ಚೇಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅನೇಕ ಜನಪರ ಕಾರ್ಯ ಮಾಡಿ ನುಡಿದಂತೆ ಮಾಡಿರುವ ಕಾಂಗ್ರೆಸ್ ಸರ್ಕಾರವಾಗಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಯಾವುದೇ ರೀತಿಯಿಂದ ಜನಸಮಾನ್ಯರಿಗೆ ಅನುಕೂಲವನ್ನು ಮಾಡುತ್ತಿಲ್ಲ. ಅದರಲ್ಲೂ ರೈತರಿಗೆ ಯಾವುದೇ ಅನುಕೂಲವನ್ನು ಸಹ ಮಾಡಿಲ್ಲ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ ಹೇಳಿದರು.
ಇವರು ಚೇಳೂರು ಹೋಬಳಿಯ ಸೂಲ್ಯನಪಾಳ್ಯದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತಾನಾಡಿ, ರಾಜ್ಯದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜನಪರ ಕೆಲಸಗಳ ಬಹಳಷ್ಟಿವೆ. ಅದರಲ್ಲಿ ಹಸಿವು ಮುಕ್ತವನ್ನು ಮಾಡಲು ಅನ್ನಭಾಗ್ಯ.ಮಕ್ಕಳಿಗೆ ವಿದ್ಯಾಸಿರಿ.ಪಶುಭಾಗ್ಯ, ಸೌರಭಾಗ್ಯ, ಕ್ಷೀರಭಾಗ್ಯ. ನಿರ್ಮಲಭಾಗ್ಯ. ರಾಜೀವ್ ಆರೋಗ್ಯಭಾಗ್ಯ.
ಶುದ್ದನೀರು, ರೈತರಿಗೆ ಕೃಷಿಭಾಗ್ಯ ಈಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಜೊತೆಗೆ ರೈತರ ಕೃಷಿ ಸಾಲದಲ್ಲಿ 50ಸಾವಿರ ರೂಗಳ ಸಾಲವನ್ನು ಸಹ ಮನ್ನಾ ಮಾಡಿದೆ. ಆದರೆ ಕೇಂದ್ರದಲ್ಲಿರುವ ಸರ್ಕಾರ ರೈತರ ಪರ ಎಂದು ಮಾತಾನಾಡುತ್ತಿರುವ ನಮ್ಮ ರಾಜ್ಯದ ಬಿಜೆಪಿ ನಾಯಕರು ರೈತರ ಸಾಲವನ್ನು ಮನ್ನಾ ಏಕೆ ಮಾಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಒಮ್ಮತದ ಕೆಲಸ: ಮಾಜಿ ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಾನಂದ ಮಾತನಾಡಿ, ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಬದಲಾವಣೆಯಾಗ ಬೇಕಾಗಿದೆ ಎಂದು ಸಾರ್ವಜನಿಕರಲ್ಲಿಯೇ ಮೂಡಿದೆ.ಅದು ಸಹ ಕಾಂಗ್ರಸ್‌ನಿಂದ ಮಾತ್ರ ಸಾಧ್ಯ ಎಂದು ಸಾರ್ವಜನಿಕರ ಅಭಿಪ್ರಾಯವು ಸಹ ಅಗಿದೆ. ಅತಂಹ ಅಭ್ಯರ್ಥಿಯನ್ನೆ ಈ ಬಾರಿ ಗುಬ್ಬಿ ಕ್ಷೇತ್ರದಿಂದ ಕಣಕ್ಕೆ ಇಳಿಸುತ್ತದೆ ಕಾಂಗ್ರೆಸ್ ಪಕ್ಷ. ಅದಕ್ಕೆ ನಮ್ಮ ಕಾರ್ಯಕರ್ತರು ಒಮ್ಮತದಿಂದ ಸಕ್ರಿಯಾವಾಗಿ ಕೆಲಸ ಮಾಡಬೇಕಿದೆ ಎಂದರು.
ಶ್ರಮ: ನೂತಾನವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಾಲಾಜಿ ಸೇವಾ ಟ್ರಸ್ಟಿನ ಅಧ್ಯಕ್ಷ ಡಾ,ಕೆ.ಕುಮಾರ್, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಯಾವುದೇ ಜನಪರ ಕೆಲಸವನ್ನು ಮಾಡುವ ಯಾವ ಲಕ್ಷಣ ಕಾಣುತ್ತಿಲ್ಲ. ಕಾಂಗ್ರೆಸ್ಸಿನಲ್ಲಿರುವ ಉತ್ತಮ ಮುಖಂಡರು ಮತ್ತು ಸಿದ್ಧಾಂತಗಳನ್ನು ನೋಡಿ ಈ ರಾಷ್ಟೀಯ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡೆ. ಪಕ್ಷವನ್ನು ಒಗ್ಗೂಡಿಸಲು ಶ್ರಮವಹಿಸಿ ದುರಿಯುವುದಾಗಿ ತಿಳಿಸಿದರು.
ಗೌರವಿಸುವ ಪಕ್ಷ: ಅಕ್ಷಯ ಚಾರಿಟೆಬಲ್‌ನ° ಅಧ್ಯಕ್ಷ ಜಿ.ಎಸ್.ಪ್ರಸನ್ನಕುಮಾರ್ ಮಾತಾನಾಡಿ, ನಮ್ಮ ಪಕ್ಷವನ್ನು ಬೆಳೆಸುವರಿಗೆ ಪಕ್ಷ ಸದಾ ಗೌರವನ್ನು ಕೊಟ್ಟು ಅವರಿಗೆ ಗೌರವಿಸುವ ಪಕ್ಷವಾಗಿದೆ.ನಾವು ಮಾಡುವ ಪಕ್ಷದ ಚಟುವಟಿಕೆಗಳು ಪ್ರಮಾಣಿಕವಾಗಿದ್ದರೆ ಅದು ನಮ್ಮನ್ನು ಗುರುತಿಸಿ ಅದಕ್ಕೆ ತಕ್ಕಂತೆ ಪಕ್ಷದಲ್ಲಿ ಫಲ ಸಿಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಉಪಾಧ್ಯಕ್ಷೆ ಮರಿಚನ್ನಮ್ಮ .ಕಾರ್ಯದರ್ಶಿ ರಂಗನಾಥ್.ಕಾನೂನು ಸಲಹೆಗಾರ ಷಪಿಕ್‌ಅಹಮದ್.ಪ್ರಸನ್ನಕುಮಾರ್. ಮಾತಾನಾಡಿದರು. ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ. ಗುರುಪ್ರಸಾದ್.ಜಿ.ಎಲ್.ಗೌಡ್.ಸಿ.ಬಿ.ಗಂಗಾಧರ್.ರಂಗನಾಥ್.ರಮೇಶ್.ನರಸಿಂಹಯ್ಯ.ಶಾಂತಮ್ಮ. ಹಾಗೂ ಇತರರು ಭಾಗವಹಿಸಿದ್ದರು.