Advertisement
ಪ್ರದೇಶದ ಜನಸಂಖ್ಯೆ ಮತ್ತು ಸಾಂಕ್ರಾಮಿಕದ ಭಯವನ್ನು ಗಮನಿಸಿದರೆ ವ್ಯಾಕ್ಸಿ ನೇಶನ್ ಕೇಂದ್ರಗಳಲ್ಲಿ ಭಾರೀ ಜನಸಂದಣಿ ಇರುತ್ತದೆ ಎಂದು ಮುಂಬಯಿ ಮಹಾನಗರ ಪಾಲಿಕೆಯು ಪ್ರಾರಂಭದಲ್ಲಿ ಭಾವಿಸಿತ್ತು. ಆದರೆ ವಾಸ್ತವವಾಗಿ ಆರಂಭ ದಲ್ಲಿ ಸ್ವಲ್ಪ ಜನಸಂದಣಿ ಇತ್ತು. ಬಳಿಕ ಅದು ಕೆಲವೇ ದಿನ ಗಳವರೆಗೆ ಮಾತ್ರ ಗೋಚರಿಸಿದೆ. ಧಾರಾವಿ ಮೂರು ವ್ಯಾಕ್ಸಿ ನೇಶನ್ ಕೇಂದ್ರಗಳನ್ನು ಹೊಂದಿದ್ದು, ಪ್ರತಿಯೊಂದು ಕೇಂದ್ರಗಳೂ 100 ಪ್ರಮಾಣವನ್ನು ಪಡೆದರೂ ನಾಗರಿಕರು ಸಹಕಾರ ಉತ್ತೇಜನಕಾರಿಯಾಗಿಲ್ಲ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles
Advertisement
ಪ್ರತಿ ಕೇಂದ್ರವು ಪ್ರತೀದಿನ 100 ಡೋಸ್‌ಗಳನ್ನು ಪಡೆಯುತ್ತಿದ್ದರೂ ಜೂನ್ ಮೊದಲ ಏಳು ದಿನಗಳಲ್ಲಿ ಮೂರು ಕೇಂದ್ರಗಳಲ್ಲಿ 866 ಡೋಸ್‌ಗಳನ್ನು ಮಾತ್ರ ನೀಡಲಾಗಿದೆ. ಸಯಾನ್ ಯುಎಚ್‌ಸಿ 406 ಡೋಸ್‌ಗಳನ್ನು ನೀಡಿದರೆ, ಟ್ರಾನ್ಸಿಟ್ ಕ್ಯಾಂಪ್ ಸೆಂಟರ್ 248 ಮತ್ತು ಎಸ್‌ಡಬುÉ éಸಿ ಸೆಂಟರ್‌ನಲ್ಲಿ 212 ಡೋಸ್ ನೀಡಲಾಗಿದೆ.
ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆ ಯಿದ್ದು, ಪ್ರಸ್ತುತ ಲಸಿಕೆಗಳ ಕಡಿಮೆ ಪೂರೈಕೆ ಯೊಂದಿಗೆ ಒಂದು ನಿರ್ದಿಷ್ಟ ದಿನಕ್ಕೆ ನಿಗದಿ ಪಡಿಸಿದ ಎಲ್ಲ ಪ್ರಮಾಣಗಳನ್ನು ನಾವು ಬಳಸಿಕೊಳ್ಳುವುದಿಲ್ಲ ಎಂದು ಜಿ-ನಾರ್ತ್ ವಾರ್ಡ್‌ನ ಸಹಾಯಕ ಆಯುಕ್ತ ಕಿರಣ್ ದಿಘವ್ಕರ್ ತಿಳಿಸಿದ್ದಾರೆ.
ದೊಡ್ಡ ಅಭಿಯಾನದ ಅಗತ್ಯ:
ಪ್ರದೇಶದ ಜನರಲ್ಲಿ ಲಸಿಕೆಯ ಬಗ್ಗೆ ಹಿಂಜರಿಕೆ ಇದೆ. ಸ್ಥಳೀಯ ಸರಕಾರೇತರ ಸಂಸ್ಥೆಗಳ ಮೂಲಕ ಜನರನ್ನು ತಲುಪಿ, ಲಸಿಕೆ ಹಾಕುವಂತೆ ಒತ್ತಾಯಿಸುತ್ತೇವೆ. ಲಸಿಕೆಗಳನ್ನು ತೆಗೆದುಕೊಂಡರೂ ಸಾವಿನ ಸಾಧ್ಯತೆಯಿದೆ ಎಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ. ಲಸಿಕೆಗಳು ಸಾವಿಗೆ ಕಾರಣವಾಗಬಹುದು ಎಂದೂ ಹಲವರು ನಂಬುತ್ತಾರೆ. ಲಸಿಕೆ ಹಾಕಲು ಜನರನ್ನು ಪ್ರೋತ್ಸಾಹಿಸಲು ನಮಗೆ ದೊಡ್ಡ ಅಭಿಯಾನದ ಅಗತ್ಯವಿದೆ ಎಂದು ಧಾರಾವಿ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಸಿದ್ಧಾರ್ಥ್ ಮೇಧೆ ತಿಳಿಸಿದ್ದಾರೆ.
