Advertisement
ಎಚ್ಡಿಕೆ ಮಾದರಿಯಲ್ಲಿ ನಾಯ್ಡು ಪ್ರತಿಭಟನೆಕರ್ನಾಟಕದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದನ್ನು ಖಂಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿರುವ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅದೇ ಮಾದರಿಯನ್ನು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅನುಸರಿಸಿದ್ದಾರೆ. ಟಿಡಿಪಿ ನಾಯಕ ಸಿ.ಎಂ. ರಮೇಶ್, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ಮಂಡಳಿ ಅಧ್ಯಕ್ಷ ಪುಟ್ಟ ಸುಧಾಕರ್ ಯಾದವ್ ನಿವಾಸದ ಮೇಲೆ ಗುರುವಾರ ನಡೆದ ದಾಳಿ ಖಂಡಿಸಿ ವಿಜಯವಾಡದಲ್ಲಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಐಟಿ ದಾಳಿಗೆ ಪ್ರಧಾನಿ ಮೋದಿಯವರೇ ಕಾರಣ. ದೇಶದ ಸಾಂವಿಧಾನಿಕ ಸಂಸ್ಥೆಗಳು ಇಂದು ಅಪಾಯಕಾರಿ ಸ್ಥಿತಿಯಲ್ಲಿವೆ. ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗಗಳನ್ನು ಮೋದಿ ತಮ್ಮ ಆಣತಿಯಂತೆ ಕುಣಿಸುತ್ತಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷವೂ ಬಿಜೆಪಿಗೆ ಕೈ ಜೋಡಿಸಿದ್ದು, ಇದರ ಪರಿಣಾಮವಾಗಿ, ಟಿಡಿಪಿ ನಾಯಕರ ನಿವಾಸಗಳ ಮೇಲೆ ರೈಡ್‌ಗಳಾಗುತ್ತಿವೆ. ಇಂಥ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಅಹ್ಮದ್‌ನಗರ್‌ನಿಂದ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಪುತ್ರ ಸುಜವ್ ವಿಖೆ ಪಾಟೀಲ್, ತಮ್ಮ ನಾಮಪತ್ರ ಸಲ್ಲಿಸಿ ಎರಡು ವಾರಗಳಾಗಿದೆಯಷ್ಟೆ. ಅದೇ ಕ್ಷೇತ್ರದಲ್ಲಿ ಅವರ ಪತ್ನಿಯೂ ಸಹ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಾಗಂತ, ಪತಿಯ ವಿರುದ್ಧವೇ ಪತ್ನಿ ಕಣಕ್ಕಿಳಿದಂತಲ್ಲ. ಇದೊಂದು ಮುನ್ನೆಚ್ಚರಿಕೆಯ ನಡೆ ಎಂದು ಸುಜಯ್ ಕುಟುಂಬದ ಮೂಲಗಳು ತಿಳಿಸಿವೆ. ಒಂದೊಮ್ಮೆ, ಸುಜಯ್‌ರವರ ನಾಮಪತ್ರ ತಿರಸ್ಕೃತವಾದರೆ ಪತ್ನಿಯನ್ನಾದರೂ ಗೆಲ್ಲಿಸುವ ಆಲೋಚನೆ ಅವರ ಕುಟುಂಬದ್ದು ಎಂದು ಹೇಳಲಾಗಿದೆ. “ಹೂವಿನ ಹಾಸಿಗೆ ಆಗಿರಲಿಲ್ಲ’
ಬಿಜೆಪಿ ನಾಯಕಿ, ಮಥುರಾ ಸಂಸದೆ ಹೇಮಮಾಲಿನಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಸ್ವಕ್ಷೇತ್ರಕ್ಕೆ 250 ಬಾರಿ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಯಾವ ವಿಚಾರವೂ ಹೂವಿನ ಹಾಸಿಗೆ ಆಗಿರಲಿಲ್ಲ ಎಂದು ಹೇಳಿಕೊಂಡಿರುವ ಅವರು, ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಮೊತ್ತ ವಿನಿಯೋಗ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
Related Articles
ವಯನಾಡ್‌ನಿಂದ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೂ ಅದೇ ಸಮಸ್ಯೆ ಉಂಟಾಗಿದೆ. ಕೇರಳ ವಿವಿಯಲ್ಲಿ ಸಂಶೋಧನ ವಿದ್ಯಾರ್ಥಿ ರಾಹುಲ್ ಗಾಂಧಿ ಕೆ.ಇ. ಎಂಬುವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅಖೀಲ ಇಂಡಿಯಾ ಮಕ್ಕಳ್ ಖಡಕಮ್ ಎಂಬ ಪಕ್ಷ ರಾಹುಲ್ ಗಾಂಧಿ ಕೆ. ಎಂಬುವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಇವ ರೆ ಲ್ಲರ ಜತೆಗೆ ಕೆ.ಎಂ.ಶಿವಪ್ರಸಾದ ಗಾಂಧಿ ಎಂಬುವರೂ ನಾಮಪತ್ರ ಸಲ್ಲಿಸಿದ್ದಾರೆ.
