Advertisement
ಗುಬ್ಬಿ ತಾಲೂಕಿನ ಚೇಳೂರು ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರುವಾಸಿಯಾದ ಮಾರುಕಟ್ಟೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಹಣ್ಣುಗಳು ಈ ಮಾರುಕಟ್ಟೆಗೆ ಬರುತ್ತಿವೆ. ಕಳೆದ ವರ್ಷಉತ್ತಮ ಮಳೆಯಾಗಿ ಉತ್ತಮ ಬೆಳೆಯೂ ಬಂದಿತ್ತು. ಆದರೆ, ಈ ಬಾರಿ ಮಾವಿನ ಗಿಡದಲ್ಲಿ ಕಾಯಿ ಬಂದಾಗ ಸರಿಯಾದ ಸಮಯಕ್ಕೆ ಮಳೆಯಾಗದೇ ಫಲವತ್ತಾಗಿ ಬರ ಬೇಕಾಗಿದ್ದ ಮಾವಿನಕಾಯಿಗಳ ಇಳುವರಿ ಕಡಿಮೆಯಾಗಿ ಸಣ್ಣ ಗಾತ್ರದಲ್ಲಿಯೇ ನಿಂತುಕೊಂಡಿವೆ.
Related Articles
Advertisement
ಈ ವರ್ಷ ತೋತಪುರಿ ಕೆ.ಜಿ.ಗೆ 8-12ರೂ., ಮಲಗೊಬಾ 20-30 ರೂ., ರಸಪುರಿ 15-20ರೂ., ಸೆಂಧೂರ 10-15 ರೂ., ಬೆನೀಷ್ 15-20ರೂ., ಬಾದಾಮಿ 20-30 ರೂ. ಬೆಲೆ ಪಡೆದುಕೊಂಡಿವೆ. ಇತರೆ ಜಾತಿಯ ಹಣ್ಣುಗಳಿಗೂ ಉತ್ತಮ ಬೆಲೆಯಿಲ್ಲ. ಇಂತಹ ಬೆಲೆಯಲ್ಲಿ ಮಾವಿನಕಾಯಿ ಕೀಳುವ ಕೂಲಿ ಯೂ ಸಿಗುವುದು ಕಷ್ಟವಾಗಿದೆ. ಸರಿಯಾದ ಬೆಳೆಯಿಲ್ಲದೇ ಕಂಗೆಟ್ಟ ಕೆಲವು ರೈತರು, ಮಾವಿನಗಿಡಗಳನ್ನೇ ತೆಗೆಯುವ ಯೋಚನೆ ಮಾಡುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಮಾವು ಅಭಿವೃದ್ಧಿ ಮಂಡಳಿ ಸೂಕ್ತ ಸಲಹೆ ಹಾಗೂ ಸಹಕಾರವನ್ನು ರೈತರಿಗೆ ನೀಡಬೇಕಾಗಿದೆ ಎಂದು ರೈತರ ಅಭಿಪ್ರಾಯವಾಗಿದೆ.
● ಸಿ.ಟಿ.ಮೋಹನ್‌ರಾವ್