Advertisement

ಎಂ.ಎಸ್.ಧೋನಿ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲ: ಶ್ರೀನಿವಾಸನ್

03:25 PM Oct 19, 2021 | Team Udayavani |

ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಮುಗಿದಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಚಾಂಪಿಯನ್ ಪಟ್ಟಕ್ಕೇರಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಧೋನಿ ಐಪಿಎಲ್ ನಲ್ಲಿ ಮುಂದುವರಿಯುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

Advertisement

ಫೈನಲ್ ಪಂದ್ಯದಲ್ಲೂ ಧೋನಿ ತಮ್ಮ ಐಪಿಎಲ್ ಭವಿಷ್ಯದ ಕುರಿತು ಖಚಿತ ಮಾತುಗಳನ್ನಾಡಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲಿಕ ಶ್ರೀನಿವಾಸನ್ ಈ ಬಗ್ಗೆ ಮಾತನಾಡಿದ್ದು, ಎಂ.ಎಸ್.ಧೋನಿ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ:ಹೊಸ ಗೆಟಪ್‌ಗೆ ಪುನೀತ್‌ ರೆಡಿ: ಜೇಮ್ಸ್‌ ಹಾಡಿನಲ್ಲಿ ನ್ಯೂಲುಕ್‌

“ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಮತ್ತು ತಮಿಳುನಾಡಿನ ಅವಿಭಾಜ್ಯ ಅಂಗ. ಧೋನಿ ಇಲ್ಲದ ಸಿಎಸ್ ಕೆ ಇಲ್ಲ. ಸಿಎಸ್ ಕೆ ಇಲ್ಲದ ಧೋನಿ ಇಲ್ಲ” ಎಂದು ಚೆನ್ನೈನ ವೆಂಕಟಾಚಲಪತಿ ದೇವಸ್ಥಾನದಲ್ಲಿ ಶ್ರೀನಿವಾಸನ್ ಸುದ್ದಿಗಾರರೊಂದಿಗೆ ಹೇಳಿದರು.

ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಗೆದ್ದ ಸಿಎಸ್ ಕೆ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೊದಲು 2010, 2011 ಮತ್ತು 2018ರಲ್ಲಿ ಚಾಂಪಿಯನ್ ಆಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next