Advertisement

ಕ್ರಿಶ್ಚಿಯನ್ ನಿಯೋಗದಿಂದ ಸಿಎಂ ಭೇಟಿ : ಮತಾಂತರ ನಿಷೇಧ ಕಾಯಿದೆ ಅವಶ್ಯಕತೆ ಇಲ್ಲ

01:15 PM Dec 11, 2021 | Team Udayavani |

ಬೆಂಗಳೂರು : ಮತಾಂತರ ನಿಷೇಧ ಕಾಯಿದೆ ಜಾರಿಗೆ ಸರ್ಕಾರದ ಚಿಂತನೆ ಹಿನ್ನೆಲೆಯಲ್ಲಿ ಶುಕ್ರವಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಕ್ರಿಶ್ಚಿಯನ್ ಧರ್ಮದ ನಿಯೋಗ ಭೇಟಿ ಮಾಡಿ ಕಾಯಿದೆ ಜಾರಿ ಬೇಡ ಎಂದು ಮನವಿ ಸಲ್ಲಿಸಿದೆ.

Advertisement

ರೇಸ್ ಕೋರ್ಸ್ ರಸ್ತೆಯಲ್ಲಿ ರುವ ಸಿಎಂ ನಿವಾಸದಲ್ಲಿ ಭೇಟಿ ನಡೆದಿದ್ದು, ರೂನಾಲ್ಡ್ ಕೊಲಾಸೊ ನೇತೃತ್ವದ ನಿಯೋಗದಲ್ಲಿ ಮಾಜಿ ಪರಿಷತ್ ಸದಸ್ಯ ಐವಾನ್ ಡಿಸೋಜ , ಕಾಂಗ್ರೆಸ್ ನಾಯಕ ನಾಯಕ ರಾಧಾಕೃಷ್ಣ ಮೊದಲಾದವರಿದ್ದರು.

ಕರ್ನಾಟಕದಲ್ಲಿನ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಚರ್ಚ್ ಮೇಲೆ ಆಗುತ್ತಿರುವ ದಾಳಿ ಪ್ರಕರಣಗಳ ಬಗ್ಗೆ ಕ್ರಮ ವಹಿಸುವಂತೆಯೂ ಮನವಿ‌ ಮಾಡಲಾಯಿತು.

Advertisement

”ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸಮುದಾಯದ ರೇಷಿಯೋ ಕಡಿಮೆಯಾಗಿದೆ. ಆದರೂ ನಾವೂ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಅಂತಾ ಬಿಂಬಿಸಲಾಗುತ್ತಿದೆ. ಈ ರೀತಿ ಬಿಂಬಿಸುವುದು ಸರಿಯಲ್ಲ. ಸಮಾಜದಲ್ಲಿ ನಾವೂ ಗೌರಯುತವಾಗಿ ಬದುಕಲು ಅವಕಾಶ ಮಾಡಿಕೊಡಿ. ಮೊದಲು ನಮ್ಮ ಮೇಲೆ ಆಗುತ್ತಿರುವ ದಾಳಿಯನ್ನ ತಪ್ಪಿಸಿ ಎಂದು ಸಿಎಂಗೆ ನಮ್ಮ ಮನವಿಯನ್ನ ಒಪ್ಪಿಸಿದ್ದೇವೆ ಎಲ್ಲವನ್ನು ಸರಿಪಡಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ” ಎಂದು ಭೇಟಿಯ ಬಳಿಕ ರೊನಾಲ್ಡ್ ಕೊಲಾಸೊ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದಿಂದ ಮತಾಂತರ ನಿಷೇಧ ಕಾಯಿಂದ ಮಂಡನೆ ಸಾಧ್ಯತೆ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next