Advertisement

ಮತಾಂತರ ನಿಷೇಧ ಕಾಯ್ದೆಗೆ ಭಯ ಬೇಡ

05:59 PM Dec 25, 2021 | Team Udayavani |

ಅಥಣಿ: ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಮತಾಂತರ ಕಾಯ್ದೆಯನ್ನು ಜಾರಿಗೆ ತಂದಿರುವುದು ಬಿಜೆಪಿ ಸರ್ಕಾರದ ಸಣ್ಣತನ ತೋರಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.

Advertisement

ಅವರು ಶಿವಣಗಿ ಕಲ್ಯಾಣ ಮಂಟಪದಲ್ಲಿ ಅಥಣಿ ಪುರಸಭೆ ಚುನಾವಣೆ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿರುವುದರ ಕಡೆ ಗಮನ ಹರಿಸದೆ ಭಾವನಾತ್ಮಕವಾಗಿರುವ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲು ಬಿಜೆಪಿ ಹೊರಟಿದೆ. ದೇಶ ಕಟ್ಟುವಂತಹ ಕೆಲಸ ಮಾಡಬೇಕು ಹೊರತು ಒಡೆಯುವ ಕೆಲಸವಲ್ಲ. ಮತಾಂತರ ಕಾಯ್ದೆಗೆ ಯಾರೂ ಹೆದರಬೇಕಿಲ್ಲ ಎಂದರು.

ಅಥಣಿ ಪುರಸಭೆ ಟಿಕೆಟ್‌ ಹಂಚಿಕೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳಿಗೆ ನಿರಾಸೆ ಆಗುವುದು ಸಹಜ. ಇದು ಎಲ್ಲ ಪಕ್ಷದಲ್ಲಿ ಇರುವಂಥದ್ದು. ಇದಕ್ಕೇನು ಮಾಡಲಾಗದು. ಮರಾಠಿಗರ ವಿರುದ್ಧ ಸರ್ಕಾರ ಧನಿಯೆತ್ತುವ ಕೆಲಸ ಮಾಡಬೇಕು. ಕನ್ನಡಿಗರ ರಕ್ಷಣೆ ಸರ್ಕಾರದ ಹೊಣೆಯಾಗಿದೆ ಎಂದು ಹೇಳಿದರು. ಡಿಸೆಂಬರ 27 ರಂದು ನಡೆಯಲಿರುವ ಅಥಣಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು
ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಮಾಡುವಂತೆ ಕರೆ ನೀಡಿದರು.

ಇದೇ ವೇಳೆ ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್‌ ಮಾತನಾಡಿ, ಕರ್ನಾಟಕ ಸರ್ಕಾರ ಗುತ್ತಿಗೆದಾರರಿಂದ ಶೆ. 40 ಪರ್ಸೆಂಟೇಜ್‌ ವಸೂಲಿ ಮಾಡುತ್ತಿರುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಪತ್ರ ಬರೆದು ದೂರಿದರೂ ಸರ್ಕಾರ ಸುಮ್ಮನಿದೆ.

ಕಾಂಗ್ರೆಸ್‌ ಪಕ್ಷ ಬಡವರ ಪರ ಕಾಳಜಿ ಪೂರ್ವಕವಾದ ಪಕ್ಷವಾಗಿದೆ.ರಾಜ್ಯ ಸರ್ಕಾರ 40 ಪರ್ಸೆಂಟ್‌ ಸರ್ಕಾರವಾಗಿದೆ. ಬಿಜೆಪಿಗೆ ಶಿಕ್ಷೆ ಕೊಡಬೇಕಾದರೆ ಅಥಣಿ ಪುರಸಭೆ ಕಾಂಗ್ರೆಸ್‌ ಮಯವಾಗಬೇಕು ಎಂದರು. ಕಾಂಗ್ರೆಸ್‌ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಈ ಬಾರಿ ಅಥಣಿ ಪುರಸಭೆ ಅಧಿ ಕಾರದ ಚುಕ್ಕಾಣಿಯನ್ನು ಕಾಂಗ್ರೆಸ್‌ ಪಕ್ಷ ಹಿಡಿಯಲಿದೆ ಎಂದರು.

Advertisement

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ವೀರಕುಮಾರ ಪಾಟೀಲ, ಅಥಣಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ದಿಗ್ವಿಜಯ ದೇಸಾಯಿ, ಅನಿಲ ಸುಣದೋಳಿ, ಅಸ್ಲಂ ನಾಲಬಂದ, ರಮೇಶ ಪಾಟೀಲ, ಬಸವರಾಜ ಬುಟಾಳಿ, ಆಶಾ ಐಹೊಳಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next