತ್ನಾಳ ಕೇಳಿ ರಾಜ್ಯಾಧ್ಯಕ್ಷರನ್ನು ನೇಮಿಸಬೇಕಿಲ್ಲ: ಈಶ್ವರಪ್ಪ

10:33 AM Aug 23, 2019 | keerthan |

ವಿಜಯಪುರ: ನಳೀನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಪಕ್ಷದ ವರಿಷ್ಠರು ಬಸನಗೌಡ ಪಾಟೀಲ ಯತ್ನಾಳ ಅವರನ್ನು ಕೇಳುವ ಅಗತ್ಯವಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಳೀನ್ ಕುಮಾರ್ ಕಟೀಲ್ ಮಂಗಳೂರು ಹೊರತಾಗಿ ರಾಜ್ಯದ ಜನರಿಗೆ ಗೊತ್ತಿಲ್ಲ ಎಂಬ ಹೇಳಿಕೆ ಸರಿಯಲ್ಲ. ನಾನು ರಾಜ್ಯಾಧ್ಯಕ್ಷನಾಗಿ ನೇಮಕವಾದಾಗ ವಿಜಯಪುರ ಜಿಲ್ಲೆಯ ಕುರಿತು ಗೊತ್ತಿರಲಿಲ್ಲ. ಈಗ ಇಡೀ ರಾಜ್ಯ ನನ್ನನ್ನು ಗುರುತಿಸುತ್ತಿದೆ. ಯತ್ನಾಳ ಇನ್ನಾದರೂ ತಮ್ಮ ವರ್ತನೆ ತಿದ್ದಿಕೊಳ್ಳಲಿ. ಪದೇ ಪದೇ ಇಂಥ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಗೋಡ್ಸೆ ಪರ‌ ಮಾತನಾಡಿದ ನಳೀನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ‌ಕಟ್ಟಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ರಮಾನಾಥ ರೈ ಇಂಥ ಹುಚ್ಚು ಹೇಳಿಕೆ ನೀಡುವುದನ್ನು‌ ಇನ್ನಾದರೂ ಬಿಡಬೇಕು. ಅವರ ಇಂಥ ವರ್ತನೆಗೆ ಅಲ್ಲಿನ‌ ಮತದಾರರು ರೈ ಅವರನ್ನು‌ ಮನೆಯಲ್ಲಿ ಕುಳ್ಳಿರಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಪಕ್ಷ ಕಾರ್ಯಕರ್ತರಿಂದ ಬಲಿಷ್ಠವಾಗಿದೆ. ಭವಿಷ್ಯದಲ್ಲಿ ಪಕ್ಷವನ್ನು ರಾಜ್ಯದಲ್ಲಿ ಅತ್ಯಂತ ಬಲಿಷ್ಠ ಮಾಡುವ ಅಗತ್ಯವಿದೆ. ಇದಕ್ಕಾಗಿ ಎಲ್ಲರೂ ನೂತನ ರಾಜ್ಯಾಧ್ಯಕ್ಷರಿಗೆ ಸಾಥ್ ನೀಡಬೇಕಿದೆ ಎಂದರು.

ಬಾಲಚಂದ್ರ ಜಾರಕಿಹೊಳಿ‌ ಮಾತ್ರವಲ್ಲ, ಯಾರು ಯಾರಿಗೆ ಬೇಕಾದರೂ ಗಡುವು ನೀಡಬಹುದು.‌ ನಮ್ಮದು ಪ್ರಜಾಪ್ರಭುತ್ವ ವಾಕ್ ಸ್ವಾತಂತ್ರ ರಾಷ್ಟ್ರ. ಪ್ರಸಕ್ತ ಸಂದರ್ಭದಲ್ಲಿ ಸರಕಾರ ಪೂರ್ಣ ಪ್ರಮಾಣದ ಬಹುಮತ ಸಿಗದಿರುವ ಕಾರಣ ಹಲವರನ್ನು ಸಚಿರನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಸಚಿವಾಕಾಂಕ್ಷಿಗಳು ಅಸಮಾಧಾನ ಹೊರ ಹಾಕಿದ್ದಾರೆಯೇ ಹೊರತು ಯಾರೂ ಸರಕಾರ ಕೆಡವಲು ಯತ್ನಿಸುವ ಹೇಳಿಕೆ ನೀಡಿಲ್ಲ ಎಂದು ಬಿಜೆಪಿ ಅತೃಪ್ತ‌ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

Advertisement

ಕಾಂಗ್ರೆಸ್-ಜೆಡಿಎಸ್ ತೊರೆಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಾಸಕರನ್ನು ಅನರ್ಹ ಮಾಡುವ ಮೂಲಕ ಹಿಂದಿನ ಸ್ಪೀಕರ್ ರಮೇಶಕುಮಾರ ಸಂವಿಧಾನಕ್ಕಿಂತ ತಾವು ದೊಡ್ಡವರಾಗಲು ಹೋಗಿದ್ದಾರೆ‌ ಎಂದು ಕುಟುಕಿದರು.

ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಹೀಗಾಗಿ ಸರಕಾರ ತಚನೆಗೆ ಕಾರಣವಾದ ಶಾಸಕರನ್ನು ಬಿಜೆಪಿ ಕೈ ಬಿಡುವುದಿಲ್ಲ. ಅವರು ಅನರ್ಹರರಲ್ಲ, ಸುಪ್ರೀಂ ಕೋರ್ಟ್ ಈ ಕುರಿತು ಶೀಘ್ರವೇ ನ್ಯಸಯದ ಪರ ಆದೇಶ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next