Advertisement

ಸುವರ್ಣಸೌಧ ಪಕ್ಕದಲ್ಲೇ ಹಾಹಾಕಾರ!

04:46 PM Dec 17, 2018 | |

ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಸುವರ್ಣ ವಿಧಾನಸೌಧದಲ್ಲಿ ಚಳಗಾಲ ಅಧಿವೇಶನ ನಡೆಯುತ್ತಿದ್ದರೆ, ಅದರ ಕೂಗಳತೆಯಲ್ಲಿರುವ ಬಸ್ತವಾಡ ಹಾಗೂ ಹಲಗಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಡಕಲ್‌ ಜಲಾಶಯದಿಂದ ಸುವರ್ಣಸೌಧಕ್ಕೆ ಅಳವಡಿಸಿರುವ ನೀರಿನ ಪೈಪ್‌ ಲೈನ್‌ನ್ನು ಹಲಗಾ ಹಾಗೂ ಬಸ್ತವಾಡ ಗ್ರಾಮಕ್ಕೆ ಅಳವಡಿಸುವಂತೆ ಇಲ್ಲಿನ ಗ್ರಾಮಸ್ಥರು ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಎರಡು ದಿನಕೊಮ್ಮೆ ಬರುವ ನೀರು ಇಲ್ಲಿನ ಜನರಿಗೆ ಸಾಕಾಗುತ್ತಿಲ್ಲ.

Advertisement

ಅಲ್ಲದೇ ಇಲ್ಲಿನ ಗ್ರಾಮಸ್ಥರು ಪರ್ಯಾಯವಾಗಿ ನಿತ್ಯ ತಮ್ಮ ಜಮೀನುಗಳಿಗೆ ತೆರಳಿ ಬಾವಿಗಳಿಂದ ನೀರನ್ನು ಸೈಕಲ್‌ ಮೂಲಕ ತರುವ ಪರಿಸ್ಥಿತಿ ಎದುರಾಗಿದೆ. ಹಲಗಾ ಹಾಗೂ ಬಸ್ತವಾಡ ಗ್ರಾಮಗಳಲ್ಲಿ ಒಂದು ಓಣಿಯಲ್ಲಿ ರಸ್ತೆಯಾದರೆ ಇನ್ನೊಂದೆಡೆ ರಸ್ತೆ ಕಾಮಗಾರಿ ನಡೆದಿಲ್ಲ. ದ್ವಿಚಕ್ರ ವಾಹನ ಸವಾರರು ಹಾಗೂ ರೈತರು ನಿತ್ಯ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ಹಿಡಕಲ್‌ದಿಂದ ಸುವರ್ಣವಿಧಾನ ಸೌಧಕ್ಕೆ ಅಳವಡಿಸಿದ ನೀರಿನ ಪೈಪ್‌ಲೈನ್‌ ಹಲಗಾ ಹಾಗೂ ಬಸ್ತವಾಡ ಗ್ರಾಮಕ್ಕೆ ಅಳವಡಿಸುವಂತೆ ಈ ಅಧಿವೇಶದಲ್ಲಿ ಚರ್ಚಿಸಲಾಗುವುದು.
.  ಲಕ್ಷ್ಮೀ ಹೆಬ್ಟಾಳಕರ, ಬೆಳಗಾವಿ ಗ್ರಾಮೀಣ ಶಾಸಕಿ 

ಹಲಗಾ ಗ್ರಾಮದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ನಿತ್ಯ ಇಲ್ಲಿನ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಹಿಡಕಲ್‌ ಡ್ಯಾಂನಿಂದ ಸುವರ್ಣ ವಿಧಾನಸೌಧಕ್ಕೆ ನೀರಿನ ಪೈಪ್‌ಲೈನ್‌ ಮಾಡಲಾಗಿದೆ. ಆದೇ ಪೈಪ್‌ಲೈನ್‌ನ್ನು ನಮ್ಮ ಗ್ರಾಮಕ್ಕೆ ಜೋಡಿಸಿದರೆ ನೀರಿನ ಸಮಸ್ಯೆ ಹೋಗಲಾಡಿಸಬಹುದು. 
.ಚಂಪವ್ವ ದೇಸಾಯಿ, ಹಲಗಾ ಗ್ರಾಮಸ್ಥೆ

ಹಿಡಕಲ್‌ದಿಂದ ಸುವರ್ಣ ವಿಧಾನಸೌಧಕ್ಕೆ ಅಳವಡಿರುವ ನೀರಿನ ಪೈಪ್‌ಲೈನ್‌ನ್ನು ಬಸ್ತವಾಡ ಗ್ರಾಮಕ್ಕೆ ಅಳವಡಿಸುವಂತೆ ಹಾಗೂ ರಸ್ತೆ ದುರಸ್ತಿ ಮಾಡುವಂತೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. 
. ತವನಪ್ಪ ಪಾಟ್ನೆ, ಬಸ್ತವಾಡ ಗ್ರಾಮಸ್ಥ

Advertisement

ಅಜಿತ ಶಿರಗಾಪುರ 

Advertisement

Udayavani is now on Telegram. Click here to join our channel and stay updated with the latest news.

Next