ಜಿ-ನಾರ್ತ್‌ನಲ್ಲಿ ಧಾರಾವಿಗೆ ಎರಡನೇ ಸ್ಥಾನ:
ಜಿ-ನಾರ್ತ್ ವಾರ್ಡ್ ವ್ಯಾಪ್ತಿಯಲ್ಲಿ ಧಾರಾವಿ, ದಾದರ್ ಮತ್ತು ಮಹೀಮ್ ಅನ್ನು ಹೊಂದಿದೆ. ವಾರ್ಡ್‌ನಲ್ಲಿ ವ್ಯಾಕ್ಸಿನೇಶನ್ ಅಂಕಿಅಂಶಗಳ ವಿಷಯದಲ್ಲಿ ಧಾರಾವಿ ಎರಡನೇ ಸ್ಥಾನದಲ್ಲಿದೆ. ಮಾ. 1ರಿಂದ ಮಹೀಮ್ ಅನ್ನು ಮೂರು ವ್ಯಾಕ್ಸಿನೇಶನ್ ಕೇಂದ್ರಗಳು 40,681 ಡೋಸ್‌ಗಳನ್ನು ನೀಡಿದರೆ, ಧಾರಾವಿಯಲ್ಲಿ 20,504 ಡೋಸ್‌ಗಳನ್ನು ನೀಡಲಾಗಿದೆ. ದಾದರ್ 13,355 ಡೋಸ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಧಾರಾವಿ 20 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ಚೇತರಿಕೆ ಪ್ರಮಾಣವು ಶೇ. 94.46ರಷ್ಟಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಈ ಪ್ರದೇಶದಲ್ಲಿ ಒಟ್ಟು 6,844 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 6,464 ಮಂದಿ ಚೇತರಿಸಿಕೊಂಡಿದ್ದು, 359 ಮಂದಿ ಸಾವನ್ನಪ್ಪಿದ್ದಾರೆ.
ಧಾರಾವಿಯಲ್ಲಿ ಲಸಿಕೆ ಅಭಿಯಾನದ ನಿಧಾನಗತಿ ಆತಂಕಕ್ಕೆ ಕಾರಣವಾಗಿದೆ. ಎಪ್ರಿಲ್‌ನಲ್ಲಿ ನಾವು ಜನರನ್ನು ಪ್ರೋತ್ಸಾಹಿಸಲು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸಿದ್ದೇವೆ. ಅದು ನಮಗೆ ಉತ್ತಮ ಫಲಿತಾಂಶಗಳನ್ನು ನೀಡಿತು. ಆದರೆ ಈಗ ಮತ್ತೆ ಪ್ರತಿಕ್ರಿಯೆ ಕಳಪೆಯಾಗಿದೆ. ಮನೆ ಮನೆ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇದು ಲಸಿಕೆ ಪಡೆಯಲು ನಾಗರಿಕರನ್ನು ಪ್ರೇರೇಪಿಸಲಿದೆ.–ಕಿರಣ್ ದಿಘವ್ಕರ್ ಸಹಾಯಕ ಆಯುಕ್ತರು, ಜಿ-ನಾರ್ತ್ ವಾರ್ಡ್
ಧಾರಾವಿಯಲ್ಲಿ ವ್ಯಾಕ್ಸಿನೇಶನ್ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಲಸಿಕೆ ಪ್ರಮಾಣಗಳಿಲ್ಲ ಎಂದು ಹಲವರ ಊಹನೆ. ಆದರೆ ವಾಸ್ತವದಲ್ಲಿ ಒದಗಿಸಲಾಗುತ್ತಿರುವ ಪ್ರಮಾಣಗಳೇ ಬಳಕೆಯಾಗುತ್ತಿಲ್ಲ.–ಬಬ್ಬು ಖಾನ್ ನಗರ ಸೇವಕರು, ವಾರ್ಡ್ ನಂಬರ್ 184