Advertisement
ಮಿನಿ ವಿಧಾನಸೌಧದಲ್ಲಿ ಗುರುವಾರ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅಧ್ಯಕ್ಷತೆ ಯಲ್ಲಿ ನಡೆದ ಪ. ಜಾತಿ-ಪ. ಪಂಗಡ ಹಿತರಕ್ಷಣ ಸಭೆಯಲ್ಲಿ ದಲಿತ ಮುಖಂ ಡರು ಸಮಸ್ಯೆಗಳನ್ನು ತಿಳಿಸಿದರು.
Related Articles
ನಾವೂರಿನಲ್ಲಿ ದಲಿತರಿಗೆ ಸೇರಿದ ಪಟ್ಟಾ ಜಾಗದಲ್ಲಿ ಅರಣ್ಯ ಇಲಾಖೆ ಗಿಡ ನೆಟ್ಟಿದೆ. ಅಧಿಕಾರಿಗಳು ಮರ ತೆರವಿಗೆ ನೇಮಿರಾಜ ಕಿಲ್ಲೂರು ಆಗ್ರ ಹಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆಯವರು, ಅರಣ್ಯ ಇಲಾಖೆಯ ಜಾಗದಲ್ಲಿ ಮಾತ್ರ ಗಿಡ ನಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಉತ್ತರಿಸಿದ ತಹಶೀಲ್ದಾರರು, ಸ್ಥಳ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
Advertisement
ಅಳದಂಗಡಿಯಲ್ಲಿ ಇತ್ತೆಂದು ಹೇಳಲಾದ ಅಂಬೇಡ್ಕರ್ ಭವನವನ್ನು ಕೆಡವಿ ಕಟ್ಟಡ ಕಟ್ಟುತ್ತಿದ್ದಾರೆ ಎಂದು ಶೇಖರ ಲಾೖಲ ಆರೋಪಿಸಿದರು. ಈ ಬಗ್ಗೆ ಪರಿಶೀಲಿಸಿಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು. ಸಭೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿ ಕಾರಿ ಕೆ.ಇ. ಜಯರಾಂ, ತಾ| ಸಮಾಜ ಕಲ್ಯಾಣಾಧಿಕಾರಿ ಎಚ್.ಎಂ. ಪಾಟೀಲ್, ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯ ಓಬಯ್ಯ ಉಪಸ್ಥಿತರಿದ್ದರು. ಪ್ರಮುಖ ಸಮಸ್ಯೆಗಳ ಚರ್ಚೆ
ಮುಂಡಾಜೆ-ಧರ್ಮಸ್ಥಳ ರಸ್ತೆ ತೆಪ್ಪದಗಂಡಿ ಸಮೀಪ ರಸ್ತೆ ದುರಸ್ತಿಗೆ ಆಗ್ರಹ
ದಲಿತ ಸಮುದಾಯದ ಮೇಲಿನ ದೌರ್ಜನ್ಯ ವಿರುದ್ಧ
ಖಂಡನ ನಿರ್ಣಯಕ್ಕೆ ಆಗ್ರಹ
ಮೆಸ್ಕಾಂ ನೂತನ ವಿದ್ಯುತ್ ಮೀಟರ್‌ನಿಂದ
ದುಪ್ಪಟ್ಟು ಬಿಲ್: ಕ್ರಮಕ್ಕೆ ಸೂಚನೆ
ಮಾದಕ ಜಾಲ ಹತ್ತಿಕ್ಕಲು ಮುಖಂಡರ ಆಗ್ರಹ
ಉಜಿರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೂಗು
ಶಿಶಿಲ, ಶಿರ್ಲಾಲು ಸಹಿತ ಶಿಲಾನ್ಯಾಸಗೊಂಡ ಅಂಬೇಡ್ಕರ್ ಭವನ
ಕಾಮಗಾರಿ ಆರಂಭಿಸುವಂತೆ ಆಗ್ರಹ
ಶಿರ್ಲಾಲು- ಶಾಂತಿಗುಡ್ಡೆಗೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ ಕಲಾ ವಿಭಾಗಕ್ಕೆ ಮಾತ್ರ ಪ್ರವೇಶ
ವೇಣೂರಿನ ಸರಕಾರಿ ಕಾಲೇಜಿನಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಕಲಾ ವಿಭಾಗದಲ್ಲಿ ಮಾತ್ರ ಪ್ರವೇಶ ನೀಡಲಾಗುತ್ತಿದೆ.ಇದರಿಂದಾಗಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ದಲಿತ ಮುಖಂಡರು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಇದೇ ವಿಚಾರ ನನ್ನ ಗಮನಕ್ಕೂ ಬಂದಿದ್ದು, ಒತ್ತಾಯ ಪೂರ್ವಕವಾಗಿ ಕಲಾ
ವಿಭಾಗಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿಕ್ರಿಯಿಸಿದ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಈ ವಿಚಾರದ
ಬಗ್ಗೆ ಕೂಡಲೇ ಗಮನಹರಿಸುತ್ತೇನೆ. ಅಧಿಕಾರಿಗಳು ವೇಣೂರು ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸುವರು ಎಂದು ತಿಳಿಸಿದರು.