Advertisement

ಮಾರಣಾಂತಿಕ ಕೋವಿಡ್ ವೈರಸ್ ಚೀನಾದ ಲ್ಯಾಬ್‌ ಸೃಷ್ಟಿ ಎಂಬುದಕ್ಕೆ ಆಧಾರವಿಲ್ಲ

11:12 AM Apr 17, 2020 | Hari Prasad |

ಬೀಜಿಂಗ್: ಕೋವಿಡ್ ವೈರಸ್ ನ ಮೂಲ ಯಾವುದು ಎಂಬ ವಿಚಾರದಲ್ಲಿ ಅಮೆರಿಕ ಮತ್ತು ಚೀನ ನಡುವಿನ ವಾಕ್ಸಮರ ಮುಂದುವರಿದಿದೆ.

Advertisement

ವುಹಾನ್‌ನ ಪ್ರಯೋಗಾಲಯದಲ್ಲೇ ಕೋವಿಡ್ ವೈರಸ್‌ ಅನ್ನು ಸೃಷ್ಟಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿ ಅಮೆರಿಕವು ತನಿಖೆ ಆರಂಭಿಸಿದೆ ಎಂದು ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ.

ಜತೆಗೆ, ಈ ವಿಚಾರದಲ್ಲಿ ಚೀನಾ ಶುದ್ಧ ಹಸ್ತರೆಂದು ಸಾಬೀತುಪಡಿಸಲಿ ಎಂದು ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೋಂಪೊ ಗುಡುಗಿದ್ದಾರೆ.

ಅಮೆರಿಕದ ಆರೋಪಕ್ಕೆ ಸಂಬಂಧಿಸಿ ಗುರುವಾರ ಪ್ರತಿಕ್ರಿಯೆ ನೀಡಿರುವ ಚೀನ, ಕೋವಿಡ್ 19 ವೈರಸ್‌ ಅನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಇಂಥ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next