ಬೆಳಗಾವಿ : ಇಂದು ಮತಾಂತರ ವಿರೋಧಿ ಕಾಯ್ದೆ ವಿಧಾನ ಸಭೆಯಲ್ಲಿ ಪಾಸಾಗಿದ್ದು, ನಮಗೆ ಗೊತ್ತಿದೆ ಇವತ್ತಿನ ಪರಿಸ್ಥಿತಿಯಲ್ಲಿ ಪರಿಷತ್ ನಲ್ಲಿ ಬಹುಮತವಿಲ್ಲ, ಮುಂದೆ ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗುರುವಾರ ಹೇಳಿಕೆ ನೀಡಿದ್ದಾರೆ.
ಇಡೀ ದಿನ ಚರ್ಚೆಗೆ ಅವಕಾಶ ನೀಡಲಾಗಿತ್ತು. ಆದರೆ ವಿಪಕ್ಷದವರು ರಾಜಕೀಯ ಭಾಷಣ ಮಾಡಿದರು . ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ, ಕಾನೂನು ಸಂವಿಧಾನ ಬದ್ದವಾಗಿದೆ. ಸಿದ್ದರಾಮಯ್ಯ ಅವರೇ ಸಚಿವ ಸಂಪುಟಕ್ಕೆ ತರಲು ಒಪ್ಪಿದ್ದರು. ಆದರೆ ಅವರು ತಿರಸ್ಕರಿಸಬಹುದಿತ್ತು ಎಂದರು.
ಆರ್ ಎಸ್ ಎಸ್ ಓಪನ್ ಅಜೆಂಡಾ ಇದು. ಯಡಿಯೂರಪ್ಪ ಅವರು ಡ್ರಾಫ್ಟ್ ಮಾಡಿದ್ದರು. ಕಾನೂನು ರಚನೆಗೆ ಕಳಿಸಲಾಗಿತ್ತು.ನಮ್ಮಲ್ಲಿ ಸ್ಪಷ್ಟವಾದ ನೀತಿ ಇದೆ. ಎಸ್ ಸಿ , ಎಸ್ ಟಿ ಜನರ ಪರವಾಗಿದೆ.ಎಲ್ಲ ಜನಾಂಗದ ಅಭಿವೃದ್ಧಿ ಪರವಾಗಿದೆ. ಬಡತನ, ನಿರುದ್ಯೋಗ ಇದೆ.ಕಾಂಗ್ರೆಸ್ ಪಕ್ಷದವರು ರಾಜಕೀಯ ದಾಳ ಮಾಡಲು ಮುಂದಾಗಿದ್ದಾರೆ.ಎಸ್ ಸಿ , ಎಸ್ ಟಿ ವಿರೋಧಿ ನೀತಿಯನ್ನ ತಾಳಿದ್ದಾರೆ ಎಂದರು.
ಒಮಿಕ್ರಾನ್ ಬಗ್ಗೆ ನಿನ್ನೆ ಸಭೆ ಮಾಡಿದ್ದೆ.ದೇಶದಲ್ಲಿ ಹೆಚ್ಚಾಗುತ್ತದೆ ಅಂತ ವರದಿ ಇದೆ.ಅದಕ್ಕಾಗಿ ಆಕ್ಸಿಜನ್, ಬೆಡ್ ಎಲ್ಲದರ ತಯಾರಿ ಮಾಡಲಾಗಿದೆ ಎಂದರು.
ಸಚಿವ ಸಂಪುಟ ಪುನಾರಚನೆ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಹೈಕಮಾಂಡ್ ಜೊತೆ ಚರ್ಚೆ ನಡೆಸದೆ ಏನೂ ಹೇಳಲು ಆಗುವುದಿಲ್ಲ. ಸಚಿವ ಸಂಪುಟ ಪುನಾರಚನೆ ಆದರೆ ನಾನು ನಿಮಗೆ ತಿಳಿಸುತ್ತೇನೆ. ಕಾದು ನೋಡಿ ಎಂದರು.