Advertisement

ಕೆರೆಯ ಜೀರ್ಣೋದ್ಧಾರಕ್ಕೆ ಸಮಗ್ರ ಯೋಜನೆಯಿಲ್ಲ

12:56 PM Feb 23, 2018 | Team Udayavani |

ಬೆಂಗಳೂರು: ಬೆಂಕಿ ಹಾಗು ನೊರೆ ಸಮಸ್ಯೆಯಿಂದ ದೇಶದ ಗಮನ ಸೆಳೆದಿರುವ ಬೆಳಂದೂರು ಕೆರೆಯ ಪುನರುಜ್ಜೀವನದ ಜವಾಬ್ದಾರಿ ವಹಿಸಿಕೊಂಡಿರುವ ಬಿಡಿಎ ಕೆರೆಯ ಜೀರ್ಣೋದ್ಧಾರಕ್ಕೆ ಯಾವುದೇ ಸಮಗ್ರ ಯೋಜನೆಯನ್ನು ರೂಪಿಸಿರಲಿಲ್ಲವೆಂದು ಸಿಎಜಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

Advertisement

ಕಳೆದ ವರ್ಷ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವಲಯದ ಲೆಕ್ಕಪರಿಶೋಧನಾ ವರದಿಯಲ್ಲಿ ಮಹಾಲೇಖಪಾಲರು ಬೆಳಂದೂರು ಕೆರೆ ಮತ್ತು ವರ್ತೂರು ಕೆರೆ ಸಿತಿ§ಗತಿ ಬಗ್ಗೆ ಬಗ್ಗೆ ಪ್ರಸ್ಥಾಪಿಸಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಕೆರೆಯನ್ನು ಸರ್ಕಾರ ಬಿಡಿಎಗೆ ಕೆರೆಯ ಜೀರ್ಣೋದ್ಧಾರಕ್ಕಾಗಿ ವರ್ಗಾಯಿಸಿತು.

ಆದರೆ  ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ಕೆರೆಗೆ 3.31 ಕೋಟಿ ರೂ. ವೆಚ್ಚದಲ್ಲಿ ಬೇಲಿ ಹಾಕುವುದನ್ನು ಹೊರತುಪಡಿಸಿದರೆ ಕೆರೆಯ ಅಭಿವೃದ್ಧಿ ಮತ್ತು ಮಾಲಿನ್ಯವನ್ನು  ತಡೆಗಟ್ಟುವ ಕುರಿತು ಸಮಗ್ರ ವರದಿಯನ್ನು ಸಿದ್ದಪಡಿಸಿರಲಿಲ್ಲವೆಂದು ಸಿಎಜಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next