Advertisement

ಕೋಲಾರದ ಕೆಜಿಎಫ್ ಚಿನ್ನದ ಗಣಿ ಬಗ್ಗೆ ಪ್ರಸ್ತಾಪವಿಲ್ಲ

07:09 AM Feb 02, 2019 | |

ಕೋಲಾರ: 19 ವರ್ಷಗಳ ಹಿಂದೆ ಮುಚ್ಚಲ್ಪಟ್ಟ ಚಿನ್ನದ ಗಣಿಯನ್ನು ಪುನಾರಂಭಿಸಲು ಸುಪ್ರಿಂ ಕೋರ್ಟ್‌ ಹಸಿರು ನಿಶಾನೆ ತೋರಿಸಿದರೂ, ಚಿನ್ನದ ಗಣಿ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಯಾವುದೇ ವಿಧದಲ್ಲೂ ಪ್ರಯತ್ನಿಸಿಲ್ಲ. ಸರ್ಕಾರಗಳು ಬಿಜಿಎಂಎಲ್‌ನ ಆಸ್ತಿಯನ್ನು ಸರ್ವೇ ಮಾಡಿಸಿ ಪಟ್ಟಿ ಮಾಡಿಸಿದ್ದೇ ಸಾಧನೆ ಎನ್ನುವಂತಾಗಿದೆ.

Advertisement

ಮೂರೂವರೆ ಸಾವಿರ ಕಾರ್ಮಿಕ ಕುಟುಂಬಗಳು ಇಂದಿಗೂ ಕೆಲಸಕ್ಕಾಗಿ ಬೆಂಗಳೂರಿಗೆ ನಿತ್ಯ ಪ್ರಯಾ ಣಿಸಬೇಕಾಗಿದೆ. ಗಣಿ ಕಾರ್ಮಿಕರಿಗೆ ಪುನರ್ವಸತಿ ಯೋಜನೆ ಘೋಷಿಸಿ ಅನುಷ್ಠಾನಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿ ರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣ.

ಇನ್ನು ಕೆಜಿಎಫ್ನಲ್ಲಿರುವ ಬೆಮೆಲ್‌ ಕಾರ್ಖಾ ನೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೈಹಾಕುವ ಮೂಲಕ ಅಲ್ಲಿನ ಕಾರ್ಮಿಕ ವರ್ಗದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕುರಿತು ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಮೆಲ್‌ ಖಾಸಗೀಕರಣದ ಪ್ರಯತ್ನ ನಿಂತಿಲ ್ಲ ವಾದರೂ ಕೊಂಚ ವಿಳಂಬವಾಗುವಂತಾಗಿದೆ.

ಬಾರದ ವೈದ್ಯಕೀಯ ಕಾಲೇಜು: ಪ್ರತಿ ಸಂಸದೀಯ ಕ್ಷೇತ್ರದಲ್ಲೂ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಈ ಬಗ್ಗೆ ಶುಕ್ರವಾರದ ಬಜೆಟ್‌ನಲ್ಲಿಯೂ ಯಾವುದೇ ಚಕಾರ ಎತ್ತಿಲ್ಲ.

ಹೈನು, ಪಶು ,ರೇಷ್ಮೆಗೆ ಸಹಕಾರಿ ಇಲ್ಲ: ಜಿಲ್ಲೆಯ ರೈತರು ಹೆಚ್ಚಾಗಿ ಅವಲಂಬಿಸಿರುವ ಹೈನುಗಾರಿಕೆ, ಪಶುಪಾಲನೆ ಮತ್ತು ರೇಷ್ಮೆ ಕೃಷಿಯೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಲಿಲ್ಲ. 2018 ನೇ ಕೇಂದ್ರ ಬಜೆಟ್‌ನಲ್ಲಿ ಹೈನುಗಾರಿಕೆ, ಆಹಾರ ಸಂಸ್ಕರಣೆ, ಪಶುಪಾಲನೆಗೆ ಸಾವಿರಾರು ಕೋಟಿ ರೂ.,ಗಳ ಯೋಜನೆ ಪ್ರಕಟಿಸಿತ್ತು.

Advertisement

ಆದರೆ, ಜಿಲ್ಲೆಯಲ್ಲಿ ಯಾವುದೇ ಹೊಸ ಯೋಜನೆ ಆರಂ ಭವಾಗಲೇ ಇಲ್ಲ. ಹಾಗೆಯೇ ಟೊಮೆಟೋ, ಈರು ಳ್ಳಿ, ಆಲೂಗಡ್ಡೆಗೆ ಫ‌ುಡ್‌ಪಾರ್ಕ್‌ ನಿರ್ಮಾ ಣವನ್ನು ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಜಿಲ್ಲೆಗೆ ಈ ಫ‌ುಡ್‌ ಪಾರ್ಕ್‌ಗಳು ದಕ್ಕಲೇ ಇಲ್ಲ. ಶಾಶ್ವತ ನೀರಾವರಿ ಯೋಜನೆಗೆ ಗಮನ ಹರಿಸಿಲ್ಲ. ಈ ಕುರಿತು 6ನೇ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ.

ನಿರಾಶದಾಯಕ ಬಜೆಟ್ ಮಂಡಿಸಿದ್ದಾರೆ: ರೈತರಿಗೆ ನಿರಾಶದಾಯಕ ಬಜೆಟ್ ಆಗಿದ್ದು, ಸ್ಪಷ್ಟತೆಯಿಲ್ಲವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ , ಸಾಲಾಮನ್ನಾ, ಬೆಂಬಲ ಬೆಲೆ ಯೋಜನೆಗಳಿಲ್ಲ. ಬೆಳೆ ವಿಮೆ ವಿಚಾರದಲ್ಲಿ ಡಾ.ಸ್ವಾಮಿನಾಥನ್‌ ವರದಿ ಗಾಳಿಗೆ ತೂರಿದ್ದಾರೆ. ಉದ್ಯೋ ಗ ನಿರ್ಮಾಣ ಭರವಸೆ ಹುಸಿಯಾಗಿದೆ. ಆಯುಷ್ಮಾನ್‌ ಆರೋಗ್ಯ ಮತ್ತು ಸ್ವಚ್ಛ ಭಾರತ್‌ ಕಾರ್ಯಕ್ರಮಗಳು ಇನ್ನೂ ಜನರಿಗೆ ಮುಟ್ಟುವಂತೆ ಮಾಡಬೇಕಿದೆ ಎಂದು ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಶ್ರೀನಿವಾಸಪುರ ಸೂರ್ಯನಾರಾಯಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next