Advertisement
ಜಿಲ್ಲೆಯ ತಾಲೂಕು ಕೇಂದ್ರದಲ್ಲಿರುವ ಎಪಿಎಂಸಿ ಎಳನೀರು ಮಾರುಕಟ್ಟೆ ವ್ಯಾಪಾರ ವಹಿವಾಟಿನಲ್ಲಿ ರಾಜ್ಯ ದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಮಾರುಕಟ್ಟೆ ಆವರಣದಲ್ಲಿ ಮೂಲ ಸೌಲಭ್ಯಗಳಿಲ್ಲದೆ ಗ್ರಾಹಕರು, ವರ್ತಕರು, ರೈತರು, ವ್ಯಾಪಾರಸ್ಥರು, ದಿನನಿತ್ಯ ಬಳಲುವಂತಾಗಿದೆ.
Related Articles
Advertisement
ನಿತ್ಯ 50ಕ್ಕೂ ಹೆಚ್ಚು ಲೋಡ್ ಎಳನೀರು ರಫ್ತು: ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿ ಕಾರ್ಯನಿರ್ವಹಿಸಿದರೆ ಸಂಬಂ ಧಿಸಿದ ಸಚಿವರು ಹಾಗೂ ಸರ್ಕಾರದ ಮೇಲೆ ಒತ್ತಡ ತಂದು ಅನುದಾನವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತಿತ್ತು, ಆದರೆ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಹಲವು ಅಭಿವೃದ್ಧಿ ಕಾರ್ಯಗಳು ಕುಂಟಿತಗೊಳ್ಳಲು ಕಾರಣವಾಗಿವೆ. ಮಾರುಕಟ್ಟೆಯಿಂದ ಪ್ರತಿನಿತ್ಯ 50ಕ್ಕೂ ಹೆಚ್ಚು ಎಳನೀರು ಲೋಡುಗಳು ನೆರೆ ರಾಜ್ಯಗಳಿಗೆ ರವಾನೆ ಯಾಗುತ್ತಿದ್ದು ಜತೆಗೆ ಬೆಂಗಳೂರು ನಗರಕ್ಕೂ ಸರಬರಾಜು ಆಗುವ ಮೂಲಕ ಅಲ್ಲಿನ ಜನರ ದಾಹ ತೀರಿಸುತ್ತಿದ್ದು, ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಮದ್ದೂರು ಎಪಿಎಂಸಿ ಮಾರುಕಟ್ಟೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ಹಲವು ಕಾಮಗಾರಿಗಳು ಸ್ಥಗಿತ: ಅಭಿವೃದ್ಧಿ ಮಾತ್ರ ಶೂನ್ಯವಾಗಿದ್ದು, ಸಮರ್ಪಕವಾಗಿ ಕಸ ವಿಲೇವಾರಿ ಮಾಡಿದ ಕಾರಣ ವರ್ತಕರು, ರೈತರು, ವ್ಯಾಪಾರಸ್ಥರು, ಹಲವು ಅಧ್ವಾನಗಳ ನಡುವೆ ವ್ಯಾಪಾರ ನಡೆಸುವ ಜೊತೆಗೆ ಮೂಗು ಮುಚ್ಚಿಕೊಂಡೆ ದಿನದೂಡಬೇಕಾದ ಅನಿವಾರ್ಯತೆ ಕಂಡು ಬಂದಿದೆ. ಅ ಧಿಕಾರಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದು, ಕಳೆದ ಸರ್ಕಾರದ ಅವಧಿಯಲ್ಲಿ ನಾಲ್ಕು ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಅನುದಾನ ಸಾಕಾಗದ ಹಿನ್ನೆಲೆಯಲ್ಲಿ ರಸ್ತೆ ಡಾಂಬರೀಕರಣ ಸೇರಿದಂತೆ ಇನ್ನಿತರ ಕಾಮಗಾರಿಗಳು ಸ್ಥಗಿತಗೊಂಡಿವೆ.
ಅಧಿಕ ಬೆಲೆಗೆ ಟೆಂಡರ್: ಅಧಿಕಾರಕ್ಕೆ ಬಂದ ಸರ್ಕಾರಗಳು ಎಪಿಎಂಸಿ ಮಾರುಕಟ್ಟೆಗೆ ಚುನಾಯಿತ ಪ್ರತಿನಿ ಧಿಗಳನ್ನು ಆಯ್ಕೆ ಮಾಡಲು ಚುನಾವಣಾ ಪ್ರಕ್ರಿಯೆ ಕೈಗೊಳ್ಳದ ಹಿನ್ನೆಲೆಯಲ್ಲಿ ಅಭಿವೃದ್ಧಿಯಿಂದ ಕುಂಟಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಮಾರುಕಟ್ಟೆ ಆವರಣದಲ್ಲಿ ಅಶುಚಿತ್ವ ತಾಂಡವಾಡುತ್ತಿದ್ದು, ಚರಂಡಿಯಲ್ಲಿ ತ್ಯಾಜ್ಯ ವಸ್ತುಗಳಿಂದ ದುರ್ವಾಸನೆ ಬೀರುತ್ತಿದ್ದು, ಜತೆಗೆ ಪ್ರಾಂಗಣದ ಸುತ್ತಮುತ್ತ ಮಲಮೂತ್ರ ವಿಸರ್ಜನೆ ಮಾಡುವ ಮೂಲಕ ಗಬ್ಬೆದ್ದು ನಾರುತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದ್ದು, ಅ ನೈರ್ಮಲ್ಯದಿಂದ ಕೂಡಿರುವ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲು ಮತ್ತು ದಿನನಿತ್ಯದ ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಲು ಅಧಿಕ ಬೆಲೆಗೆ ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದರು. ಎಳನೀರು ಮಾರುಕಟ್ಟೆ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ.
ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಲು ಅಧಿಕ ಬೆಲೆಗೆ ಟೆಂಡರ್ ಪ್ರಕ್ರಿಯೆ ನೀಡಿದ್ದರೂ ಸಹ ಸಮರ್ಪಕವಾಗಿ ಕೈಗೊಳ್ಳದ ಕಾರಣ ಎಲ್ಲೆಡೆ ಅಶುಚಿತ್ವ ತಾಂಡವಾಡುತ್ತಿದೆ. ಕೂಡಲೇ ಸಂಬಂಧಿ ಸಿದ ಚುನಾಯಿತ ಪ್ರತಿನಿ ಧಿಗಳು ಹಾಗೂ ಅಧಿಕಾರಿಗಳು ಮಾರುಕಟ್ಟೆ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ವರ್ತಕರು, ವ್ಯಾಪಾರಸ್ಥರು, ಗ್ರಾಹಕರಿಗೆ, ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕಿದೆ. -ಎಸ್.ಶಿವರಾಜು, ಎಳನೀರು ವ್ಯಾಪಾರಿ ಹಾಗೂ ಎಪಿಎಂಸಿ ಮಾಜಿ ನಿರ್ದೇಶಕ
-ಎಸ್.ಪುಟ್ಟಸ್ವಾಮಿ