Advertisement

ದೊಡ್ಡ ಮಟ್ಟದ ಬದಲಾವಣೆ ಅಗತ್ಯವಿಲ್ಲ: ಕೊಹ್ಲಿ

06:25 AM Sep 13, 2018 | Team Udayavani |

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 1-4 ಅಂತರದಿಂದ ಸೋತ ಬಳಿಕ ನಾಯಕ ವಿರಾಟ್‌ ಕೊಹ್ಲಿ ತಂಡದ ದೌರ್ಬಲ್ಯಗಳ ಬಗ್ಗೆ ಪಟ್ಟಿ ಮಾಡಿದ್ದಾರೆ. ಆದರೆ ಈ ಸೋಲನ್ನು ಗಂಭೀರವಾಗಿ ಪರಿಗಣಿಸುವ ಮತ್ತು ಇದಕ್ಕಾಗಿ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡುವುದು ಅಗತ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

Advertisement

ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್‌ ಸ್ವಲ್ಪಮಟ್ಟಿಗೆ ದುರ್ಬಲ ತಂಡ. ಆದರೂ ಭಾರತವು ಇಂಗ್ಲೆಂಡ್‌ ವಿರುದ್ಧ ಮೇಲುಗೈ ಸಾಧಿಸಲು ಒದ್ದಾಡಿದೆ ಮತ್ತು ಸರಣಿಯುದ್ದಕೂಕ್ಕ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದೆ. ಈ ಸರಣಿಯಲ್ಲಿ ನಮ್ಮ ಆಟದ ರೀತಿಯನ್ನು ಗಮನಿಸಿದರೆ ದೊಡ್ಡ ಮಟ್ಟದ ಬದಲಾವಣೆ ಮಾಡುವ ಅಗತ್ಯ ಕಾಣುವುದಿಲ್ಲ. ಪ್ರತಿಯೊಂದು ಪಂದ್ಯದಲ್ಲಿ ನಾವು ಸ್ಪರ್ಧಿಸುವಾಗ ಪಂದ್ಯದ ಯಾವುದಾದರೊಂದು ಘಟದಲ್ಲಿ ಮೇಲುಗೈ ಸಾಧಿಸಿದ್ದರೆ ನಾವು ಸರಿಯಾದ ರೀತಿಯಲ್ಲಿ ಆಡುತ್ತಿದ್ದೇವೆ ಎಂಬುದು ಸ್ಪಷ್ಟ ಎಂದು ಕೊಹ್ಲಿ ಐದನೇ ಟೆಸ್ಟ್‌ನಲ್ಲಿ 118 ರನ್ನುಗಳಿಂದ ಸೋತ ಬಳಿಕ ನುಡಿದರು.

ಇಂಗ್ಲೆಂಡ್‌ ವಿರುದ್ಧದ ಸೋಲಿನಿಂದಾಗಿ ವಿದೇಶಿ ನೆಲದಲ್ಲಿ ಭಾರತದ ಕಳಪೆ ಅಂಕಿಅಂಶ ಮುಂದುವರಿಯಿತು. ದಕ್ಷಿಣ ಆಫ್ರಿಕಾ ಸರಣಿ ವೇಳೆಯೂ ಭಾರತ ನೀರಸ ಪ್ರದರ್ಶನ ನೀಡಿತ್ತು. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ವಿರುದ್ಧದ ಸರಣಿ ಸೋಲನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಯಾಕೆಂದರೆ ನಾವು ಯಾವ ರೀತಿಯ ಕ್ರಿಕೆಟ್‌ ಆಡುತ್ತೇವೆ ಎಂಬುದರ ಮೇಲೆ ನಮ್ಮ ಸಾಮರ್ಥ್ಯ ನಿಂತಿದೆ. ಭಾರತ ಸರಣಿ ಸೋತಿರಬಹುದು. ಆದರೆ ಪಂದ್ಯದ ಕೆಲವೊಂದು ಘಟದಲ್ಲಿ ಇಂಗ್ಲೆಂಡಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೊಹ್ಲಿ ತಿಳಿಸಿದರು.

ನಾವು ಒತ್ತಡ ಹೇರಿದ್ದೆವು. ಆದರೆ ಆ ಒತ್ತಡವನ್ನು ದೀರ್ಘ‌ ಹಂತದವರೆಗೆ ಬ್ಯಾಟ್‌ ಮತ್ತು ಬೌಲಿಂಗ್‌ ಮೂಲಕ ಹಿಡಿದಿಟ್ಟುಕೊಳ್ಳಲು ವಿಫ‌ಲರಾದೆವು. ಆದರೆ ಅವರು (ಇಂಗ್ಲೆಂಡ್‌) ಇಂತಹ ಪರಿಸ್ಥಿತಿಯ ಲಾಭವನ್ನು ನಮಗಿಂತ ಹೆಚ್ಚು ಪಡೆದಿರುವುದು ಸೋಲಿಗೆ ಕಾರಣವಾಯಿತು ಎಂದು ಕೊಹ್ಲಿ ವಿವರಿಸಿದರು.

ಸರಣಿ ಸಾಗಿದ ರೀತಿಗೆ ಬೇಸರ
ಕೇವಲ ಒಂದು ಟೆಸ್ಟ್‌ ಗೆಲ್ಲುವುದು ಮುಖ್ಯವಾಗಿರಲಿಲ್ಲ. ಆದರೆ ಸರಣಿ ಗೆಲ್ಲುವುದು ನಮ್ಮ ಗುರಿಯಾಗಿತ್ತು. ಸರಣಿ ಸಾಗಿದ ರೀತಿಯಿಂದ ನಮಗೆ ಬೇಸರವಾಗಿದೆ. ಆದರೆ ನಾವು ಛಲದಿಂದ ಆಡಿದ್ದೇವೆ ಮತ್ತು ಪ್ರತಿಯೊಂದು ಪಂದ್ಯವನ್ನು ಗೆಲ್ಲಲೇಬೇಕೆಂಬ ಉದ್ದೇಶದಿಂದ ಶಕ್ತಿಮೀರಿ ಹೋರಾಡಿದ್ದೇವೆ ಎಂದು ಕೊಹ್ಲಿ ಹೇಳಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next