Advertisement
ಪ್ರತಿದಿನವೂ ಕೂಡ್ಲೂರು ಕೆರೆ ಏರಿಯ ಮೇಲೆ ಸಾವಿರಾರು ಮಂದಿ ಸಂಚರಿಸುತ್ತಾರೆ. ಈ ಮಾರ್ಗವಾಗಿ ಶಾಲಾ ವಾಹನ, ಗಾರ್ಮೆಂಟ್ಸ್ ವಾಹನಗಳು ಹೀಗೆ ಹಲವಾರು ದೊಡ್ಡ ದೊಡ್ಡ ವಾಹನಗಳು ಸಂಚಾರ ಮಾಡುತ್ತವೆ. ಕೂಡ್ಲೂರು ಕೆರೆಯ ಏರಿ ಉದ್ದಕ್ಕೂ ಯಾವುದೇ ರೀತಿಯ ತಡೆಗೋಡೆ ಇಲ್ಲ ಏರಿಯ ರಸ್ತೆಯು ಬಹಳ ಕಿರಿದಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
Related Articles
Advertisement
ಸುತ್ತಲೂ ಬೇಲಿ ಬೆಳೆದುಕೊಂಡಿದೆ: ಕೂಡ್ಲೂರು ಕೆರೆ ಏರಿ ಮೇಲೆ ಸುತ್ತಲೂ ಬೇಲಿ ಬೆಳೆದುಕೊಂಡು ಅದು ರಸ್ತೆ ಉದ್ದಕ್ಕೂ ಹರಡಿಕೊಂಡಿದೆ. ಇದರಿಂದಎದುರುಗಡೆ ಬರುವ ವಾಹನ ಸರಿಯಾಗಿಕಾಣುವುದಿಲ್ಲ. ರಾತ್ರಿ ವೇಳೆ ಸಂಚರಿಸುವ ವಾಹನಸವಾರರಿಗೆ ಇದು ಬಹಳವಾಗಿ ಕಾಡುತ್ತಿದೆ.
ಅನೈರ್ಮಲ್ಯದ ಗೂಡಾದ ಕೆರೆ: ತಾಲೂಕಿನ ತ್ಯಾಜ್ಯವಸ್ತುಗಳನ್ನು ಡ್ರೈನೇಜ್ ನೀರನ್ನು ಕೆರೆಗೆಬಿಟ್ಟಿರುವುದರಿಂದ ಕೂಡ್ಲೂರು ಕೆರೆಯ ನೀರುಕಲುಷಿತಗೊಂಡಿದೆ. ಜಲಚರಗಳು ಸಾವನ್ನಪ್ಪುತ್ತಿವೆ.ಅಷ್ಟೇ ಅಲ್ಲದೆ ಕೂಡ್ಲೂರು ಕೆರೆಯ ಏರಿ ಬದಿಯಲ್ಲಿಸಾರ್ವಜನಿಕರು ಅಂಗಡಿ-ಮುಂಗಟ್ಟು ಅವರುಕೋಳಿ ತ್ಯಾಜ್ಯಗಳನ್ನು ಹಾಗೂ ಇನ್ನಿತರ ತ್ಯಾಜ್ಯ ಬಿಸಾಡಿಹೋಗುತ್ತಾರೆ. ಇದರಿಂದ ಕೆರೆ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ.
ದೇಶ-ವಿದೇಶಗಳಿಂದ ವಿಶಿಷ್ಟ ಪ್ರಭೇದದ ಪಕ್ಷಿಗಳುಕೂಡ್ಲೂರು ಕೆರೆಗೆ ವಲಸೆ ಬರುತ್ತವೆ. ಕೂಡೂÉರು ಕೆರೆಒಂದು ರೀತಿ ಪಕ್ಷಿಧಾಮದಂತೆ ಕಾಣಿಸುತ್ತದೆ. ಇಂತಹಐತಿಹಾಸಿಕ ಹಾಗೂ ನೈಸರ್ಗಿಕ ಹಿನ್ನೆಲೆಯಿರುವಕೆರೆಯನ್ನು ಸಂರಕ್ಷಿಸಬೇಕೆಂದು ಪರಿಸರ ಪ್ರೇಮಿಗಳ ಮನವಿಯಾಗಿದೆ.
ಸಾವಿರ ವರ್ಷ ಇತಿಹಾಸ ಹೊಂದಿರುವ ಕೆರೆ :
ಕೂಡ್ಲೂರು ಕೆರೆಗೆ ಸರಿ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಅಷ್ಟೇ ಅಲ್ಲದೆ ತಾಲೂಕಿನ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೂಡ್ಲೂರು ಕೆರೆಯನ್ನು ದಕ್ಷಿಣ ಭಾರತವನ್ನು ಚೋಳರು ಆಳುತ್ತಿದ್ದ ಕಾಲದಲ್ಲಿ ಚೋಳ ಸಾಮ್ರಾಜ್ಯದ ಪ್ರಸಿದ್ಧ ದೊರೆ ರಾಜರಾಜ ಚೋಳ ನಿರ್ಮಿಸಿದ್ದು, ಇದರ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ ಮತ್ತು ಮೈಸೂರು ಒಡೆಯರ ಕಾಲದಲ್ಲಿ ಹೈದರಾಲಿಯ ಗುರುಗಳಾದ ಅಖಿಲ್ ಸಾಯಿ ದರ್ಗಾ ಫಕೀರನಿಗೆ ಈ ಕೆರೆಯನ್ನು ಇನಾಮ್ ಕೊಟ್ಟರೆಂಬ ಉಲ್ಲೇಖವು ಸಹ ಶಾಸನದಲ್ಲಿದೆ.
-ಎಂ.ಶಿವಮಾದು