Advertisement
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಸಮುದ್ರದ ಅಲೆಗಳ ಏರಿಳಿತವೂ ಹೆಚ್ಚಾಗಲಿದೆ. ಹೀಗಾಗಿ ಸಮುದ್ರಕ್ಕೆ ಇಳಿದಿರುವ ಮೀನುಗಾರರು ಅ.5ರೊಳಗೆ ಹಿಂತಿರುಗಬೇಕು ಹಾಗೂ ಅ.10ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.
Related Articles
ರಾಜ್ಯದಲ್ಲಿ ನೈರುತ್ಯ ಮುಂಗಾರು ತೀವ್ರತೆ ಕಡಿಮೆಯಾದಂತೆ ಉಷ್ಣಾಂಶ ಪ್ರಮಾಣ ಏರಿಕೆಯಾಗಿದ್ದು, ಬೇಸಿಗೆಗೆ ಮೊದಲೇ ಜನರು ಬಿಸಿಲಿನ ಬೇಗೆ ಅನುಭವಿಸುವಂತಾಗಿದೆ. ವಾತಾವರಣದಲ್ಲಿನ ಉಷ್ಣಾಂಶದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.
Advertisement
ಉಷ್ಣಾಂಶ ಏರಿಕೆಯದಂತೆ ವಾತಾವರಣದಲ್ಲಿ ತೇವಾಂಶ ಹಾಗೂ ಆದ್ರತೆ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದಾಗಿ ಬೆಳಗ್ಗೆ ಉಷ್ಣಾಂಶ ಹೆಚ್ಚಾಗಿದ್ದು, ಸಂಜೆ ವೇಳೆಗೆ ಭಾರಿ ಮಳೆಯಾಗುತ್ತದೆ. ಇಂತಹ ವಾತಾವರಣದಿಂದ ಕಡಿಮೆ ತಗ್ಗು ಪ್ರದೇಶ ಹಾಗೂ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಉಷ್ಣಾಂಶಕ್ಕಿಂತ ನಾಲ್ಕದಿಂದ ಐದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದ ಅನುಭವವಾಗುತ್ತಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.