Advertisement
10ಕ್ಕೆ ರಾಹುಲ್, 11ಕ್ಕೆ ಸೋನಿಯಾ ನಾಮಪತ್ರವಯನಾಡ್ನಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿ ಯಿಂದ ಏ.10ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಎ. 11ರಂದು ರಾಯ್‌ಬರೇಲಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಭೋಪಾಲದಲ್ಲಿ ಅಡ್ವಾಣಿ ಪುತ್ರಿಗೆ ಟಿಕೆಟ್?
ಮಧ್ಯಪ್ರದೇಶದ ಭೋಪಾಲದಲ್ಲಿ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಿರುವ ಮಾಜಿ ಸಿಎಂ ದಿಗ್ವಿಜಯ ಸಿಂಗ್ ವಿರುದ್ಧ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಪುತ್ರಿ ಪ್ರತಿಭಾ ಅಡ್ವಾಣಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಗುರು ವಾರ ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಗಾಂಧಿನಗರದಲ್ಲಿ ಟಿಕೆಟ್ ನೀಡದೇ ಇರುವ ಬಗ್ಗೆ ಬೇಸರದ ದನಿಯಲ್ಲಿ ಬರೆದುಕೊಂಡ ನಂತರ ಈ ವಿಚಾ ರ ಮುನ್ನೆಲೆಗೆ ಬಂದಿದೆ. 2014 ರಲ್ಲೇ ಅಡ್ವಾಣಿಗೆ ಭೋಪಾಲದಲ್ಲಿ ಸ್ಪರ್ಧಿಸುವಂತೆ ಮುಖಂಡರು ಸಲಹೆ ನೀಡಿದ್ದರು. ಆದರೆ ಅವರು ನಿರಾಕರಿಸಿ, ಗಾಂಧಿ ನಗರದಲ್ಲೇ ಕಣಕ್ಕಿಳಿದಿದ್ದರು. 1989ರಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದೆ. ಪ್ರತಿಭಾ ಅಡ್ವಾಣಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಬಿಜೆ ಪಿ ಯಲ್ಲಿ ಕೊಂಚ ಅಸ ಮಾ ಧಾ ನ ವಿದ್ದು, ಇವರ ಬದ ಲಿಗೆ ಮ.ಪ್ರ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಸಚಿವ ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ. ಮುಸ್ಲಿಂ ಲೀಗ್ ವೈರಸ್ ಎಂದ ಯೋಗಿ
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷವನ್ನು ವೈರಸ್ ಎಂದು ಕರೆದಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಕಾಂಗ್ರೆಸ್‌ಗೆ ಈ ಮುಸ್ಲಿಂ ಲೀಗ್ ವೈರಸ್ ಬಾಧಿಸಿದೆ ಎಂದಿದ್ದಾರೆ. ಮುಸ್ಲಿಂ ಲೀಗ್ ಎಂಬ ವೈರಸ್‌ನಿಂದ ಬಾಧಿತರಾದವರು ಯಾರೂ ಉಳಿಯುವುದಿಲ್ಲ. ಕಾಂಗ್ರೆಸ್‌ಗೆ ಈ ವೈರಸ್ ಅಂಟಿಕೊಂಡಿದೆ. ಅವರು ಗೆದ್ದರೆ ಇಡೀ ದೇಶಕ್ಕೆ ಈ ವೈರಸ್ ಹರಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ವಯನಾಡ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಿಕ್ಕ ಪ್ರಚಾರದಿಂದ ಸಿಟ್ಟಾಗಿ ಈ ಹೇಳಿಕೆ ನೀಡಿದ್ದಾರೆ ಎಂದಿದೆ. ಬಾಂಡ್‌ಗೆ ಮಧ್ಯಂತರ ತಡೆ ಇಲ್ಲ
ಕೇಂದ್ರ ಸರಕಾರ ಜಾರಿ ಮಾಡಿದ ಚುನಾವಣಾ ಬಾಂಡ್‌ಗಳನ್ನು ರದ್ದು ಮಾಡುವ ಬಗ್ಗೆ ಮಧ್ಯಂತರ ಆದೇಶ ಕೊಡಬೇಕು ಎಂಬ ಮನವಿ ಪುರಸ್ಕರಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಬಗ್ಗೆ ಎನ್‌ಜಿಒ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ಏ.10ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುತ್ತದೆ. ಹೀಗಾಗಿ ಸಮರ್ಪಕ ರೀತಿಯಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿತು. ಪ್ರಧಾನಿ ಮೋದಿ ಬೆದರಿಕೆ ಹಾಕುವ ವ್ಯಕ್ತಿ. ರಾಬರ್ಟ್ ವಾದ್ರಾ ಅವರನ್ನು ಜೈಲಿಗೆ ಹಾಕುವುದಾ ಗಿ ಸೋನಿಯಾ ಗಾಂಧಿಗೆ ಬೆದರಿಕೆ ಒಡ್ಡುವ ಮೂಲಕ ಕಾಂಗ್ರೆಸ್ ಜತೆಗೆ ಇತರ ಪಕ್ಷಗಳು ಮೈತ್ರಿ ಮಾಡಿಕೊಳ್ಳದಂತೆ ನೋಡಿಕೊಳ್ಳುತ್ತಿದ್ದಾರೆ.
ಪ್ರಕಾಶ್ ಅಂಬೇಡ್ಕರ್, ದಲಿತ ಮುಖಂಡ