ಕಾಳಗಿ: ಭಾರತೀಯ ಜನತಾ ಪಕ್ಷದಲ್ಲಿ ಹಳೆ ಹಾಗೂ ಹೊಸ ಕಾರ್ಯಕರ್ತರೆಂಬ ಬೇಧ ಭಾವವಿಲ್ಲ, ಎಲ್ಲರನ್ನು ಸಮಾನವಾಗಿ ಕರೆದುಕೊಂಡು ಹೋಗಲಾಗುತ್ತದೆ ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಹೇಳಿದರು.
ತಾಲೂಕಿನ ಭೆಸಡೂರ (ಎಂ) ತಾಂಡಾದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು, ಬಿಜೆಪಿ ಸೇರ್ಪಡೆಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.
ತಮ್ಮ ಸ್ವಗ್ರಾಮ ಭೆಡಸೂರ (ಎಂ) ತಾಂಡಾದಲ್ಲಿ ಹಳೆ ಕಾರ್ಯಕರ್ತರು ಹಾಗೂ ತಮ್ಮಿಂದ ಬೇರೆಯಾದವರು ಚಿಂಚೋಳಿ ಮತಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದು ಸಂತಸ ತಂದಿದೆ. ಇನ್ಮುಂದೆ ತಿಂಗಳಿಗೆ ಒಂದು ದಿನ ಭೆಡಸೂರ(ಎಂ) ತಾಂಡಾದಲ್ಲಿ ವಾಸ್ತವ್ಯ ಮಾಡಿ ಕಾರ್ಯಕರ್ತ ಸಮಸ್ಯೆ ಆಲಿಸಿ, ಸರ್ಕಾರದ ಯೋಜನೆಗಳ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪುವಂತೆ ಮಾಡಬೇಕು ಎಂದು ಕರೆ ನೀಡಿದರು.
ರೇವಗ್ಗಿ ಗ್ರಾಮದ ಅಜೀಮ್ ಪಟೇಲ್, ಅರಣಕಲ್ ಗ್ರಾಮದ ಮಲಕಣ್ಣ ಸಾಸರಗಾಂವ್, ಪಂಗರಗಾದ ಸಿದ್ಧು ಪಾಟೀಲ, ಚಿಂಚೋಳಿ (ಎಚ್) ಗ್ರಾಮದ ಲಕ್ಷ್ಮಣ ಮಾರನ ಹಾಗೂ ಗೋಣಗಿ, ಚೇಂಗಟಾ ಗ್ರಾಮದ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ ಬಿಜೆಪಿ ಸೇರ್ಪಡೆಯಾದವರಿಗೆ ಪಕ್ಷದ ಶಾಲು, ಧ್ವಜ ನೀಡಿ ಸ್ವಾಗತಿಸಿದರು. ತಾಪಂ ಮಾಜಿ ಅಧ್ಯಕ್ಷ ರೇವಣಸಿದ್ಧಪ್ಪ ಮಾಸ್ಟರ್, ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರ, ಶಿವರಾಜ ಪಾಟೀಲ ಗೊಣಗಿ, ಉಮೇಶ ಸಿ.ಎ, ರಾಜು ಪಿ. ಜಾಧವ, ಇಮಿ¤ಯಾಜ ಅಲಿ ಹೇರೂರ, ಸಂಜುಕುಮಾರ ತೆಳಮನಿ, ಶಿವರಾಜ ಪಾಟೀಲ, ರಾಮು ರಾಠೊಡ, ರೇವಣಸಿದ್ಧ ಬಡಾ, ಸಿದ್ಧು ಮಾನಕರ, ಮಾರುತಿ ಜಾಧವ, ಮಾರುತಿ ಜಮಾದರ ಇನ್ನಿತರರು ಇದ್ದರು.