Advertisement
ಮುಂಬೈನಲ್ಲಿ ತಮ್ಮ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಣದ ಹೊಸ ಕಚೇರಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪವಾರ್, ಮೋದಿ ನಾಯಕತ್ವದಲ್ಲಿ ದೇಶವು ‘ಮುಂದೆ ಸಾಗುತ್ತಿದೆ’ ಎಂದು ಹೇಳಿದರು.
Related Articles
Advertisement
“ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಅಸಮಾಧಾನದ ಪ್ರಶ್ನೆಯೇ ಇಲ್ಲ” ಎಂದರು.
ಭಾನುವಾರ ಅಜಿತ್ ಪವಾರ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಇತರ ಎಂಟು ಶಾಸಕರು ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ-ಶಿವಸೇನೆ ಸರ್ಕಾರಕ್ಕೆ ಸೇರ್ಪಡೆಗೊಂಡರು. ಇದಾದ ನಂತರ, ಶರದ್ ಪವಾರ್ ಅವರು ಪಕ್ಷದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸುನೀಲ್ ತಟ್ಕರೆ ಅವರನ್ನು ಸೋಮವಾರ ವಜಾಗೊಳಿಸಿದ್ದಾರೆ.