Advertisement
ಹೌದು, ಇಂತಹ ಹೃದಯ ವಿದ್ರಾವಕ ಸ್ಥಿತಿ ಉಂಟಾಗಿರುವುದು ಕಂಪದಕೈ ಗ್ರಾಮದಲ್ಲಿ. ಕಳೆದ ಮೂರು ದಿನಗಳ ಹಿಂದೆ ನಡೆದ ಹುಲಿಕಲ್ ರಸ್ತೆ ಅಪಘಾತದ ಭೀಕರ ಘಟನೆ ಖೈರಗುಂದ ಗ್ರಾಪಂ ವ್ಯಾಪ್ತಿಯ ಕಂಪದಕೈ ಗ್ರಾಮವನ್ನು ಅಕ್ಷರಶಃ ಕಂಪಿಸುವಂತೆ ಮಾಡಿದೆ. ಹುಲಿಕಲ್ ಅಪಘಾತದಲ್ಲಿ ಚಿಕ್ಕಪ್ಪ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟರೆ, ಚಿಕ್ಕಮ್ಮ ಎರಡು ಕಾಲುಗಳನ್ನು ಕಳೆದುಕೊಂಡು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Related Articles
Advertisement
ಅಪ್ಪನೂ ಇಲ್ಲ, ಅಮ್ಮನೂ ಇಲ್ಲ: ಇದು ಅಪಘಾತದಲ್ಲಿ ಮೃತಪಟ್ಟ ಮತ್ತೂಂದು ಕುಟುಂಬದ ಕಣ್ಣೀರಿನ ಕತೆ. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಹುಲಿಕಲ್ ಅಪಘಾತದಲ್ಲಿ ತಂದೆ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಶಾಲಿನಿ ಅಪಘಾತದಲ್ಲಿ ಕಾಲು ಕಳೆದುಕೊಂಡು ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಪ್ಪನನ್ನು ಕಳೆದುಕೊಂಡ 7 ನೇ ತರಗತಿಯ ಅಶ್ವಲ್, 4 ನೇ ತರಗತಿಯ ಅನೂಪ್ ಬದುಕು ದುರಂತಮಯವಾಗಿದೆ. ಅಪ್ಪನನ್ನು ಕಳೆದುಕೊಂಡ ಮಕ್ಕಳು ಅಮ್ಮ ಹುಷಾರಾಗಿ ಬರುತ್ತಾಳೆ ಎಂದು ನಿರೀಕ್ಷೆ ಹೊತ್ತಿದ್ದರು. ಆದರೆ ಆ ಮಕ್ಕಳಿಗೆ ಮತ್ತೆ ಆಘಾತ. ಅಮ್ಮ ಶಾಲಿನಿ ಚಿಕಿತ್ಸೆ ಫಲಿಸದೇ ಶವವಾಗಿ ಬಂದಿದ್ದು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಹೇಳಿ ಕೇಳಿ ಇವರದ್ದು ಕಡು ಬಡ ಕುಟುಂಬ. ಗುಡಿಸಲು ತರದ ಮನೆಯಲ್ಲಿ ವಾಸ. ಅಪ್ಪ- ಅಮ್ಮ ಇಬ್ಬರೂ ಇಲ್ಲದೆ ಮಕ್ಕಳು ಅನಾಥರಾಗಿದ್ದಾರೆ. ಹುಲಿಕಲ್ ಅಪಘಾತ ಈ ಎರಡು ಕಡು ಬಡಕುಟುಂಬಗಳನ್ನು ಅಕ್ಷರಶಃ ಬೀದಿಗೆ ತಂದಿದೆ. ಒಂದು ಕಡೆ ಬದುಕೇ ಬೇಡ ಎನಿಸಿದರೂ ಬದುಕುವುದಾರೂ ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಅಪಘಾತದಿಂದ ಈ ಎರಡೂ ಕುಟುಂಬಗಳು ಬೀದಿಗೆ ಬಿದ್ದಿವೆ. ಆ ಕುಟುಂಬವನ್ನು ಮೇಲೆತ್ತುವ ಕೆಲಸ ಆಗಬೇಕು. ಮಾನಸಿಕ, ಮತ್ತು ಆರ್ಥಿಕ ಸ್ಥೈರ್ಯ ತುಂಬಬೇಕಿದೆ. ಎಲ್ಲರ ಸಹಕಾರ ಅಗತ್ಯ. -ವಿದ್ಯಾನಂದ ರಾವ್, ಮಾಸ್ತಿಕಟ್ಟೆ
ಈ ಬಡ ತಾಯಿ ಇಂದಿರಾ. ಅನಾಥ ಮಕ್ಕಳ ಬದುಕಿಗೆ ಆರ್ಥಿಕ ಶಕ್ತಿ ಬೇಕು. ಸರ್ಕಾರ ಈ ಪ್ರಕರಣವನ್ನು ಮಾನವೀಯ ನೆಲೆ ವ್ಯಾಪ್ತಿಗೆ ತಂದು ಕೂಡಲೇ ಆರ್ಥಿಕ ಪರಿಹಾರ ಘೋಷಿಸಬೇಕು. -ಎಚ್.ಟಿ.ಅನಿಲ್ ಗೌಡ, ಮಾಸ್ತಿಕಟ್ಟೆ
-ಕುಮುದಾ ನಗರ