Advertisement
ಇಲ್ಲಿ ಹಿಡಿ ಉಪ್ಪು ತರಬೇಕಿದ್ದರೂ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ತೆರಳಬೇಕು. ಚಿಮಿಣಿ ದೀಪಗಳೇ ಗತಿ. ವಾಸಕ್ಕೆ ಪ್ಲಾಸ್ಟಿಕ್ ಹೊದಿಕೆಯ ಮನೆಗಳು. ವಾಹನ ಸಂಪರ್ಕವೂ ಇಲ್ಲದ ಈ ಊರಿನಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ನಗರಕ್ಕೆ ಹೊತ್ತೂಯ್ಯಬೇಕು. ಗರ್ಭಿಣಿಯರು ಪ್ರಸವಕ್ಕೂ ಕೆಲವು ತಿಂಗಳು ಮೊದಲೇ ಊರು ತೊರೆಯಬೇಕು.
Related Articles
Advertisement
998 ಕುಟುಂಬಬಳ್ಪ ಗ್ರಾಮದಲ್ಲಿ 998 ಕುಟುಂಬಗಳಿವೆ. ಪ.ಜಾತಿ ಮತ್ತು ಪಂಗಡಗಳ 8 ಕಾಲನಿಗಳಿವೆ. ಕೃಷಿ ಅವಲಂಬಿಸಿರು ವವರು, ಕೂಲಿ ಕಾರ್ಮಿಕರೇ ಅಧಿಕ. ಹಲವು ಮನೆಗಳಿಗೆ ಇಂದಿಗೂ ಪ್ಲಾಸ್ಟಿಕ್ ಹೊದಿಕೆಯೇ ಛಾವಣಿ. 46 ಮನೆಗಳಿಗೆ ಶೌಚಾಲಯ ಇಲ್ಲ. ವಿದ್ಯುತ್ ಇದ್ದರೂ ಹೆಸರಿಗಷ್ಟೇ; ಬಳಕೆಗೆ ಸಿಗುವುದು ಕೆಲವೇ ತಾಸು. ಬಿಎಸ್ಸೆನ್ನೆಲ್ ಮೊಬೈಲ್ ಟವರ್ ಇದ್ದರೂ ಸ್ತಬ್ಧ. ವೈದ್ಯಕೀಯ ಸೇವೆ ಬೇಕಿದ್ದರೆ 30 ಕಿ.ಮೀ. ದೂರದ ಸುಳ್ಯ ಅಥವಾ 60 ಕಿ.ಮೀ. ದೂರದ ಪುತ್ತೂರಿಗೆ ತೆರಳಬೇಕು. ನಡುರಾತ್ರಿ ಅನಾರೋಗ್ಯ ಕಾಣಿಸಿಕೊಂಡರೆ ಕಷ್ಟ ಹೇಳತೀರದು. ಪ್ರಸವದ ಸಮಯ ತಾಯಿ ಮನೆಗೆ ಬರುವ ಗರ್ಭಿಣಿಯರು ಹೆರಿಗೆಗೆ ಸಾಕಷ್ಟು ದಿನಗಳ ಮುನ್ನವೇ ಊರು ತೊರೆದು ಅನ್ಯರ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ರಸ್ತೆ ಸರಿ ಇಲ್ಲವೆಂಬ ಕಾರಣಕ್ಕೆ ಕಾಂಜಿ ಎಂಬಲ್ಲಿನ ಗರ್ಭಿಣಿ ಯರಿಬ್ಬರು ತವರಿಗೆ ಬರಲು ಹಿಂದೇಟು ಹಾಕಿದ್ದರು. ಬಳ್ಪ ಸಂಸದರ ಆದರ್ಶ ಗ್ರಾಮ ವೆಂದು ಆಯ್ಕೆ ಯಾ ದಾಗ ಊರು ಅಭಿವೃದ್ಧಿಯಾಗ ಬಹು ದೆಂದು ನಿರೀಕ್ಷಿಸಲಾಗಿತ್ತು. ಆಶ್ವಾಸನೆ ಗಳು ಭರ ವಸೆ ಗಳಾಗಿಯೇ ಉಳಿದಿವೆ. ಮನೆ ಪಕ್ಕದ ನಿವಾಸಿ ಯೊಬ್ಬರು ಕಾಯಿಲೆಯಿಂದ ಬಳಲಿ ದಾಗ ಅವರನ್ನು ನಾವೇ ಹೊತ್ತು ಆಸ್ಪತ್ರೆಗೆ ಸಾಗಿ ಸಿದ್ದೇವೆ.
– ತುಳಸಿ ಪೂಜಾರಿ, ಸ್ಥಳೀಯರು ಸಮಸ್ಯೆಯ ವಿಚಾರ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಈಗಷ್ಟೇ ಅರಿವಿಗೆ ಬಂದಿದೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
– ಎಸ್. ಅಂಗಾರ, ಶಾಸಕರು, ಸುಳ್ಯ.