ಬೆಂಗಳೂರು: ರೈತರ ಪಂಪ್ ಸೆಟ್ ಗೆ ಯಾವುದೇ ಕಾರಣಕ್ಕೂ ಮೀಟರ್ ಅಳವಡಿಕೆ ಇಲ್ಲ. ಎಸ್ ಸಿ/ ಎಸ್ ಟಿ ಕುಟುಂಬಗಳಿಗೆ 75 ಯೂನಿಟ್ ವಿದ್ಯುತ್ ನಿಲ್ಲಿಸುವುದೂ ಇಲ್ಲ. ಇದೆಲ್ಲಾ ಕಾಂಗ್ರೆಸ್ ಹುನ್ನಾರ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅಮೃತಜ್ಯೋತಿ ಯೋಜನೆ ಕುರಿತಂತೆ ಕಾಂಗ್ರೆಸ್ ಆರೋಪಗಳಿಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ಎಸ್ಕಾಂ, ಕೆಪಿಟಿಸಿಎಲ್ ಗೆ ಎಂಟು ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದೆ ಸಮಸ್ಯೆಗೆ ಕಾರಣ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದ ನಂತರ ಹಣ ಬಿಡುಗಡೆ ಮಾಡಿದರಿಂದ ಸಮಸ್ಯೆ ನಿವಾರಣೆಯಾಗಿದೆ. 1200 ಕೋಟಿ ರೂ. ರೈತರಿಗೆ ಉಚಿತ ವಿದ್ಯುತ್ ಕೊಡಲು ಹೆಚ್ಚುವರಿಯಾಗಿ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದ ನಂತರ ಹಣ ಬಿಡುಗಡೆ ಮಾಡಿದರಿಂದ ಸಮಸ್ಯೆ ನಿವಾರಣೆಯಾಗಿದೆ. 1200 ಕೋಟಿ ರೂ. ರೈತರಿಗೆ ಉಚಿತ ವಿದ್ಯುತ್ ಕೊಡಲು ಹೆಚ್ಚುವರಿಯಾಗಿ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದರು.
ಇದನ್ನೂ ಓದಿ:ಪಶ್ಚಿಮಬಂಗಾಳ; ಸೇನಾ ಕಂಟೋನ್ಮೆಂಟ್ ಆಸ್ಪತ್ರೆ ವಾರ್ಡ್ ಗೆ ನುಗ್ಗಿದ ಆನೆಗಳು-ವಿಡಿಯೋ ವೈರಲ್
ಕಾಂಗ್ರೆಸ್ ಅವಧಿಯಲ್ಲೇ ಕೃಷಿ ಪಂಪ್ ಸೆಟ್ ಗೆ ಮೀಟರ್ ಅಳವಡಿಕೆಗೆ ಹುನ್ನಾರ ನಡೆದಿತ್ತು ಎಂದು ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದರು.