ಮಂಡ್ಯ: ತೀವ್ರ ವಿವಾದಕ್ಕೆ ಗುರಿಯಾಗಿದ್ದ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯಸರ್ಕಾರ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮಾತ್ರ ಖಾಸಗಿಯವರಿಗೆ ವಹಿಸಲು ನಿರ್ಧರಿಸಿದೆ. ಇಡೀ ಕಂಪನಿಯ ಮಾಲೀಕತ್ವವನ್ನು ರಾಜ್ಯಸ ರ್ಕಾರದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿ ದ್ದು, ಸಂಪೂರ್ಣವಾಗಿ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಮಾಡಿಲ್ಲವೆಂದು ಖಚಿತ ಮೂಲಗಳು ತಿಳಿಸಿವೆ.
ಪುನಶ್ಚೇತನಕ್ಕೆ ನಿರ್ಧಾರ: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕಂಪನಿ ವಿಚಾರವನ್ನು ಚರ್ಚೆಗೆ ತರಲು ಅಧಿಕಾರಿಗಳಿಗೆ ಮುಖ್ಯಮಂತಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನಷ್ಟೇ ಖಾಸಗಿ ಯವರಿಗೆ ವಹಿಸಿ ಮೈಷುಗರ್ ಕಾರ್ಖಾ ನೆಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸ ಲಾಗಿದೆ. ಕಂಪನಿಯ ಮಾಲೀಕತ್ವ ಸರ್ಕಾರದ ಬಳಿಯೇ ಇರಲಿದೆ ಎನ್ನಲಾಗಿದೆ. ಮೈಷುಗರ್ ಖಾಸಗೀಕರಣಗೊಳಿಸಲು ರಾಜ್ಯಸರ್ಕಾರ ಈ ಮೊದಲು ನಿರ್ಧಾರ ಕೈಗೊಂಡಿತ್ತು. ಎಲ್ಲ ಸರ್ಕಾರಗಳು ಕಾರ್ಖಾನೆ ಅಭಿವೃದಿಟಛಿಗೆ 350 ಕೋಟಿ ರೂ.ಗಿಂತ ಹೆಚ್ಚು ಹಣ ನೀಡಿದ್ದರೂ ಇದುವರೆಗೆ ಕಂಪನಿ ಪುನಶ್ಚೇ ತನ ಕಾಣಲಿಲ್ಲ. ಹಾಗಾಗಿ ಖಾಸಗಿಯವರಿಗೆ ವಹಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿತ್ತು.
ತೀವ್ರ ವಿರೋಧ: ರಾಜ್ಯಸರ್ಕಾರ ಕೈಗೊಂಡ ನಿರ್ಧಾರಕ್ಕೆ ಜಿಲ್ಲೆಯ ರೈತ ಮುಖಂಡರು, ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ದ್ದರು. ಮೈಷುಗರ್ ಕಂಪನಿ ಖಾಸಗೀಕರ ಣಗೊಳಿಸಿದಲ್ಲಿ ಕಾರ್ಖಾನೆಯ ಸುಮಾರು 250 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿ ಕೈಬಿಟ್ಟು ಹೋಗುವ ಆತಂಕವಿದೆ. ಕಂಪ ನಿಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ನ್ನಷ್ಟೇ ಖಾಸಗಿಯವರಿಗೆ ವಹಿಸಿ ಕಾರ್ಖಾ ನೆಯ ಮಾಲೀಕತ್ವ ಸರ್ಕಾರದ ಬಳಿಯೇ ಇರಬೇಕು ಎಂದು ಒತ್ತಾಯಿಸಿದ್ದರು.
ರೈತರ ಅನುಕೂಲಕ್ಕಾಗಿ: ಮೈಷುಗರ್ ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವನ್ನು ಸಂಸದೆ ಸುಮಲತಾ ಹಾಗೂ ಕೆಲ ಕಬ್ಬುಬೆಳೆಗಾರರು ಬೆಂಬಲಿಸಿದ್ದರು. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ ಸಕಾಲದಲ್ಲಿ ಕಬ್ಬು ಅರೆಯುವಂತಾದರೆ ರೈತರಿಗೆ ಹೆಚ್ಚು ಅನು ಕೂಲವಾಗಲಿದೆ. ಹಾಗಾಗಿ ಕಂಪನಿ ಯನ್ನು ಖಾಸಗೀಕರಣಗೊಳಿಸಲು ಬೆಂಬಲಿಸಿದ್ದರು.
ಕಬ್ಬು ಸಾಗಣೆ ವೆಚ್ಚ ಅಧಿಕ: ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆ ಸ್ಥಗಿತ ಗೊಂಡಿದ್ದರಿಂದ ಈ ವ್ಯಾಪ್ತಿಯ ಕಬ್ಬನ್ನು ಹೊರಗಿನ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವು ದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ನೆರೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಕಬ್ಬು ಸಾಗಣೆ ವೆಚ್ಚ ಹೆಚ್ಚಿದ್ದು, ಸರ್ಕಾರ ಅದನ್ನು ಭರಿಸಲಾಗದ ಸ್ಥಿತಿಯಲ್ಲಿದೆ. ಕಳೆದ ವರ್ಷದ ಕಬ್ಬು ಸಾಗಣೆ ವೆಚ್ಚ 4.50 ಕೋಟಿ ರೂ. ಹಣವನ್ನು ಬೆಳೆಗಾರರಿಗೆ ಸರ್ಕಾರ ನೀಡದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಈ ಎರಡೂ ಕಾರ್ಖಾನೆಗಳ ಕಾರ್ಯಾರಂಭ ತುರ್ತು ಅಗತ್ಯ, ಅನಿವಾರ್ಯವಾಗಿದೆ.